ADVERTISEMENT

ಮಾದರಿ ಪ್ರಶ್ನೋತ್ತರ

ಸಾಮಾನ್ಯ ಜ್ಞಾನ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 20:15 IST
Last Updated 1 ಫೆಬ್ರುವರಿ 2023, 20:15 IST
   

1)ಭಾರತೀಯ ಸೇನೆ ಆಧುನಿಕ ರೈಫಲ್‌ಗಳ ಕೊರತೆ ಎದುರಿಸುತಿದ್ದ ಕಾಲದಲ್ಲಿ, ಕೇಂದ್ರ ಸರ್ಕಾರ ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಇದರ ಫಲವಾಗಿ `ಇಂಡೊ ರಷ್ಯನ್ ರೈಫಲ್ ಪ್ರೈ ವೇಟ್ ಲಿಮಿಟೆಡ್’ ಸ್ಥಾಪನೆಯಾಯಿತು. ಈಗ …… ದಲ್ಲಿರುವ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಯಲ್ಲಿ ಎಕೆ-203 ಕಲಾಶ್ನಿಕೋವ್ ಅಸಾಲ್ಟ್ ರೈಫಲ್ ಉತ್ಪಾದನೆ ಶುರುವಾಗಲಿದೆ.

ಎ) ಉತ್ತರ ಪ್ರದೇಶದ ಅಮೇಠಿಯ ಕೊರ್ವಾ

ಬಿ) ತೆಲಂಗಾಣದ ಹೈದರಾಬಾದ್
ಸಿ) ಮಹರಾಷ್ಟ್ರದ ಜೌರಂಗಾಬಾದ್ ಡಿ) ಕರ್ನಾಟಕದ ರಟ್ಟೇನಹಳ್ಳಿ

ADVERTISEMENT

ಉತ್ತರ: ಎ

2) ಭಾರತದ ಅತ್ಯಂತ ಹಳೆಯ ಮೊಕದ್ದಮೆ ಕೋಲ್ಕತ್ತಾದ ಹೈಕೋರ್ಟ್‌ನಲ್ಲಿ 1951ರಿಂದ ಬಾಕಿ ಉಳಿದಿತ್ತು. ಈ ವರ್ಷ ಅದಕ್ಕೆ ಅಂತ್ಯ ಹಾಡಲಾಗಿದೆ. 72 ವರ್ಷಗಳ ಸುದೀರ್ಘ ನಡೆದ ಆ ಪ್ರಕರಣ ಯಾವುದು?

ಎ) ಮುಖ್ಯಮಂತ್ರಿಗಳ ಕೊಲೆ ಬಿ) ಬರ್ಹಾಂಪೋರ್ ಬ್ಯಾಂಕ್ ಲಿಮಿಟೆಡ್ ದಿವಾಳಿ ಪ್ರಕ್ರಿಯೆ ಸಿ) ನೇತಾಜಿ ಸುಭಾಷ್ ಚಂದ್ರರ ಸಾವಿನ ಪ್ರಕರಣ ಡಿ) ಮೇಲಿನ ಯಾವುದೂ ಅಲ್ಲ

ಉತ್ತರ:- ಬಿ

3) ಪ್ರತಿ ವರ್ಷ ಜನವರಿ ತಿಂಗಳಲ್ಲಿ ಸ್ವಿಟ್ಜರ್‌ಲೆಂಡ್‌ನ ದಾವೋಸ್‌ನಲ್ಲಿ ವರ್ಲ್ಡ್‌ ಎಕಾನಾಮಿಕ್ ಫೋರಂ ಸಮ್ಮೇಳನ ನಡೆಯುತ್ತದೆ. ಸಾವಿರಕ್ಕೂ ಹೆಚ್ಚು ಕಂಪನಿಗಳ ಸಿಇಒಗಳು, ಆಯ್ದ ರಾಜಕಾರಣಿ ಗಳು, ಎನ್‌ಜಿಒ ಮತ್ತು ಧಾರ್ಮಿಕ ನಾಯಕರು ಇದರಲ್ಲಿ ಪಾಲ್ಗೊಳ್ಳುತ್ತಾರೆ. 1997ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಎಚ್.ಡಿ. ದೇವೇಗೌಡರು ದಾವೋಸ್ ವರ್ಲ್ಡ್‌ ಎಕಾನಾಮಿಕ್ ಫೋರಂನ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಅದಾದ ಬಳಿಕ ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿದ್ದರು. ಹಾಗಾದರೆ ಈ ಸಲ ನಡೆದ ದಾವೋಸ್ ವರ್ಲ್ಡ್‌ ಎಕಾನಾಮಿಕ್ ಫೋರಂನ ಸಮ್ಮೇಳನದ ವಿಷಯ/ಥಿಮ್ ಏನಾಗಿತ್ತು?

ಎ) ‘ವಿಘಟಿತ ಜಗತ್ತಿನಲ್ಲಿ ಸಹಕಾರ’ (Cooperation in a Fragmented World)
ಬಿ) ವಿತ್ತ ಸಮಸ್ಯೆಗಳ ಸುತ್ತ ಪರಿಹಾರಗಳ ಗುಚ್ಛ
ಸಿ) ಬಡತನ ಮುಕ್ತ ವಿಶ್ವ : ಭ್ರಷ್ಠಾಚರ ಮುಕ್ತ ವ್ಯವಸ್ಥೆ
ಡಿ) ಮೇಲಿನ ಯಾವುದೂ ಅಲ್ಲ

ಉತ್ತರ: ಎ

4) ಮಾರ್ಕ್ ಕಬ್ಬನ್ ಕಾಲದ ಬಾಲುಬ್ರೂಯಿ ಅತಿಥಿ ಗೃಹವನ್ನು ‘ಸಾಂವಿಧಾನಿಕ ಕ್ಲಬ್’ ಮಾಡಲು ನಿಶ್ಚಯಿಸಲಾಗಿದೆ. ಹಾಗಾದರೆ ಅದು ಎಲ್ಲಿದೆ?

ಎ) ಮೈಸೂರು →ಬಿ) ಕಲಬುರ್ಗಿ
ಸಿ) ವಿಜಯಪುರ →ಡಿ) ಬೆಂಗಳೂರು→⇒

ಉತ್ತರ:- ಡಿ

5) ಉದಮ್‌ಪುರ - ಶ್ರೀನಗರ- ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯ ಭಾಗವಾದ `ಅಂಜಿಖಾಡ್ ಸೇತುವೆ’ (Anji Khad bridge) ವಿಶೇಷತೆ ಏನು?
ಎ) ಇದು ದೇಶದ ಮೊದಲ cable-stayed ರೈಲು ತೂಗು ಸೇತುವೆ ಬಿ) ಇದು ದೇಶದ ಮೊದಲ ಉಕ್ಕು ರಹಿತ ಸೇತುವೆ.
ಸಿ) ಇದು ದೇಶದ ಏಕೈಕ ಸೌರ ವಿದ್ಯುತ್‌ನಿಂದ ರೈಲು ಸಂಚರಿಸುವ ಸೇತುವೆಯಾಗಿದೆ. ಡಿ) ಮೇಲಿನ ಯಾವುದೂ ಅಲ್ಲ. ⇒ಉತ್ತರ: ಎ

6) ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಬಾಲ್ಟಿಸ್ಥಾನವನ್ನು ………………………….ದೊಂದಿಗೆ ವಿಲೀನಕ್ಕೆ ಒತ್ತಾಯಿಸಿ ಪಾಕಿಸ್ತಾನದ ಮಿಲಿಟರಿ ಹಾಗೂ ಸರ್ಕಾರದ ವಿರುದ್ಧ ಜನರು ಪ್ರತಿಭಟಿಸುತ್ತಿದ್ದಾರೆ.

ಎ) ಚೀನ →→ಬಿ) ಅಪ್ಘಾನಿಸ್ತಾನ
ಸಿ) ಭಾರತ →→ಡಿ) ನೇಪಾಳ ⇒ಉತ್ತರ: ಸಿ

7) ವಿಶ್ವಸಂಸ್ಥೆ 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸಿದೆ(UN has declared 2023 as the International Year of Millets) ನಮ್ಮ ದೇಶದಲ್ಲಿ 138 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತದೆ. ಹಾಗಾದರೆ ನಮ್ಮ ರಾಜ್ಯದಲ್ಲಿ ಎಷ್ಟು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತದೆ?
ಎ) 06.39 ಬಿ) 26.39 ಸಿ) 36.39 ,→ಡಿ) 16.39 ⇒ಉತ್ತರ: ಡಿ

8) ಗಾಂಧಿಜೀಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಾಪಸ್ ಬಂದುದರ ನೆನಪಿಗಾಗಿ ಸಾಗರೋತ್ತರ ಭಾರತೀಯರ ವ್ಯವಹಾರಗಳ ಸಚಿವಾಲಯವು ಪ್ರತಿವರ್ಷ ‘ಪ್ರವಾಸಿ ಭಾರತೀಯ ದಿವಸ್’ ಆಚರಿಸುತ್ತದೆ. ಈ ವರ್ಷ ಪ್ರವಾಸಿ ಭಾರತೀಯ ದಿವಸ್ ಆಯೋಜಿಸುವ ಜವಾಬ್ದಾರಿಯನ್ನು …………ಸರ್ಕಾರ ವಹಿಸಿಕೊಂಡಿತು

ಎ) ಕರ್ನಾಟಕ →ಬಿ) ಮಧ್ಯಪ್ರದೇಶ
ಸಿ) ಗುಜರಾತ್ →ಡಿ) ಓಡಿಶಾ ⇒

ಉತ್ತರ: ಬಿ

9) ಕೃಷಿಕರು ಕರ್ನಾಟಕದಲ್ಲಿ ಶುಂಠಿ ಬೆಳೆಯುತ್ತಿದ್ದು, ಕಳೆಯ ನಾಶಕ್ಕಾಗಿ ....... ರಾಸಾಯನಿಕವನ್ನು ಬಳಸುತ್ತಿದ್ದಾರೆ. ಅದು ಭೂಮಿಯ ಒಡಲು ಸೇರಿದ ಪರಿಣಾಮ ಅಂತರ್ಜಲ ವಿಷಯುಕ್ತವಾಗುತ್ತಿದೆ. ಅಂತಹ ನೀರು ಕುಡಿಯುವುದರಿಂದ ಅಥವಾ ನೀರನ್ನು ಬಳಸಿ ಆಹಾರ ತಯಾರಿಸಿ ತಿನ್ನುವುದರಿಂದ ಚರ್ಮ, ಕಣ್ಣಿಗೆ ತೊಂದರೆಯಾಗುವುದಲ್ಲದೇ ಲಿವರ್, ಕಿಡ್ನಿಯ ಮೇಲೂ ಕೆಟ್ಟ ಪರಿಣಾಮದ ಜತೆಗೆ ಉಸಿರಾಟಕ್ಕೂ ತೊಂದರೆಯಾಗುತ್ತದೆ.

ಎ) ಗ್ಲೈಫೊಸ್ಫೇಟ್ (Glyphosate)
ಬಿ) ಗಂಧಕಾಮ್ಲ ರಹಿತ ಯೂರಿಯಾಯುಕ್ತ
ಸಿ) ಸಾವಯವ ಗೊಬ್ಬರದ ಜತೆಗೆ ಯೂರಿಯಾಯುಕ್ತ
ಡಿ) ಮೇಲಿನ ಯಾವುದೂ ಅಲ್ಲ ⇒ಉತ್ತರ: ಎ

(ಮಾಹಿತಿ: Spardha Bharati UPSC ಯೂಟ್ಯೂಬ್ ಚಾನೆಲ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.