ADVERTISEMENT

ಪುರಾಣಗಳ ಪ್ರಕಾರ ಗಂಗಾನದಿಯು ಹುಟ್ಟಿದ್ದು ಎಲ್ಲಿ?

ಎಸ್.ಎಲ್‌.ಶ್ರೀನಿವಾಸ ಮೂರ್ತಿ
Published 27 ನವೆಂಬರ್ 2018, 19:45 IST
Last Updated 27 ನವೆಂಬರ್ 2018, 19:45 IST

1. ‘ನಂದಿಗಿರಿನಾಥ’ರೆಂದು ಪ್ರಸಿದ್ಧರಾಗಿದ್ದ ಅರಸರು ಯಾರು?

ಅ) ಚೋಳರು ಆ) ಗಂಗರು
ಇ) ನೊಳಂಬರು ಈ) ಬಾಣರು

2. ಇವುಗಳಲ್ಲಿ ಯಾವುದು ಜಾಗತಿಕ ತಾಪಮಾನದ ಹೆಚ್ಚಳಕ್ಕೆ ಪ್ರಮುಖ ಕಾರಣವೆಂದು ಪರಿಗಣಿತವಾಗಿಲ್ಲ?

ADVERTISEMENT

ಅ) ಇಂಗಾಲದ ಡೈ ಆಕ್ಸೈಡ್‌ ಆ) ಮೀಥೇನ್
ಇ) ಆಮ್ಲಜನಕ ಈ) ನೈಟ್ರಸ್ ಆಕ್ಸೈಡ್‌

3. ಕೆಳಗಿನ ನ್ಯಾಯಾಧೀಶರಲ್ಲಿ ಯಾರ ಮೇಲೆ ಮಹಾಭಿಯೋಗದ ಕ್ರಮವನ್ನು ಜರುಗಿಸಲಾಗಿಲ್ಲ?

ಅ) ಜೆ.ಎಸ್. ಕೇಹರ್ ಆ) ಸುಮಿತ್ರ ಸೇನ್
ಇ) ಪಿ.ಡಿ. ದಿನಕರನ್ ಈ) ವಿ. ರಾಮಸ್ವಾಮಿ

4. ಪುರಾಣಗಳ ಪ್ರಕಾರ ಗಂಗಾನದಿಯು ಹುಟ್ಟಿದ್ದು ಎಲ್ಲಿ?

ಅ) ಶಿವನ ಜಟೆ ಆ) ಹರಿಯ ತೊಡೆ
ಇ) ಸಮುದ್ರ ಈ) ಹಿಮಾಲಯ

5. ವೈದ್ಯಕೀಯವಾಗಿ ಎನಿಮಾವನ್ನು ಏಕೆ ಬಳಸಲಾಗುತ್ತದೆ?

ಅ) ಉಪವಾಸ ಆ) ದೇಹಾಯಾಸ
ಇ) ಶೀಘ್ರ ಮಲರೂಪಿ ತ್ಯಾಜ್ಯಗಳ ವಿಸರ್ಜನೆ
ಈ) ಹಸಿವು ಹೆಚ್ಚಿಸಲು

6. ‘ಹಿತ್ತಾಳೆ ಕಿವಿಯವನು’ ಎಂಬ ನುಡಿಗಟ್ಟಿನ ಸರಿಯಾದ ಅರ್ಥವೇನು?

ಅ) ತೆಳುವಾದ ಕಿವಿಯವ ಆ) ಕಿವುಡ
ಇ) ಎಲ್ಲ ಅಭಿಪ್ರಾಯವನ್ನೂ ಕುರುಡಾಗಿ ಒಪ್ಪುವವ
ಈ) ತಲೆಹರಟೆ

7. ಸಾಮಾನ್ಯವಾಗಿ ಒಂದು ಬಾರಿಗೆ ಹುಲಿಯು ಗರಿಷ್ಠ ಎಷ್ಟು ಮರಿಗಳಿಗೆ ಜನ್ಮ ನೀಡುತ್ತದೆ?

ಅ) ಎರಡು ಆ) ಏಳು ಇ) ನಾಲ್ಕು ಈ) ಮೂರು

8. ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಎಷ್ಟು ಇನ್ನಿಂಗ್ಸ್‌ಗಳಲ್ಲಿ 10 ಸಾವಿರ ರನ್ ಗಳಿಸಿದರು?

ಅ) 259 ಆ) 205 ಇ) 225 ಈ) 250

9. ದೀನ್-ಎ-ಇಲಾಹಿ ಎಂಬ ಪಂಥವನ್ನು ಆರಂಭಿಸಿದ ದೊರೆ ಯಾರು?

ಅ) ಜಹಂಗೀರ್ ಆ) ಬಾಬರ್
ಇ) ಔರಂಗಜೇಬ್ ಈ) ಅಕ್ಬರ್

10. ‘ಕದಳಿ ಹೊಕ್ಕು ಬಂದೆ’ ಯಾರು ರಚಿಸಿದ ಪ್ರವಾಸ ಕಥನ?

ಅ) ರಹಮತ್ ತರಿಕೆರೆ ಆ) ನೇಮಿಚಂದ್ರ
ಇ) ಚಂದ್ರಶೇಖರ ಆಲೂರು

ಈ) ಚಿರಂಜೀವಿ

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ಆಂಟ್‌ವರ್ಪ್ 2. ಗೊನೊರಿಯಾ 3. ಇಂಡಿಯನ್ ಫೈನಾನ್ಷಿಯಲ್ ಸಿಸ್ಟಂ ಕೋಡ್ 4. ಶಿವ 5. ಅಮರನಾಥ್
6. ಗ್ರಾಮಾಯಣ 7. ದೇವರಾಜ ಅರಸು 8. ತೆಲುಗು 9. ಮಾಯಾಮಾಳವ ಗೌಳ 10. ಎರಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.