ADVERTISEMENT

ಪ್ರಜಾವಾಣಿ ಕ್ವಿಜ್

ಎಸ್.ಎಲ್‌.ಶ್ರೀನಿವಾಸ ಮೂರ್ತಿ
Published 2 ಏಪ್ರಿಲ್ 2019, 19:31 IST
Last Updated 2 ಏಪ್ರಿಲ್ 2019, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

1. ಇನ್ಸೋಮ್ನಿಯಾ ಎಂದರೇನು?
ಅ) ಅತಿನಿದ್ರೆ
ಆ) ನಿದ್ರಾ ನಡಿಗೆ
ಇ) ನಿದ್ರಾ ಹೀನತೆ
ಈ) ನಿದ್ರಾಭಂಗ

2. ಮೋಹನ ಸ್ವಾಮಿ ಯಾರು ರಚಿಸಿರುವ ಕೃತಿ?
ಅ) ವಸುಧೇಂದ್ರ ಆ) ವಿವೇಕ ಶಾನಭಾಗ
ಇ) ಜಯಂತ ಕಾಯ್ಕಿಣಿ
ಈ) ನಟರಾಜ ಹುಳಿಯಾರ್

3. ಅಬ್ದುಲ್‌ ಕಲಾಂ ದ್ವೀಪವು ಯಾವ ರಾಜ್ಯದ ಕರಾವಳಿಗೆ ಸಮೀಪವಾಗಿದೆ?
ಅ) ಬಿಹಾರ ಆ) ಒಡಿಶಾ
ಇ) ತೆಲಂಗಾಣ ಈ) ಬಂಗಾಲ

ADVERTISEMENT

4 . ಗೋರಖ್‌ಪುರದ ಗೀತಾ ಪ್ರೆಸ್ ಯಾವ ಬಗೆಯ ಪುಸ್ತಕಗಳ ಪ್ರಕಟಣೆಗಾಗಿ ಪ್ರಸಿದ್ಧವಾಗಿದೆ?
ಅ) ನಿಘಂಟುಗಳು ಆ) ಸಾಹಿತ್ಯ ಕೃತಿಗಳು
ಇ) ಧಾರ್ಮಿಕ ಕೃತಿಗಳು
ಈ) ಕಾನೂನು ಪುಸ್ತಕಗಳು

5. ಮನೋಹರ ಪರಿಕ್ಕರ್ ಎಷ್ಟು ಅವಧಿಗಳಿಗೆ ಗೋವಾದ ಮುಖ್ಯಮಂತ್ರಿಯಾಗಿದ್ದರು?
ಅ) ನಾಲ್ಕು ಆ) ಮೂರು
ಇ) ಐದು ಈ) ಆರು

6. ಕರ್ನಾಟಕ ಸಂಗೀತ ಕಛೇರಿಯಲ್ಲಿ ಕುನ್ನಕೋಲ್ ಎಂದರೇನು?
ಅ) ಹಾಡುಗಾರಿಕೆ
ಆ) ಪಕ್ಕವಾದ್ಯ
ಇ) ತನಿ ಆವರ್ತನ
ಈ) ಬಾಯಲ್ಲಿ ತಾಳವಿನ್ಯಾಸವನ್ನು ಹಾಡುವುದು

7. ಪಿ.ಎಂ. ನರೇಂದ್ರ ಮೋದಿ ಚಲನಚಿತ್ರದಲ್ಲಿ ನಾಯಕನ ಪಾತ್ರವಹಿಸಿರುವ ನಟ ಯಾರು?
ಅ) ಅಮೀರ್ ಖಾನ್
ಆ) ವಿವೇಕ್ ಒಬೆರಾಯ್
ಇ) ಬೊಮನ್ ಇರಾನಿ
ಈ) ಅನುಪಮ್ ಖೇರ್

8. ಹುಲ್ಲೂರು ಶ್ರೀನಿವಾಸ ಜೋಯಿಸರು ಯಾವ ಪ್ರದೇಶದ ಇತಿಹಾಸದ ಬಗ್ಗೆ ಹೆಚ್ಚು ಸಂಶೋಧನೆ ನಡೆಸಿದ್ದಾರೆ?
ಅ) ಚಿತ್ರದುರ್ಗ
ಆ) ಕೆಳದಿ
ಇ) ಕೋಲಾರ
ಈ) ಮೈಸೂರು

9. ಸಸ್ಯ ಜೀವಕೋಶಗಳಲ್ಲಿ ದ್ಯುತಿ ಸಂಶ್ಲೇಷಣೆಯನ್ನು ನಡೆಸುವ ಪ್ರಮುಖ ಭಾಗ ಯಾವುದು?
ಅ) ಮೈಟೋಕಾಂಡ್ರಿಯಾ
ಆ) ಕ್ಲೋರೋಪ್ಲಾಸ್ಟ್
ಇ ) ಕೋಶ ಭಿತ್ತಿ ಈ) ಕೋಶ ಕೇಂದ್ರ

10. ಚೆಪಾಕ್ ಕ್ರೀಡಾಂಗಣ ಯಾವ ನಗರದಲ್ಲಿದೆ?
ಅ) ದೆಹಲಿ ಆ) ಕೋಲ್ಕತ್ತ
ಇ) ಚೆನ್ನೈ ಈ) ಇಂದೋರ್

ಹಿಂದಿನ ಸಂಚಿಕೆಯ ಸರಿ ಉತ್ತರಗಳು
1. ಮನಸ್ಸಿನ ಕಾಯಿಲೆಯ ದೈಹಿಕ ರೂಪ
2. ಪ್ಲೇಯರ್ ಅನ್‌ನೋನ್ಸ್ ಬ್ಯಾಟಲ್ ಗ್ರೌಂಡ್
3. ಪತ್ರಿಕೋದ್ಯಮ 4. ಶ್ರೀಲಂಕಾ 5. ಪೀಟರ್ ಮರಿಟ್ಸ್‌ಬರ್ಗ್ 6. ಐದು 7. ಜರ್ಮನಿ
8. ಲೀಲಾಶುಕ 9. ಸಿಗ್ಮಂಡ್ ಫ್ರಾಯ್ಡ್
10. ಬೇಕಾದ ಆಹಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.