ADVERTISEMENT

ಪ್ರಜಾವಾಣಿ ಕ್ವಿಜ್ 85

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 18:45 IST
Last Updated 20 ಆಗಸ್ಟ್ 2019, 18:45 IST

1. ಮಿಲ್ಲರ್ ಸಮಿತಿಯು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಯಾವ ವಿಷಯದ ಬಗ್ಗೆ ವರದಿಯನ್ನು ಸಲ್ಲಿಸಿತು?

ಅ) ಕೃಷಿ ಆ) ಆಡಳಿತ

ಇ) ಮೀಸಲಾತಿ ಈ) ಕೈಗಾರಿಕೆ

ADVERTISEMENT

2. ಕಾಳಿಂಗ ನಾವಡರು ಯಾವ ಕ್ಷೇತ್ರದ ಪ್ರಸಿದ್ಧ ವ್ಯಕ್ತಿ?

ಅ) ಹರಿಕಥೆ ಆ) ಚಿತ್ರಕಲೆ

ಇ) ಯಕ್ಷಗಾನ ಈ) ವ್ಯಂಗ್ಯಚಿತ್ರ

3. ಭಾರತೀಯ ಜನಸಂಘ ಎಂಬ ರಾಜಕೀಯ ಪಕ್ಷದ ಸ್ಥಾಪಕರು ಯಾರು?

ಅ) ಜೆ.ಬಿ.ಕೃಪಲಾನಿ

ಆ) ಶ್ಯಾಮ ಪ್ರಸಾದ್ ಮುಖರ್ಜಿ
ಇ) ರಾಜ್ ನಾರಾಯಣ್

ಈ) ಸೀತಾರಾಂ ಕೇಸರಿ

4. ಮಸ್ಕತ್ ಯಾವ ದೇಶದ ರಾಜಧಾನಿ?

ಅ) ಒಮಾನ್ ಆ) ಸಿರಿಯಾ ಇ) ಲೆಬನಾನ್ ಈ)ಟರ್ಕಿ

5) ಹಿಸ್ಟಮಿನ್ ಎಂಬ ಜೀವರಾಸಾಯನಿಕ ವಸ್ತುವಿನ ಕೆರಳಿಕೆಯಿಂದ ಉಂಟಾಗುವ ಕಾಯಿಲೆ ಯಾವುದು?

ಅ) ಅಲರ್ಜಿ ಆ) ಕಾಮಾಲೆ
ಇ) ಕಾಲುನೋವು ಈ) ಮಧುಮೇಹ

6) 19ನೇ ಶತಮಾನದಲ್ಲಿ ಹಲಗಲಿಯ ಬೇಡರು ಬ್ರಿಟಿಷರ ಯಾವ ಕಾಯಿದೆಯ ವಿರುದ್ಧ ಹೋರಾಡಿದರು?

ಅ) ದತ್ತು ಮಕ್ಕಳಿಗೆ ಹಕ್ಕಿಲ್ಲ

ಆ) ಸಹಾಯಕ ಸೈನ್ಯ ಪದ್ಧತಿ
ಇ) ಶಸ್ತ್ರಾಸ್ತ್ರ ನಿಯಂತ್ರಣ

ಈ) ದೇವದಾಸಿ ನಿಯಂತ್ರಣ

7. ‘ಕೆಂಪೇಗೌಡ-2’ ಚಲನಚಿತ್ರದಲ್ಲಿ ನಟಿಸಿರುವ ಖ್ಯಾತ ಕ್ರಿಕೆಟ್ ಆಟಗಾರ ಯಾರು?

ಅ) ಶ್ರೀಶಾಂತ್ ಆ) ರೋಜರ್ ಬಿನ್ನಿ
ಇ) ವಿರಾಟ್ ಕೊಹ್ಲಿ ಈ) ರವಿಶಾಸ್ತ್ರಿ

8. ತರಾಸು ಅವರ ಕೆಳಗಿನ ಯಾವ ಕಾದಂಬರಿ ಚಿತ್ರದುರ್ಗದ ಇತಿಹಾಸಕ್ಕೆ ಸಂಬಂಧಿಸಿದ್ದಲ್ಲ?

ಅ) ರಕ್ತರಾತ್ರಿ ಆ) ತಿರುಗುಬಾಣ
ಇ) ಹೊಸ ಹಗಲು ಈ) ಬೆಳಕು ತಂದ ಬಾಲಕ

9. ಹೈಗ್ರೋಮೀಟರ್‌ ಅನ್ನು ವಾತಾವರಣದಲ್ಲಿನ ಏನನ್ನು ಅಳೆಯಲು ಬಳಸಲಾಗುತ್ತದೆ?

ಅ) ಆದ್ರತೆ ಆ) ಧೂಳು ಇ) ಬಿಸಿ ಈ) ಧ್ವನಿ

10. 1999ರಲ್ಲಿ ಬಳ್ಳಾರಿಯಲ್ಲಿ ಸುಷ್ಮಾ ಸ್ವರಾಜ್ ಯಾರ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು?

ಅ) ರಾಜೀವ್ ಗಾಂಧಿ

ಆ) ಸೋನಿಯಾ ಗಾಂಧಿ
ಇ) ಪಿ.ವಿ. ನರಸಿಂಹ ರಾವ್

ಈ) ಜಾರ್ಜ್ ಫರ್ನಾಂಡಿಸ್‌

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ಆಯುರ್ವೇದ 2. ದಿವಾಕರ 3. ಕೆಂಪು
4. ಮಾದೇಶ್ವರ. 5. ಸಾಕ್ರೆಟೀಸ್ 6. ನಾದಮಯ
7. ಮೇಣ 8. ವಿರಾಟ್ ಕೊಹ್ಲಿ 9. ಕರೋಕೆ
10. ಶಿವರಾಯ

ಎಸ್‌. ಎಲ್‌. ಶ್ರೀನಿವಾಸಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.