ADVERTISEMENT

ಪ್ರಜಾವಾಣಿ ಕ್ವಿಜ್ 64

ಎಸ್.ಎಲ್‌.ಶ್ರೀನಿವಾಸ ಮೂರ್ತಿ
Published 26 ಮಾರ್ಚ್ 2019, 19:46 IST
Last Updated 26 ಮಾರ್ಚ್ 2019, 19:46 IST
   

1. ಮನೋದೈಹಿಕ ಕಾಯಿಲೆ ಎಂದರೇನು?
ಅ)
ಮನಸ್ಸಿನ ಕಾಯಿಲೆ
ಆ) ದೇಹದ ಕಾಯಿಲೆ
ಇ) ಮನಸ್ಸಿನ ಕಾಯಿಲೆಯ ದೈಹಿಕ ರೂಪ
ಈ) ದೈಹಿಕ ಕಾಯಿಲೆಯ ಮಾನಸಿಕ ರೂಪ

2. ಇತ್ತೀಚೆಗೆ ಪ್ರಚಾರಕ್ಕೆ ಬರುತ್ತಿರುವ ಆಟ ಪಬ್‌ಜಿ ಎಂಬುದರ ವಿಸ್ತೃತ ರೂಪವೇನು?
ಅ)
ಪ್ಲೇಯರ್ ಅನ್‌ನೋನ್ಸ್ ಬ್ಯಾಟಲ್ ಗ್ರೌಂಡ್
ಆ) ಪೀಪಲ್ ಅನ್‌ನೋನ್ಸ್ ಬ್ಯಾಟಲ್ ಗ್ರೌಂಡ್
ಇ) ಪಬ್ಲಿಕ್ ಅನ್‌ನೋನ್ಸ್ ಬ್ಯಾಟಲ್ ಗ್ರೌಂಡ್
ಈ) ಪ್ಲೇ ಅಲ್ಟಿಮೇಟ್ ಬ್ಯಾಟಲ್ ಗ್ರೌಂಡ್

3. ಮೊಹರೆ ಹಣಮಂತರಾಯರು ಯಾವ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ್ದರು?
ಅ)
ಆಡಳಿತ
‌ಆ) ಕ್ರೀಡೆ
ಇ) ಪತ್ರಿಕೋದ್ಯಮ
ಈ) ಕೃಷಿ

ADVERTISEMENT

4. ಖ್ಯಾತ ಕಲಾಚರಿತ್ರಕಾರರಾಗಿದ್ದ ಆನಂದಕುಮಾರಸ್ವಾಮಿ ಯಾವ ದೇಶದಲ್ಲಿ ಜನಿಸಿದವರು?
ಅ)
ಭಾರತ
ಆ) ಶ್ರೀಲಂಕಾ
ಇ) ಅಮೆರಿಕ
ಈ) ಇಂಗ್ಲೆಂಡ್

5. ಗಾಂಧೀಜಿಯವರನ್ನು ಅವಮಾನಿಸಿದ್ದು ಆಫ್ರಿಕಾದ ಯಾವ ಊರಿನ ರೈಲ್ವೆ ನಿಲ್ದಾಣದಲ್ಲಿ?
ಅ)
ಪೀಟರ್ ಮರಿಟ್ಸ್‌ಬರ್ಗ್
ಆ) ಜೋಹಾನ್ಸ್‌ಬರ್ಗ್
ಇ) ಕೇಪ್‌ಟೌನ್
ಈ) ಡರ್ಬನ್

6. ಪ್ರಸ್ತುತ ವಿಶ್ವಸಂಸ್ಥೆಯ ಭದ್ರತಾಮಂಡಳಿಯಲ್ಲಿರುವ ಶಾಶ್ವತ ಸದಸ್ಯ ದೇಶಗಳ ಸಂಖ್ಯೆ ಎಷ್ಟು?
ಅ)
ಆರು
ಆ) ನಾಲ್ಕು
ಇ) ಎಂಟು
ಈ) ಐದು

7. ಮುದ್ರಣಯಂತ್ರವನ್ನು ಕಂಡುಹಿಡಿದ ಜೋಹಾನ್ಸ್ ಗುಟೆನ್‌ಬರ್ಗ್ ಯಾವ ದೇಶದವನು?
ಅ)
ಆಸ್ಟ್ರಿಯಾ
ಆ) ಜರ್ಮನಿ
ಇ) ರಷ್ಯಾ
ಈ) ಪೋಲೆಂಡ್

8. ಕೃಷ್ಣ ಕರ್ಣಾಮೃತವನ್ನು ರಚಿಸಿದ ಸಂಸ್ಕೃತ ಕವಿ ಯಾರು?
ಅ) ಲೀಲಾಶುಕ
ಆ) ಜಯದೇವ
ಇ) ಭಟ್ಟ ನಾರಾಯಣ
ಈ) ಭಕ್ತಿ ವೇದಾಂತ ಪ್ರಭುಪಾದ

9. ಈಡಿಪಸ್ ಕಾಂಪ್ಲೆಕ್ಸ್ ಎಂಬ ಮನೋವೈಜ್ಞಾನಿಕ ಪರಿಕಲ್ಪನೆಯನ್ನು ಪ್ರತಿಪಾದಿಸಿದವರು ಯಾರು?
ಅ)
ಕಾರ್ಲ್ ಯುಂಗ್
ಆ) ಆಡ್ಲರ್
ಇ) ಸಿಗ್ಮಂಡ್ ಫ್ರಾಯ್ಡ್
ಈ) ಇವಾನ್ ಪಾವ್ಲೋವ್

10. ರೆಸ್ಟೋರೆಂಟ್‌ಗಳಲ್ಲಿ ಬಳಸುವ ಅ ಲ ಕಾರ್ಟೆ ಎಂಬ ಶಬ್ದವು ಏನನ್ನು ಸೂಚಿಸುತ್ತದೆ?
ಅ)
ಬೇಕಾದ ಆಹಾರ
ಆ) ಸೀಮಿತ ಆಹಾರ
ಇ) ದೇಶೀ ಆಹಾರ
ಈ) ದ್ರವಾಹಾರ

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1.ಲಾಲ್ ಬಹದ್ದೂರ್ ಶಾಸ್ತ್ರಿ
2. ರಹಮತ್ ತರೀಕೆರೆ
3. ಲಿಯೋ ಟಾಲ್ಸ್‌ಸ್ಟಾಯ್
4. ಇಂದ್ರ
5. ಕಾಶ್ಮೀರ
6. ಟಾರ್ಗೆಟ್ ರೇಟಿಂಗ್ ಪಾಯಿಂಟ್
7. ಮಾರ್ಚ್ 24ರಂದು
8. ದಮ್ಮಡಿ
9. ಝೀರೋ ಪಾಯಿಂಟ್
10. ಸ್ರಗ್ಧರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.