ADVERTISEMENT

‘ಒನ್ಸ್‌ ಅಪಾನ್‌ ಆ್ಯನ್‌ ಎಕ್ಸಾಮ್‌’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 20:00 IST
Last Updated 29 ಅಕ್ಟೋಬರ್ 2018, 20:00 IST
ಕೆ. ವಿಜಯ್‌ ಕಾರ್ತಿಕೇಯನ್‌
ಕೆ. ವಿಜಯ್‌ ಕಾರ್ತಿಕೇಯನ್‌   

ದೇಶದ ಕಿರಿಯ ಐಎಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಡಾ.ಕೆ.ವಿಜಯ ಕಾರ್ತಿಕೇಯನ್ ಅವರ ‘ಒನ್ಸ್ ಅಪಾನ್ ಆ್ಯನ್ ಎಕ್ಸಾಮ್’ ಕಾದಂಬರಿ ಬಿಡುಗಡೆಯಾಗಿದೆ.

ಅವರು ಯುಪಿಎಸ್‌ಸಿ ಪರೀಕ್ಷೆಯನ್ನು ಎದುರಿಸಿದ ಬಗೆಯನ್ನು ಇದರಲ್ಲಿ ವಿವರಿಸಿದ್ದಾರೆ. ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಉಪಯುಕ್ತ ಮಾಹಿತಿ ಹಾಗೂ ಜೀವನವನ್ನು ಪ್ರೀತಿಸುವ ಬಗೆಯನ್ನೂ ಅವರು ನಿರೂಪಿಸಿದ್ದಾರೆ. ಸಪ್ನ ಬುಕ್‌ ಹೌಸ್‌ನಲ್ಲಿ ಭಾನುವಾರ ಈ ಪುಸ್ತಕ ಬಿಡುಗಡೆಯಾಯಿತು.

ವಿಜಯಕಾರ್ತಿಕೇಯನ್‌ ಕೊಯಮತ್ತೂರು ಕಾರ್ಪೊರೇಶನ್‍ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದು ಅವರ ನಾಲ್ಕನೇ ಕೃತಿಯಾದರೂ ಇಂಗ್ಲಿಷ್‌ನಲ್ಲಿ ಬರೆದಿರುವ ಮೊದಲ ಕೃತಿಯಾಗಿದೆ.

ADVERTISEMENT

‘ಕೇವಲ ಐಎಎಸ್ ಆಕಾಂಕ್ಷಿಗಳಿಗೆ ಈ ಪುಸ್ತಕ ಸೀಮಿತವಾಗಿಲ್ಲ. ಎಲ್ಲ ವಯೋಮಾನದವರೂ ಓದಬಹುದಾಗಿದೆ. ಆನ್‍ಲೈನ್‌ನಲ್ಲಿ ಉತ್ತಮ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿಬೆಂಗಳೂರಿನ ಓದುಗರಿಗಾಗಿ ಇಲ್ಲಿ ಬಿಡುಗಡೆ ಮಾಡಲಾಗಿದೆ’ ಎಂದು ಕಾರ್ತಿಕೇಯನ್ ಹೇಳಿದರು.‌ ಒನ್ಸ್‌ ಅಪಾನ್‌ ಆ್ಯನ್‌ ಎಕ್ಸಾಮ್‌’ ನಗರದ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಹಾಗೂ ಆನ್‍ಲೈನ್ ಸ್ಟೋರ್‌ಗಳಾದ ಥಿಂಕ್‍ಇಂಕ್, ಅಮೆಜಾನ್, ಫ್ಲಿಪ್‍ಕಾರ್ಟ್ ಮತ್ತು ಸಪ್ನ ಆನ್‌ಲೈನ್‌ನಲ್ಲಿ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.