ADVERTISEMENT

ಪ್ರಜಾವಾಣಿ ಕ್ವಿಜ್

ಎಸ್.ಎಲ್‌.ಶ್ರೀನಿವಾಸ ಮೂರ್ತಿ
Published 5 ನವೆಂಬರ್ 2019, 19:30 IST
Last Updated 5 ನವೆಂಬರ್ 2019, 19:30 IST
   

1. ಸಿನ್ನಾಬಾರ್ ಎಂಬುದು ಯಾವ ಲೋಹದ ಅದಿರು?
ಅ) ತಾಮ್ರ ಆ) ಬೆಳ್ಳಿ
ಇ) ಪಾದರಸ ಈ) ಸೀಸ

2. ‘ಪಾಪು ಗಾಂಧಿ ಬಾಪು ಗಾಂಧಿ ಆದ ಕತೆ’ ಯಾರು ರಚಿಸಿದ ಕೃತಿ?
ಅ) ಕಂಚ್ಯಾಣಿ ಶರಣಪ್ಪ
ಆ) ಬೋಳುವಾರು ಮಹಮ್ಮದ್ ಕುಂಞ
ಇ) ಟಿ.ಪಿ.ಅಶೋಕ
ಈ) ಡಿ.ಆರ್.ನಾಗರಾಜ್

3. ಎ.ಸಿ.ಡೈನಮೋ ಎಂತಹ ವಿದ್ಯುತ್ ಪ್ರವಾಹವನ್ನು ಉತ್ಪತ್ತಿ ಮಾಡುತ್ತದೆ?
ಅ) ಪರ್ಯಾಯ ಆ) ತರಂಗಿತ
ಇ) ನೇರ ಈ) ವಕ್ರ

ADVERTISEMENT

4. ಇವುಗಳಲ್ಲಿ ಯಾವುದನ್ನು ರೆಡ್ ಕ್ರಾಸ್ ಸಂಸ್ಥೆ ತನ್ನ ಚಿಹ್ನೆಯಾಗಿ ಬಳಸುವುದಿಲ್ಲ?
ಅ)ಕೆಂಪು ಪಟ್ಟಿ ಆ) ಕೆಂಪು ಕ್ರಾಸ್
ಇ)ಕೆಂಪು ಅರ್ಧ ಚಂದ್ರ
ಈ) ಕೆಂಪು ಕ್ರಿಸ್ಟಲ್

5. ಶಸ್ತ್ರಚಿಕಿತ್ಸೆಗೆ ಮುನ್ನ ಎನಿಮಾವನ್ನು ಏಕೆ ಬಳಸುತ್ತಾರೆ?
ಅ) ಸರಾಗ ಉಸಿರಾಟಕ್ಕೆ ಆ) ಗುದನಾಳದ ಶುದ್ಧಿ
ಇ) ಹೃದಯದ ಶುದ್ಧಿ ಈ) ರಕ್ತಶುದ್ಧಿ

6. ಚಿಂದೋಡಿ ಲೀಲಾ ಯಾವ ಕ್ಷೇತ್ರದ ಪ್ರಸಿದ್ಧ ವ್ಯಕ್ತಿ?
ಅ) ಚಿತ್ರಕಲೆ ಆ) ವೈದ್ಯಕೀಯ
ಇ) ಕೃಷಿ ಈ) ರಂಗಭೂಮಿ

7. ಇವುಗಳಲ್ಲಿ ಯಾವ ಭಾಷೆ ಭಾರತದ ಅಧಿಕೃತ ಭಾಷೆಗಳ ಪಟ್ಟಿಯಲ್ಲಿ ಸೇರಿಲ್ಲ?

ಅ) ಬೋಡೊ ಆ) ಸಿಂಧಿ

ಇ) ಡೋಗ್ರಿ ಈ) ಹವ್ಯಕ

8. ಗಾದೆಯನ್ನು ಪೂರ್ತಿಮಾಡಿ: ‘ಹನುಮಂತ ಹಗ್ಗ ತಿನ್ನುವಾಗ-------------’
ಅ) ಯಾರೂ ನೋಡಬಾರದು ಆ) ಪ್ರಸಾದ ಏನು
ಇ) ಪೂಜಾರಿ ಶ್ಯಾವಿಗೆ ಕೇಳಿದನಂತೆ
ಈ) ಪೂಜಾರಿ ಪೂಜಿಸಿದಂತೆ

9. ರಾಣಿ ರಾಂಫಲ್ ಯಾವ ಕ್ರೀಡೆಗೆ ಸಂಬಂಧಿಸಿದ ಮಹಿಳೆ?
ಅ) ಹಾಕಿ ಆ) ಕೊಕ್ಕೋ
ಇ) ಕಬಡ್ಡಿ ಈ) ಕುಸ್ತಿ

10. ಎವರೆಸ್ಟ್‌ ಪರ್ವತವನ್ನು ಏರಿದ ಎಡ್ಮಂಡ್ ಹಿಲರಿ ಯಾವ ದೇಶದವರು?
ಅ) ನ್ಯೂಜಿಲೆಂಡ್ ಆ) ಚೀನಾ ಇ) ಇಟಲಿ ಈ) ರಷ್ಯಾ

ಹಿಂದಿನ ಸಂಚಿಕೆಯ ಸರಿ ಉತ್ತರಗಳು
1.ಅಕ್ರಮ ವಲಸಿಗರ ಪತ್ತೆ 2.ನಾಲ್ಕು 3.ಗಾಂಧಾರ 4.ಭಾರತ 5. ನರಕಾಸುರ 6.ಆನ್ ಎಕನಾಮಿಕ್ ಇನ್‌ಈಕ್ವಾಲಿಟಿ 7.ಹರ್ಮನ್ ಮೊಗ್ಲಿಂಗ್ 8.ಕಿವಿರು 9.ಸಮುದ್ರಕ್ಕೆ ಸಂಬಂಧಿಸಿದ ಹವಾಮಾನ, 10. ಸಿಕಂದ್ರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.