
ಚಿತ್ರ: ಗೆಟ್ಟಿ
ಓದಿರುವ ವಿಷಯ ನೆನೆಪಿನಲ್ಲಿಟ್ಟುಕೊಳ್ಳುವುದು ಸಾಮಾನ್ಯ ವಿಚಾರವಲ್ಲ. ಆಗಾಗ ಮರೆತು ಹೋಗಬಹುದು. ಕಲಿಕೆ ಹಂತ ಹಂತವಾಗಿದ್ದಾಗ ಮಾತ್ರ ನೆನಪಿನಲ್ಲಿ ಉಳಿಯುತ್ತದೆ ಎಂದು ಮನೋವಿಜ್ಞಾನ ಹೇಳುತ್ತದೆ. ಒಂದು ವಿಷಯ ಕಲಿಯುವಾಗ ಕೆಲವು ತಂತ್ರಗಳನ್ನು ಅನುಸರಿಸಬೇಕು ಎಂದು ಮನೋವಿಜ್ಞಾನ ಹೇಳುತ್ತದೆ.
ಮಿದುಳು ಹೊಸ ವಿಷಯಗಳನ್ನು ನೋಡಿದಾಗ ಗೊಂದಲ ಪಡುತ್ತದೆ. ಇದು ಕಲಿಕೆಯ ಮೊದಲ ಹಂತ ಎಂದು ಮನೋವಿಜ್ಞಾನ ಹೇಳುತ್ತದೆ.
ಕೆಲಸವನ್ನು ಸಣ್ಣ ಸಣ್ಣ ಭಾಗಗಳಾಗಿ ವಿಂಗಡಿಸಿ: ಒಂದು ದೊಡ್ಡ ಕೆಲಸ ಅಥವಾ ವಿಷಯ ನೋಡಿದಾಗ ಮಿದುಳು ಗಾಬರಿಯಾಗುವುದು ಸಹಜ. ಆ ಕೆಲಸವನ್ನು ಚಿಕ್ಕ ಚಿಕ್ಕ ಭಾಗಗಳಾಗಿ ವಿಂಗಡಿಸಿಕೊಂಡು ಹಂತ ಹಂತವಾಗಿ ಮುಗಿಸುವುದು ಉತ್ತಮ.
ಪುನರಾವರ್ತನೆ ಮಾಡುವುದು: ಒಮ್ಮೆ ಓದಿದರೆ ನೆನಪಾಗುವುದಿಲ್ಲ, ಅಂದರೆ ಸ್ವಲ್ಪ ಸಮಯ ಬಿಟ್ಟು ಮತ್ತೆ ಮತ್ತೆ ಓದಿ. ಹೀಗೆ ಓದುವುದರಿಂದ ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತದೆ.
ಓದಿದ್ದನ್ನು ನೆನಪಿಸಿಕೊಳ್ಳುವುದು : ಪುಸ್ತಕ ಮುಚ್ಚಿಟ್ಟು ಓದಿದ್ದನ್ನು ನೆನಪು ಮಾಡಿಕೊಳ್ಳಿ. ಇದರಿಂದ ಕಷ್ಟಕರ ವಿಷಯ ನೆನಪಿನಲ್ಲಿ ಉಳಿಯಲು ಸಹಕಾರಿಯಾಗುತ್ತದೆ.
ಅರ್ಥಮಾಡಿಕೊಳ್ಳಿ, ನಂತರ ನೆನೆಪಿಡಿ: ಮೊದಲು ವಿಷಯವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ನಿಮಗೆ ಅರ್ಥವಾಗುವ ರೀತಿಯಲ್ಲಿಯೇ ನೆನಪಿಡಬೇಕು.
ಕಲಿಕೆಯಲ್ಲಿ ಮೃದುತ್ವ ಇರಲಿ: ಹೊಸದನ್ನು ಕಲಿಯಲು ಆರಂಭಿಸಿದಾಗ ಮಿದುಳಿಗೆ ಕಷ್ಟವಾಗುತ್ತದೆ. ಆಗ ‘ನಿಧಾನವಾಗಿ ಕಲಿಯುತ್ತೇನೆ, ಕಷ್ಟ ಅಂದರೂ ನಾನು ಮುಂದುವರೆಯುತ್ತೇನೆ’ ಎಂದು ಹೇಳಿಕೊಳ್ಳಿ. ಇದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಬರೆಯುವ ಅಭ್ಯಾಸ ಮಾಡುವುದು: ನಾವು ಬರೆದಾಗ ಮಿದುಳಿನ ಎರಡು ಭಾಗಗಳು ಕೆಲಸ ಮಾಡುತ್ತವೆ ಎಂದು ಮನೋವಿಜ್ಞಾನ ಹೇಳುತ್ತದೆ. ಬರೆಯುವುದು, ಓದುವುದು ಮತ್ತು ಮಾತನಾಡುವುದು, ಕಲಿಕೆ ತತ್ವಗಳಾಗಿವೆ.
ಉದಾಹರಣೆಗಳ ಮೂಲಕ ಕಲಿಯುವುದು: ನಮ್ಮ ಮಿದುಳು ಕಥೆ, ಉದಾಹರಣೆ, ಚಿತ್ರಗಳನ್ನು ಬೇಗ ಗುರುತಿಸುತ್ತದೆ. ಆದ್ದರಿಂದ ವಿಷಯವನ್ನು ಚಿತ್ರ, ಕಥೆಯ ಮೂಲಕ ನೆನೆಪಿಡುವುದು ಸಹಕಾರಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.