ADVERTISEMENT

ಪ್ರಜಾವಾಣಿ ಕ್ವಿಜ್ 45

ಎಸ್.ಎಲ್‌.ಶ್ರೀನಿವಾಸ ಮೂರ್ತಿ
Published 13 ನವೆಂಬರ್ 2018, 19:30 IST
Last Updated 13 ನವೆಂಬರ್ 2018, 19:30 IST
   

1. ಚಾಮುಂಡಿಬೆಟ್ಟದ ಮೊದಲ ಹೆಸರೇನು?

ಅ) ಗರುಡಾದ್ರಿ ಆ) ಚಾಮುಂಡಾದ್ರಿ
ಇ) ಮಹಾಬಲಾದ್ರಿ ಈ) ಚಿನ್ಮೂಲಾದ್ರಿ

2. ‘ಎಲ್‍ಇಡಿ’ ಎನ್ನುವುದರ ವಿಸ್ತೃತರೂಪವೇನು?

ADVERTISEMENT

ಅ) ಲೈಟ್ ಎಮಿಟಿಂಗ್ ಡಿಸ್ಪ್ಲೆ ಆ) ಲಿಕ್ವಿಡ್ ಎಮಿಟಿಂಗ್ ಡಿಸ್ಪ್ಲೆ

ಇ) ಲಿಕ್ವಿಡ್ ಎಮಿಟಿಂಗ್ ಡೈಯೋಡ್ ಈ) ಲೈಟ್ ಎಮಿಟಿಂಗ್ ಡೈಯೋಡ್

3. ‘ಸ್ಪಿಗ್ಮೊ ಮಾನೋ ಮೀಟರ್’ ಅನ್ನು ಏನನ್ನು ಅಳೆಯಲು ಬಳಸುತ್ತಾರೆ?

ಅ) ರಕ್ತದ ಒತ್ತಡ ಆ) ರಕ್ತಕಣಗಳ ಸಂಖ್ಯೆ

ಇ) ರಕ್ತದ ಸಾಂದ್ರತೆ ಈ) ರಕ್ತದ ಗುಂಪು

4. ಪ್ರಸಿದ್ಧವಾದ ‘ಬಿನಾಕಾ ಗೀತ್ ಮಾಲಾ’ ಕಾರ್ಯಕ್ರಮದ ನಿರೂಪಕರಾಗಿದ್ದವರು ಯಾರು?

ಅ) ಅಮಿತಾಬ್ ಬಚ್ಚನ್ ಆ) ಅಮೀರ್ ಸಯಾನಿ

ಇ) ಅಮೀರ್ ಖಾನ್ ಈ) ಶಾರುಖ್ ಖಾನ್

5. ಹಿಂದಿನ ಕಾಲದಲ್ಲಿ ತಾಳೆಗರಿಯ ಮೇಲೆ ಬರೆಯಲು ಯಾವ ಸಾಧನವನ್ನು ಬಳಸುತ್ತಿದ್ದರು?

ಅ) ಕಂಟ ಆ) ಬಳಪ

ಇ) ಕುಂಚ ಈ) ಗರಿ

6. ಇವುಗಳಲ್ಲಿ ಯಾವುದು ಶಂಕರಾಚಾರ್ಯರ ರಚನೆಯೆಂದು ಪರಿಗಣಿತವಾಗಿಲ್ಲ?

ಅ) ಭಜಗೋವಿಂದಂ ಆ) ಗೀತಗೋವಿದಂ

ಇ) ಸೌಂದರ್ಯಲಹರಿ ಈ) ಕನಕಧಾರಾಸ್ತೋತ್ರ

7. ಗಡಿಯಾರದ ಚಲನೆಗಾಗಿ ಬಳಸಲಾಗುವ ಹರಳು ಯಾವುದು?

ಅ) ಮರಳು ಆ) ಜಿಪ್ಸಮ್

ಇ) ವಜ್ರ ಈ) ಕ್ವಾಜ್ಡ್

8. ‘ಮಹಾಮಾರ್ಗ’ ಯಾವ ಸಂಶೋಧಕರಿಗೆ ಅರ್ಪಿಸಲಾದ ಅಭಿನಂದನ ಗ್ರಂಥ?

ಅ) ಎಂ. ಚಿದಾನಂದ ಮೂರ್ತಿಆ) ವಿದ್ಯಾಶಂಕರ್

ಇ) ಎಂ.ಎಂ. ಕಲಬುರ್ಗಿ ಈ) ಆರ್. ಸಿ. ಹಿರೇಮಠ

9. ಇವುಗಳಲ್ಲಿ ‘ಲೈರ್’ ವಾದ್ಯದ ಮೂಲದಿಂದ ಹುಟ್ಟಿದ ಶಬ್ದ ಯಾವುದು?

ಅ) ಲಿಗಮೆಂಟ್ ಆ) ಲಿಮರಿಕ್

ಇ) ಲಿಟರೇಚರ್ ಈ) ಲಿರಿಕ್

10. ‘ಮೌಸ್ ಟ್ರಾಪ್’ ಎಂಬ ಪ್ರಸಿದ್ಧವಾದ ಆಂಗ್ಲನಾಟಕ ಯಾರ ರಚನೆ?

ಅ) ಅಗಾಥಾ ಕ್ರಿಸ್ಟಿ ಆ) ಬರ್ನಾಡ್ ಷಾ

ಇ) ಮೋಲಿಯೆರ್ ಈ) ಇಬ್ಸನ್

***

ಕಳೆದ ಸಂಚಿಕೆಯ ಸರಿ ಉತ್ತರಗಳು

1. ವೋಲ್ಗಾ 2. ಕೇರಳ 3. ಮಂಜುಗಲ್ಲು

4. ವಸುಚರಿತ್ರಮು 5. ಸ್ಟ್ಯಾಚು ಆಫ್ ಯೂನಿಟಿ

6. ಇಂಡಿಯನ್ ಎಕ್ಸ್‌ಪ್ರೆಸ್‌ 7. ಜಿಮ್ಮಿಗಲ್ಲು

8. ಬ್ಯಾಲೆ 9. ಮರದ ಕಲಾಕೃತಿಗಳು 10. ವಿಷ್ಣು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.