ADVERTISEMENT

‘ಎನ್‌ಡಿಎ’ಗೆ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಕೆಗೆ ಜೂನ್ 7 ಕೊನೆಯ ದಿನ

​ಪ್ರಜಾವಾಣಿ ವಾರ್ತೆ
Published 5 ಜೂನ್ 2022, 19:30 IST
Last Updated 5 ಜೂನ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭಾರತದ ಹಲವು ಯುವಕರು ಸೇನೆಯಯಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುವ ಕನಸು ಕಾಣುತ್ತಾರೆ. ಅಂಥವರ ಕನಸನ್ನು ನನಸು ಮಾಡುತ್ತದೆ ನ್ಯಾಷನಲ್‌ ಡಿಫೆನ್ಸ್ ಅಕಾಡೆಮಿ(ರಾಷ್ಟ್ರೀಯ ರಕ್ಷಣಾ ಸಂಸ್ಥೆ). ಅಷ್ಟೇ ಅಲ್ಲ, ಇದು ಪ್ರತಿಭಾವಂತ ಯುವಕರನ್ನು ರಾಷ್ಟ್ರದ ಸ್ವತ್ತುಗಳನ್ನಾಗಿ ನಿರ್ಮಿಸುವ ಪ್ರತಿಷ್ಠದ ಶೈಕ್ಷಣಿಕ ಸಂಸ್ಥೆ.

ಎನ್‌ಡಿಎ ಪೂರ್ಣಗೊಳಿಸಿದ ಅಭ್ಯರ್ಥಿಗಳು ರಾಷ್ಟ್ರದಮೂರು ರಕ್ಷಣಾ ಪಡೆಗಳಲ್ಲಿ ಲೆಫ್ಟಿನೆಂಟ್‌, ಸಬ್‌–ಲೆಫ್ಟಿನೆಂಟ್‌, ಫ್ಲೈಯಿಂಗ್ ಆಫೀಸರ್‌ ಸೇರಿದಂತೆ ಪ್ರಮುಖ ಪದವಿಗಳಿಗೆ ಪ್ರವೇಶ ಪಡೆಯುವ ಅವಕಾಶವಿರುತ್ತದೆ.

ಪ್ರತಿ ವರ್ಷದಂತೆ ಈ ವರ್ಷವೂ ಎನ್‌ಡಿಎ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸ ಲಾಗಿದೆ.ಮೇ18ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ.ಜೂನ್ 7 ಅರ್ಜಿ ಸಲ್ಲಿಸಲು ಕೊನೆಯ ದಿನ. ಸೆಪ್ಟೆಂಬರ್ 4ರಂದು ಪರೀಕ್ಷೆ ನಡೆಯಲಿದೆ.

ADVERTISEMENT

ಶೈಕ್ಷಣಿಕ ಅರ್ಹತೆಗಳು: ಪ್ರಸಕ್ತ ಸಾಲಿನಲ್ಲಿ 12ನೇ ತರಗತಿಯಲ್ಲಿ ಓದುತ್ತಿರುವ ಮತ್ತು ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಪದವಿಪೂರ್ವ ಶಿಕ್ಷಣದಲ್ಲಿ ಭೌತ, ರಸಾಯನ ಮತ್ತು ಗಣಿತ ವಿಜ್ಞಾನವನ್ನು ಅಧ್ಯಯನ ಮಾಡಿರಬೇಕು.

ವಯೋಮಿತಿ:‌ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು, ಜನವರಿ 02, 2004ರಿಂದ ಜನವರಿ 01, 2007ರ ನಡುವೆ ಜನಿಸಿರಬಾರದು. ಅಭ್ಯರ್ಥಿಗಳು ಅವಿವಾಹಿತರಾಗಿರಬೇಕು, ತರಬೇತಿ ಪೂರ್ಣಗೊಳಿಸುವವರೆಗೂ ಅವಿವಾಹಿತರಾಗಿರಬೇಕು.

ಆಯ್ಕೆ ಹಂತಗಳು: ‌ಎರಡು ಹಂತದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಮೊದಲ ಹಂತ ಲಿಖಿತ ಪರೀಕ್ಷೆ, ಎರಡನೇ ಹಂತದಲ್ಲಿ ಸಂದರ್ಶನ ವಿರುತ್ತದೆ.

ಎನ್‌ಡಿಎ ಪ್ರವೇಶಕ್ಕಾಗಿ ಪ್ರತಿ ವರ್ಷ ಎರಡು ಬಾರಿ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಮೊದಲನೆಯ ಮತ್ತು ಎರಡನೆಯ ಪರೀಕ್ಷೆಗಳ ಆಯ್ಕೆ ಪ್ರಕ್ರಿಯೆಯು ಪ್ರತ್ಯೇಕವಾಗಿರುತ್ತದೆ. ಈ ವರ್ಷದ ಮೊದಲನೆಯ ಅವಧಿಯ ಪ್ರವೇಶ ಪರೀಕ್ಷೆ ಏಪ್ರಿಲ್ ತಿಂಗಳಲ್ಲಿ ನಡೆದಿದೆ. ಇದೀಗ ಎರಡನೇ ಅವಧಿಯ ಪ್ರವೇಶ ಪರೀಕ್ಷೆಯ ಮೂಲಕ 400 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹೆಚ್ಚಿನ ಮಾಹಿತಿಗೆ: https://upsconline.nic.in/tpform1.php#agree

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.