ADVERTISEMENT

‘ಪೋಸ್ಟ್ ಡಿಪ್ಲೊಮಾ ಇನ್ ಟೂಲ್ ಡಿಸೈನ್’ ಕೋರ್ಸ್‌ಗಾಗಿ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 23:39 IST
Last Updated 18 ಜುಲೈ 2025, 23:39 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಬೆಂಗಳೂರು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ(ಜಿಟಿಟಿಸಿ) 2025-26ನೇ ಸಾಲಿನ ‘ಪೋಸ್ಟ್ ಡಿಪ್ಲೊಮಾ ಇನ್ ಟೂಲ್ ಡಿಸೈನ್’ ಕೋರ್ಸ್‌ಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ADVERTISEMENT

ಡಿಎಂಇ/ಡಿಟಿಡಿಎಂ/ಬಿಇ(ಮೆಕ್ಯಾನಿಕಲ್/ಇಂಡಸ್ಟ್ರಿಯಲ್ ಎಂಜಿನಿಯರಿಂಗ್‌ ಆ್ಯಂಡ್ ಮ್ಯಾನುಫ್ಯಾಕ್ಚರಿಂಗ್/ಇಂಡಸ್ಟ್ರಿಯಲ್‌ ಪ್ರೊಡಕ್ಷನ್, ಆಟೊಮೊಬೈಲ್ ಎಂಜಿನಿಯರಿಂಗ್) ತೇರ್ಡೆಯಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಎಂ.ಟೆಕ್ ಇನ್‌ ಟೂಲ್ ಎಂಜಿನಿಯರಿಂಗ್‌: ‘ಎಂ-ಟೆಕ್ ಇನ್
ಟೂಲ್ ಎಂಜಿನಿಯರಿಂಗ್’ ಕೋರ್ಸ್‌ಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮೆಕ್ಯಾನಿಕಲ್ /ಆಟೊಮೊಬೈಲ್, ಆಟೊಮೇಷನ್‌ ಆ್ಯಂಡ್ ರೊಬೊಟಿಕ್ /ಇಂಡಸ್ಟ್ರಿಯಲ್ ಆ್ಯಂಡ್‌ ಪ್ರೊಡಕ್ಷನ್/ಟೂಲ್/ಮೆಕಟ್ರಾನಿಕ್ಸ್‌ ವಿಷಯಗಳಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿರುವವರು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು ಪಿಜಿ /ಪಿಡಿ ಸ್ಟಡೀಸ್ ಕೇಂದ್ರ, ರಾಜಾಜಿನಗರ, ಬೆಂಗಳೂರು.

ಮೊಬೈಲ್ ಸಂ: 9141629584/9880217473/ 8310987353 ಇಲ್ಲಿಗೆ ಸಂಪರ್ಕಿಸ
ಬಹುದು.

https://gttc.karnataka.gov.in ಜಾಲತಾಣಕ್ಕೂ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.