ADVERTISEMENT

ಪ್ರಜಾವಾಣಿ ಕ್ವಿಜ್

​ಪ್ರಜಾವಾಣಿ ವಾರ್ತೆ
Published 15 ಜನವರಿ 2019, 14:48 IST
Last Updated 15 ಜನವರಿ 2019, 14:48 IST

1. ಇತ್ತೀಚೆಗೆ ಹರಪನಹಳ್ಳಿ ತಾಲ್ಲೂಕನ್ನು ಯಾವ ಜಿಲ್ಲೆಗೆ ಸೇರಿಸಲಾಗಿದೆ?

ಅ) ಹಾವೇರಿ ಆ) ದಾವಣಗೆರೆ
ಇ) ರಾಯಚೂರು ಈ) ಬಳ್ಳಾರಿ

2. ‘ಭಾರಜಲ’ ಎಂದು ಯಾವುದನ್ನು ಕರೆಯಲಾಗುತ್ತದೆ?

ADVERTISEMENT

ಅ) ರಾಡಿ ನೀರು
ಆ) ಡ್ಯೂಟೇರಿಯಂ ಆಕ್ಸೈಡ್
ಇ) ಮಳೆ ನೀರು
ಈ) ಟ್ರೈಟಿಯಂ ಆಕ್ಸೈಡ್

3. ಒಂದು ಐಸ್‌ಹಾಕಿ ತಂಡದಲ್ಲಿ ಎಷ್ಟು ಮಂದಿ ಆಟಗಾರರಿರುತ್ತಾರೆ?

ಅ) ಎಂಟು ಆ) ಹತ್ತು
ಇ) ಆರು ಈ) ಹನ್ನೆರಡು

4. ಈಜಿಪ್ಟಿನ ಜನರ ಕಥೆಯನ್ನು ನಿರೂಪಿಸುವ ನಿರಂಜನರ ಕಾದಂಬರಿಯ ಹೆಸರೇನು?

ಅ) ಚಿರಸ್ಮರಣೆ ಆ) ಸ್ವಾಮಿ ಅಪರಂಪಾರ
ಇ) ಮೃತ್ಯುಂಜಯ ಈ) ವಿಮೋಚನೆ

5. ‘ಮೇರಾ ಜೂತಾ ಹೈ ಜಪಾನಿ’ ಎಂದು ಆರಂಭವಾಗುವ ಮುಖೇಶ್ ಗಾಯನದ, ರಾಜಕಪೂರ್ ಅಭಿನಯದ ಹಾಡು ಯಾವ ಚಿತ್ರದ್ದು?

ಅ) ಮೇರಾ ನಾಮ್ ಜೋಕರ್
ಆ) ಆವಾರ ಇ) ಸಂಗಮ್
ಈ) ಶ್ರೀ 420

6. ‌ಇವುಗಳಲ್ಲಿ ಸಿಂಧೂ ಬಯಲಿನ ನಾಗರಿಕತೆಯ ಕಾಲದ ಬಂದರು ಪಟ್ಟಣ ಯಾವುದು?

ಅ) ಹರಪ್ಪ ಆ) ಮೊಹಂಜೋದಾರೋ
ಇ) ಲೋಥಾಲ್ ಈ) ಭಟ್ಟಿಪ್ರೋಲು

7. ‘ಛಂದ ಪುಸ್ತಕ’ ಪ್ರಕಾಶನ ಸಂಸ್ಥೆಯನ್ನು ನಡೆಸುತ್ತಿರುವ ಕಥೆಗಾರರು ಯಾರು?

ಅ) ವಿವೇಕ ಶಾನಭಾಗ ಆ) ಡಿ. ವಿ. ಪ್ರಹ್ಲಾದ್ ಇ) ವಸುಧೇಂದ್ರ
ಈ) ಗುರುಪ್ರಸಾದ್ ಕಾಗಿನೆಲೆ

8. ಯಾವ ಬಗೆಯ ಮಣ್ಣು ನೀರನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ?

ಅ) ಮರಳು ಮಣ್ಣು ಆ) ಜೇಡಿಮಣ್ಣು
ಇ) ಹೂಳುಮಣ್ಣು ಈ) ಧೂಳುಮಣ್ಣು

9. ಮಾಧ್ಯಮ ಕ್ಷೇತ್ರದಲ್ಲಿ ‘ಸ್ಕೂಪ್’ ಎಂದರೇನು?

ಅ) ವಿಸ್ತೃತವಾಗಿ ಬಿತ್ತರಿಸಿದ ಸುದ್ದಿ
ಆ) ತಡೆಹಿಡಿದ ಸುದ್ದಿ ಇ) ಗಾಳಿಸುದ್ದಿ
ಈ) ಎಲ್ಲರಿಗಿಂತ ಮೊದಲು ಬಿತ್ತರಿಸಿದ ಸುದ್ದಿ

10. ಮೈಸೂರು ಸಂಸ್ಥಾನದ ನಾಡಗೀತೆ ಯಾವುದಾಗಿತ್ತು?

ಅ) ಶ್ರೀಚಾಮುಂಡೇಶ್ವರಿ
ಆ)ಸ್ವಾಮಿದೇವನೆ ಲೋಕಪಾಲನೆ
ಇ) ಕಾಯೌ ಶ್ರೀಗೌರಿ
ಈ) ಜಯಭಾರತ ಜನನಿಯ ತನುಜಾತೆ

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. 1982

2. ದೇನಾ ಮತ್ತು ವಿಜಯಾ ಬ್ಯಾಂಕ್

3. ಬ್ರಿಡ್ಜ್

4. ವಜ್ರ

5. ಜೇಮ್ಸ್ ಪ್ರಿನ್ಸೆಪ್

6. 154 7. ಶಾಂತಕವಿ

8. ಲಾಲಾ ಲಜಪತ್ ರಾಯ್

9. ಕೇರಳ

10. ಯೋಜನಾ ಆಯೋಗ

ಎಸ್‌. ಎಲ್‌. ಶ್ರೀನಿವಾಸ ಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.