ADVERTISEMENT

ಪ್ರಜಾವಾಣಿ ಕ್ವಿಜ್: ಇತಿಹಾಸ ಪ್ರಸಿದ್ಧ ಪ್ರಣವೇಶ್ವರ ದೇವಾಲಯ ಎಲ್ಲಿದೆ?

ಎಸ್.ಎಲ್‌.ಶ್ರೀನಿವಾಸ ಮೂರ್ತಿ
Published 19 ನವೆಂಬರ್ 2019, 19:30 IST
Last Updated 19 ನವೆಂಬರ್ 2019, 19:30 IST
   

1. ಗೊಟಬಯ ರಾಜಪಕ್ಸ ಶ್ರೀಲಂಕಾದ ಎಷ್ಟನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ?

ಅ) ಎಂಟು ಆ) ಆರು

ಇ) ಒಂಬತ್ತು ಈ) ಹನ್ನೆರಡು

ADVERTISEMENT

2. ರಂಜನ್ ಗೊಗೋಯ್ ಅವರ ನಂತರ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡವರು ಯಾರು?

ಅ) ಅಬ್ದುಲ್ ನಸೀರ್ ಆ) ಎಸ್. ಎ. ಬೊಬಡೆ

ಇ) ಕೇಹರ್ ಈ) ನಾರಿಮನ್

3. ಇವರಲ್ಲಿ ಯಾರು ರಾಜ್ಯ ಮರುವಿಂಗಡಣಾ ಸಮಿತಿಯ ಸದಸ್ಯರಾಗಿರಲಿಲ್ಲ?

ಅ) ಫಸಲಾಲಿ ಆ) ಹೆಚ್. ಎನ್. ಕುಂಜ್ರು

ಇ) ಪಣಿಕ್ಕರ್ ಈ) ಪಾಲ್ಕಿವಾಲಾ

4. ಇತಿಹಾಸ ಪ್ರಸಿದ್ಧ ಪ್ರಣವೇಶ್ವರ ದೇವಾಲಯ ಎಲ್ಲಿದೆ?

ಅ) ಬಾದಾಮಿ ಆ) ತಾಳಗುಂದ

ಇ) ಗದಗ ಈ) ಮಹಾಕೂಟ

5. ಮಹಾಭಾರತದಲ್ಲಿ ಅರ್ಜುನ ಪಾಶುಪತಾಸ್ತ್ರವನ್ನು ಪಡೆದದ್ದು ಯಾರಿಂದ?

ಅ) ಹರಿ ಆ) ಇಂದ್ರ

ಇ) ಅಗ್ನಿ ಈ) ಶಿವ

6. 'ಗ್ಯಾಲಪ್' ಎಂಬ ಶಬ್ದ ಯಾವ ಕ್ರೀಡೆಗೆ ಸಂಬಂಧಿಸಿದೆ?

ಅ) ಕುಸ್ತಿ ಆ) ಬಾಕ್ಸಿಂಗ್

ಇ) ಕುದುರೆ ಓಟ ಈ) ಹಾಕಿ

7. ಶಿಶುನಾಳ ಶರೀಫರ ಗುರುಗಳ ಹೆಸರೇನು?

ಅ) ಕೃಷ್ಣ ಭಟ್ಟ ಆ) ಗೋವಿಂದ ಭಟ್ಟ ಇ) ಹರಿ ಭಟ್ಟ ಈ) ಸದಾಶಿವ ಭಟ್ಟ

8. ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ಎಲ್ಲಿದೆ?

ಅ) ದೆಹಲಿ ಆ) ಮೈಸೂರು

ಇ) ಬೆಂಗಳೂರು ಈ) ಮುಂಬೈ

9. ಸುಬ್ರಹ್ಮಣ್ಯ ರಾಜೇ ಅರಸ್ ಯಾವ ಕಾವ್ಯ ನಾಮವನ್ನು ಹೊಂದಿದ್ದರು?

ಅ) ಚದುರಂಗ ಆ) ರಸಿಕರಂಗ

ಇ) ರಾಜರಂಗ ಈ) ಶ್ರೀರಂಗ

10. ಇವುಗಳಲ್ಲಿ ಯಾವುದು ಲೋಹಗಳ ಗುಣವಲ್ಲ?

ಅ) ತನ್ಯತೆ ಆ) ಬಿಧುರತೆ

ಇ) ಕುಟ್ಯತೆ ಈ) ವಿದ್ಯುದ್ವಾಹಕತೆ

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ಸರಯೂ 2. ರವಿ ಬೆಳಗೆರೆ 3. ಚರ್ಮ

4. ಆಯುರ್ವೇದ 5. ಪ್ರಾಗ್ 6. ಶೂಟಿಂಗ್ 7.ತೊಗರಿ 8. ಊಹಾತೀತ ಗೆಲುವು ಸಾಧಿಸಿದ ವ್ಯಕ್ತಿ 9. ಆರು. 10. ಚಪ್ಪಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.