ಪ್ರಾತಿನಿಧಿಕ ಚಿತ್ರ
ಬಹುಆಯ್ಕೆಯ ಪ್ರಶ್ನೋತ್ತರಗಳು ಇಲ್ಲಿವೆ
ಅರ್ಜೆಂಟೀನಾದ ಯಾವ ಪ್ರದೇಶವನ್ನು ಕೃಷಿ ಚಟುವಟಿಕೆಯ ಹೃದಯಭಾಗ ಎನ್ನಲಾಗುತ್ತದೆ?
ಎ. ಪಂಪಸ್
ಬಿ. ದ ಆಂಡೀಸ್
ಸಿ. ಪಟಗೋನಿಯ
ಡಿ. ಸೆಟಗೋನಿಯ
ಉತ್ತರ: ಎ
ಭಾರತ ಮತ್ತು ಅರ್ಜೆಂಟೀನಾ ರಾಷ್ಟ್ರಗಳು ಯಾವ ವಲಯದ ಒಪ್ಪಂದಕ್ಕೆ ಸಹಿ ಹಾಕಿವೆ?
ಎ. ಮುಕ್ತ ವ್ಯಾಪಾರ ಒಪ್ಪಂದ
ಬಿ. ಸಾಂಸ್ಕೃತಿಕ ವಿನಿಮಯ ಒಪ್ಪಂದ
ಸಿ. ಸಾಮಾಜಿಕ ಭದ್ರತಾ ಒಪ್ಪಂದ
ಡಿ. ಮಹಿಳಾ ಹಕ್ಕುಗಳ ಸಂರಕ್ಷಣಾ ಒಪ್ಪಂದ
ಉತ್ತರ: ಸಿ
ಇ–ಆಡಳಿತಕ್ಕೆ ಸಂಬಂಧಿಸಿ ಯಾವ ಯೋಜನೆಗಳನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ?
1. ಭೂಮಿ
2. ಖಜಾನೆ
3. ಮನುಜ
4. ನಿರಂತರ ಸೇವಾ
ಸರಿ ಉತ್ತರ ಗುರುತಿಸಿ
ಎ. 1 ಮತ್ತು 2
ಬಿ. 2 ಮತ್ತು 3
ಸಿ. 3 ಮತ್ತು 4
ಡಿ. 4 ಮಾತ್ರ
ಉತ್ತರ: ಎ
ಸ್ಮಾರ್ಟ್ ಆಡಳಿತದಲ್ಲಿ ಕೆಳಗಿನ ಯಾವ ಅಂಶಗಳನ್ನು ಅಳವಡಿಸಿಕೊಳ್ಳಲಾಗುತ್ತದೆ?
1. ಸರಳೀಕರಣ
2. ಆಡಳಿತ ವ್ಯವಸ್ಥೆಯಲ್ಲಿ ಮೌಲ್ಯಗಳ ಅಳವಡಿಕೆ
3. ಉತ್ತರದಾಯಿತ್ವ
4. ಪ್ರತಿಕ್ರಿಯಾಶೀಲ ಆಡಳಿತ
ಸರಿ ಉತ್ತರ ಗುರುತಿಸಿ
ಎ. 1 ಮತ್ತು 2
ಬಿ. 1, 2, 3 ಮತ್ತು 4
ಸಿ. 2 ಮತ್ತು 4
ಡಿ. 3 ಮತ್ತು 4
ಉತ್ತರ: ಬಿ
‘ಭಾಮ ಕಲಾಪಂ’ ನಾಟಕ ಯಾವ ಲೇಖಕರಿಗೆ ಸಂಬಂಧಿಸಿದೆ?
ಎ. ಸಿದ್ಧೇಂದ್ರ ಯೋಗಿ
ಬಿ. ಸಿದ್ದೇಶ್ವರ ಮುನಿ
ಸಿ. ಲೋಕೇಶ್ವರ ಯೋಗಿ
ಡಿ. ಓಹಿಲೇಶ್ವರ ಯೋಗಿ
ಉತ್ತರ: ಎ
‘ಜಲಚಿತ್ರ ನೃತ್ಯಂ’ಗೆ ಸಂಬಂಧಿಸಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ?
1. ಈ ನೃತ್ಯ ಸ್ವರೂಪದಲ್ಲಿ ರಾಮಾಯಣದ ಕಥಾ ಹಂದರವನ್ನು ಪ್ರದರ್ಶಿಸಲಾಗುತ್ತದೆ
2. ಈ ನೃತ್ಯ ಸ್ವರೂಪದಲ್ಲಿ ರಾಮಾಯಣ ಮತ್ತು ಮಹಾಭಾರತದ ಕಥಾ ಹಂದರ ಪ್ರದರ್ಶಿಸಲಾಗುತ್ತದೆ
3. ನೃತ್ಯಪಟು ತನ್ನ ಕಾಲಿನ ಬೆರಳನ್ನು ಬಳಸಿಕೊಂಡು ಚಿತ್ರವನ್ನು ಬಿಡಿಸುವ ನೃತ್ಯ ಶೈಲಿಯಾಗಿದೆ
ಸರಿ ಉತ್ತರ ಗುರುತಿಸಿ
ಎ. 1 ಮತ್ತು 2
ಬಿ. 1 ಮತ್ತು 3
ಸಿ. 3 ಮಾತ್ರ
ಡಿ. 2 ಮಾತ್ರ
ಉತ್ತರ: ಸಿ
ಯಾವ ಸ್ಥಳದಲ್ಲಿ ನೂತನ ಪರಮಾಣು ವಿದ್ಯುತ್ ಉತ್ಪಾದನಾ ಘಟಕ ಆರಂಭಿಸಲಾಗುತ್ತಿದೆ?
ಎ. ಗೋರಖ್ ಪುರ್, ಹರಿಯಾಣ
ಬಿ. ಭೋಪಾಲ್, ಮಧ್ಯ ಪ್ರದೇಶ
ಸಿ. ಪ್ರಯಾಗ್ ರಾಜ್, ಉತ್ತರ ಪ್ರದೇಶ
ಡಿ. ತಿರುವನಂತಪುರಂ, ಕೇರಳ
ಉತ್ತರ: ಎ
ಕಲ್ಪಕಂನಲ್ಲಿ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸುತ್ತಿರುವ ಥೋರಿಯಂ ಆಧಾರಿತ ಪರಮಾಣು ಘಟಕದ ಸರಿಯಾದ ಹೆಸರನ್ನು ಗುರುತಿಸಿ.
ಎ. ಕಾಮಿನಿ
ಬಿ. ದುರ್ಗಾ
ಸಿ. ಭವಾನಿ
ಡಿ. ಚಾಮುಂಡಿ
ಉತ್ತರ: ಎ
ಕೆಳಗಿನ ಯಾವ ಅಂಶಗಳನ್ನು ಭಾರತದ ರಾಜ ತಾಂತ್ರಿಕ ವ್ಯವಸ್ಥೆಯ ಪ್ರಮುಖ ಸ್ತಂಭಗಳೆನ್ನಬಹುದು?
1. ವಸುದೈವ ಕುಟುಂಬಕಂ
2. ವಿವಿಧ ಧ್ರುವಗಳ ಮೇಲೆ ಗಮನ ವಹಿಸುವುದು
3. ಭಾರತದ ರಾಜ್ಯ ತಾಂತ್ರಿಕ ನೀತಿಯನ್ನು ಅಂತರರಾಷ್ಟ್ರೀಯ ಶಕ್ತಿಯಾಗಿ ಪರಿವರ್ತಿಸುವುದು
ಸರಿ ಉತ್ತರ ಗುರುತಿಸಿ
ಎ. ಒಂದು ಹೇಳಿಕೆ ಸರಿ ಇದೆ
ಬಿ. ಎರಡು ಹೇಳಿಕೆಗಳು ಸರಿ ಇದೆ
ಸಿ. ಮೂರು ಹೇಳಿಕೆಗಳು ಸರಿ ಇದೆ
ಡಿ. ಮೇಲಿನ ಮೂರು ಹೇಳಿಕೆಗಳು ತಪ್ಪು
ಉತ್ತರ: ಸಿ
ಈ ಹೇಳಿಕೆಗಳು ಯಾವ ಹಂತದ ವಿದೇಶಾಂಗ ನೀತಿಯನ್ನು ಸರಿಯಾದ ರೀತಿಯಲ್ಲಿ ವಿವರಿಸುತ್ತದೆ?
1. ಭಾರತ ಜಾಗತಿಕ ಮಟ್ಟದಲ್ಲಿ ಸಮತೋಲನ ತರುವ ಶಕ್ತಿಯಾಗಿ ಉಗಮವಾಯಿತು
2. ಅಮೆರಿಕದೊಂದಿಗೆ ಒಂದೆಡೆ ಅಣು ಒಪ್ಪಂದಕ್ಕೆ ಸಹಿ ಹಾಕಿತು
3. ವಿಶ್ವ ವ್ಯಾಪಾರ ಒಕ್ಕೂಟದ ಕೃಷಿ ನೀತಿಯ ವಿಚಾರದಲ್ಲಿ ಚೀನಾಗೆ ಸಹಕಾರ ನೀಡಿತ್ತು
ಎ.ಎರಡನೇ ಹಂತದ ವಿದೇಶಾಂಗ ನೀತಿ
ಬಿ.ಮೂರನೇ ಹಂತದ ವಿದೇಶಾಂಗ ನೀತಿ
ಸಿ. ನಾಲ್ಕನೇ ಹಂತದ ವಿದೇಶಾಂಗ ನೀತಿ
ಡಿ. ಐದನೇ ಹಂತದ ವಿದೇಶಾಂಗ ನೀತಿ
ಉತ್ತರ: ಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.