ADVERTISEMENT

ಪ್ರಜಾವಾಣಿ ಕ್ವಿಜ್ 82: ಜಯಚಾಮರಾಜೇಂದ್ರ ಒಡೆಯರ್ ಅವರ ತಂದೆಯ ಹೆಸರೇನು?

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 14:17 IST
Last Updated 30 ಜುಲೈ 2019, 14:17 IST

1. ಕಾಂಟೂರ್ ಮಾದರಿಯ ಬೇಸಾಯವನ್ನು ಎಲ್ಲಿ ಮಾಡಲಾಗುತ್ತದೆ?

ಅ) ಮರುಭೂಮಿ ಆ) ಜೌಗು ನೆಲ
ಇ) ಕಾಡುಪ್ರದೇಶ
ಈ) ಇಳಿಜಾರು ನೆಲ

2. ಆನೇಕಲ್ ಸುಬ್ರಾಯ ಶಾಸ್ತ್ರಿಗಳು ಯಾವ ವಿಷಯದ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದರೆಂದು ಹೇಳಲಾಗುತ್ತದೆ?

ADVERTISEMENT

ಅ) ನೌಕಾಶಾಸ್ತ್ರ ಆ) ವಿಮಾನ ಶಾಸ್ತ್ರ

ಇ) ಕೀಟಶಾಸ್ತ್ರ ಈ) ಸಸ್ಯ ಶಾಸ್ತ್ರ

3. ತನ್ನ ಮಹಾಭಾರತವನ್ನು ‘ಕೃಷ್ಣ ಕಥೆ’ ಎಂದು ಕರೆದ ಕನ್ನಡದ ಕವಿ ಯಾರು?

ಅ) ಪಂಪ ಆ) ಕುಮಾರವ್ಯಾಸ

ಇ) ರನ್ನ ಈ)ಸಾಳ್ವ

4. ಮಹೇಂದ್ರ ಸಿಂಗ್ ಧೋನಿಗೆ ಭಾರತೀಯ ಸೈನ್ಯದಲ್ಲಿ ಯಾವ ಗೌರವ ಹುದ್ದೆ ನೀಡಲಾಗಿದೆ?

ಅ) ಕಮಾಂಡರ್ ಆ) ಮೇಜರ್

ಇ) ಜನರಲ್ ಈ) ಲೆಫ್ಟಿನೆಂಟ್ ಕರ್ನಲ್

5. 1975ರ ತುರ್ತುಸ್ಥಿತಿಯನ್ನು ‘ಅನುಶಾಸನ ಪರ್ವ’ ಎಂದು ಕರೆದವರು ಯಾರು?

ಅ) ಮೊರಾರ್ಜಿ ಆ) ರಾಜ್ ನಾರಾಯಣ್
ಇ) ವಿನೋಬಾ ಭಾವೆ
ಈ) ಜಯಪ್ರಕಾಶ್ ನಾರಾಯಣ್

6) ಇವಾನ್ ಹೋ, ಕೆನಿಲ್ ವರ್ತ್ ಮುಂತಾದ ಐತಿಹಾಸಿಕ ಕಾದಂಬರಿಗಳ ಲೇಖಕ ಯಾರು?

ಅ) ಅಲೆಗ್ಸಾಂಡರ್ ಡ್ಯೂಮಾ ಆ) ವಾಲ್ಟರ್ ಸ್ಕಾಟ್ ಇ) ವಿಕ್ಟರ್ ಹ್ಯೂಗೊ ಈ) ರೈಡರ್ ಹೆಗ್ಗಾರ್ಡ್

7)ತಳಿವಿಜ್ಞಾನಿಗಳು ಸಾಧಾರಣವಾಗಿ ಯಾವ ಕೀಟವನ್ನು ತಮ್ಮ ಪ್ರಯೋಗಗಳಿಗೆ ಅತಿಹೆಚ್ಚು ಬಳಸುತ್ತಾರೆ?

ಅ) ಗುಂಗಾಡು ಆ) ಇರುವೆ

ಇ) ಸೊಳ್ಳೆ ಈ) ಜಿರಳೆ

8. ಜಯಚಾಮರಾಜೇಂದ್ರ ಒಡೆಯರ್ ಅವರ ತಂದೆಯ ಹೆಸರೇನು?

ಅ) ಚಾಮರಾಜ ಒಡೆಯರ್
ಆ) ಕೃಷ್ಣರಾಜ ಒಡೆಯರ್
ಇ) ನರಸಿಂಹರಾಜ ಒಡೆಯರ್
ಈ) ರಾಜ ಒಡೆಯರ್

9. ಇವುಗಳಲ್ಲಿ ಗಾತ್ರದ ದೃಷ್ಟಿಯಿಂದ ಅತಿ ದೊಡ್ಡದಾದ ವಾದ್ಯ ಯಾವುದು?

ಅ) ಜಗ್ಗಲಿಗೆ ಆ) ತಮಟೆ

ಇ) ದುಡಿ ಈ) ಖಂಜರ

10. ರೋಮ್‍ನ ಅಧಿಪತಿಯಾಗಿದ್ದ ಜೂಲಿಯಸ್ ಸೀಸರ್‌ನ ಸಾವಿಗೆ ಕಾರಣವೇನು?

ಅ) ಯುದ್ಧ ಆ) ಅನಾರೋಗ್ಯ

ಇ)ಅಪಘಾತ ಈ)ಕೊಲೆ

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ಶಾಸಕಾಂಗ ಪಕ್ಷ 2. ಬೆನ್ ಸ್ಟೋಕ್ಸ್ 3.ಜನ್ನ 4.ಕ್ರಿಯೆಯ ವೇಗ ಹೆಚ್ಚಿಸುವುದು 5. ಜೀವನ ಚೈತ್ರ

6. ವಿಂಬಲ್ಡನ್ 7. ಹಾಳುಗೋಡೆ ಹಿಂದೆ 8.ಪೂರ್ಣಯ್ಯ 9.ಯಕ್ಷಿ 10.ಫೇಸ್‌ಬುಕ್

***
ಎಸ್‌.ಎಲ್. ಶ್ರೀನಿವಾಸಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.