ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ

​ಪ್ರಜಾವಾಣಿ ವಾರ್ತೆ
Published 7 ಮೇ 2019, 19:30 IST
Last Updated 7 ಮೇ 2019, 19:30 IST

ವರ್ಗ: ಮೆರಿಟ್ ಆಧಾರಿತ

ವಿದ್ಯಾರ್ಥಿ ವೇತನ: ಬ್ರಿಟಿಷ್ ಕೌನ್ಸಿಲ್ ಜಿಆರ್‌ಇಎಟಿ ಎಜುಕೇಷನ್ ಫುಲ್ ಸ್ಕಾಲರ್‌ಶಿಪ್ಸ್‌ ಸೆಪ್ಟೆಂಬರ್- 2019

ವಿವರ: ಬ್ರಿಟನ್‍ನಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡ ಬಯಸುವ ಭಾರತೀಯ ವಿದ್ಯಾರ್ಥಿಗಳಿಗಾಗಿ ಬ್ರಿಟಿಷ್ ಕೌನ್ಸಿಲ್ ಇಂಡಿಯಾ ಈ ವಿದ್ಯಾರ್ಥಿ ವೇತನ ನೀಡುತ್ತದೆ. ಈ ಕಾರ್ಯಕ್ರಮದಡಿ 35 ಪ್ರತಿಭಾವಂತ ಭಾರತೀಯ ವಿದ್ಯಾರ್ಥಿಗಳಿಗೆ ಬ್ರಿಟನ್‍ನಲ್ಲಿ ಉನ್ನತ ಶಿಕ್ಷಣ ಕೈಗೊಳ್ಳಲು ಈ ವಿದ್ಯಾರ್ಥಿ ವೇತನ ನೆರವಾಗುತ್ತದೆ.

ADVERTISEMENT

ಅರ್ಹತೆ: ಪದವಿ ಕೋರ್ಸ್‍ಗೆ 12ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಸ್ನಾತಕೋತ್ತರ ಪದವಿ ಕೋರ್ಸ್ ಪ್ರವೇಶಕ್ಕೆ ಪದವೀಧರರಾಗಿರಬೇಕು. ಬ್ರಿಟನ್‍ನಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯಕ್ಕೆ ಪ್ರವೇಶ ಕೋರಿ ಅರ್ಜಿ ಸಲ್ಲಿಸಿರಬೇಕು. ಅಭ್ಯರ್ಥಿಯು ಭಾಷಾ ಪ್ರೌಢಿಮೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಸಂಬಂಧಿಸಿದ ಉನ್ನತ ಶಿಕ್ಷಣ ಸಂಸ್ಥೆ ಬಯಸುವ ಅರ್ಹತೆಗಳನ್ನು ಹೊಂದಿರಬೇಕು.

ಆರ್ಥಿಕ ಸೌಲಭ್ಯ ಮತ್ತು ನೆರವು: ಪದವಿ ಕೋರ್ಸ್ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕವನ್ನು ಸಂಪೂರ್ಣವಾಗಿ ವಿದ್ಯಾರ್ಥಿ ವೇತನ ಭರಿಸುತ್ತದೆ. ಸ್ನಾತಕೋತ್ತರ ಕೋರ್ಸ್ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಒಂದು ವರ್ಷದ ಬೋಧನಾ ಶುಲ್ಕವನ್ನು ಇದು ಭರಿಸುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಮೇ 15

ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮೂಲಕ

***

ವರ್ಗ: ಪ್ರತಿಭೆ ಆಧಾರಿತ

ವಿದ್ಯಾರ್ಥಿ ವೇತನ: ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿ ಎಸ್ಸೆ ಕಾಂಪಿಟೇಷನ್ ಫಾರ್ ಸ್ಕೂಲ್ ಸ್ಟುಡೆಂಟ್ಸ್-2019

ವಿವರ: ಕೇಂದ್ರ ಸರ್ಕಾರದ ಬಾಹ್ಯಾಕಾಶ ಇಲಾಖೆಯ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿಯು ಭಾರತದ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಆಯೋಜಿಸಿದೆ. ಇದರಲ್ಲಿ ಆಯ್ಕೆಯಾದವರಿಗೆ ವಿದ್ಯಾರ್ಥಿ ವೇತನ ನೀಡಲಿದೆ. ಆಸಕ್ತ ವಿದ್ಯಾರ್ಥಿಗಳು ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ಪ್ರಬಂಧ ಬರೆದು ಕಳುಹಿಸಬೇಕು.

ಅರ್ಹತೆ: 8ನೇ ತರಗತಿಯಿಂದ 10ನೇ ತರಗತಿ (ವರ್ಗ-1) ಹಾಗೂ 11ರಿಂದ 12ನೇ ತರಗತಿ (ವರ್ಗ 2) ವಿದ್ಯಾರ್ಥಿಗಳು ಪ್ರಬಂಧಗಳನ್ನು ಬರೆದು ಕಳುಹಿಸಬಹುದು.

ಆರ್ಥಿಕ ಸೌಲಭ್ಯ ಮತ್ತು ನೆರವು: ವರ್ಗ 1ರಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ₹ 2 ಸಾವಿರದಿಂದ ₹20 ಸಾವಿರದವರೆಗೆ ಹಾಗೂ ವರ್ಗ 2ರಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ₹ 2,500ರಿಂದ ₹ 25 ಸಾವಿರದವರಗೆ ಬಹುಮಾನ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಮೇ 15

ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮೂಲಕ

***

ವರ್ಗ: ಪ್ರತಿಭೆ ಆಧಾರಿತ

ವಿದ್ಯಾರ್ಥಿ ವೇತನ: ಗ್ರೀನ್ ಟ್ಯಾಲೆಂಟ್ಸ್ ಕಾಂಪಿಟೇಷನ್-2019

ವಿವರ: ಜರ್ಮನಿಯ ಶಿಕ್ಷಣ ಮತ್ತು ಸಂಶೋಧನಾ ಸಚಿವಾಲಯ ಈ ವಿದ್ಯಾರ್ಥಿ ವೇತನ ನೀಡುತ್ತದೆ. ಪರಿಸರ ಸಂರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವಿಜ್ಞಾನಿಗಳು ತಮ್ಮ ಯೋಜನಾವರದಿಯೊಂದಿಗೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಯೋಜನೆಗೆ ಆರ್ಥಿಕ ನೆರವು ದೊರೆಯುತ್ತದೆ.

ಅರ್ಹತೆ: ಸ್ನಾತಕೋತ್ತರ ಪದವಿ, ಡಾಕ್ಟರಲ್ ಡಿಗ್ರಿ, ಪೋಸ್ಟ್ ಡಾಕ್ಟರಲ್ ವ್ಯಾಸಂಗ ಮಾಡುತ್ತಿರುವ ಅಥವಾ ಈ ಪದವಿಗಳನ್ನು ಪಡೆದಿರುವ ಭಾರತೀಯರು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರು. ಮೂರು ವರ್ಷಗಳ ಅನುಭವ ಇರುವ ಯುವ ವೃತ್ತಿಪರರೂ ಅರ್ಜಿ ಸಲ್ಲಿಸಬಹುದು.

ಆರ್ಥಿಕ ಸೌಲಭ್ಯ ಮತ್ತು ನೆರವು: ಆಯ್ಕೆಯಾದ ಅಭ್ಯರ್ಥಿಗಳು ಮೂರು ತಿಂಗಳು ಜರ್ಮನಿಯಲ್ಲಿ ಸಂಶೋಧನಾ ಅಧ್ಯಯನ ಕೈಗೊಳ್ಳಬಹುದು. ಅಲ್ಲದೆ ಗ್ರೀನ್ ಟ್ಯಾಲೆಂಟ್ ಸೈನ್ಸ್ ಫೋರಂನಲ್ಲಿ ಎರಡು ವಾರ ಭಾಗವಹಿಸಲು ಅವಕಾಶ ಸಿಗಲಿದೆ. ಇದರ ಸಂಪೂರ್ಣ ಖರ್ಚು ವೆಚ್ಚವನ್ನು ವಿದ್ಯಾರ್ಥಿ ವೇತನವೇ ಭರಿಸುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಮೇ 22
ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮೂಲಕ
ಮಾಹಿತಿ: http://www.b4s.in/praja/GTC3

***

ಕೃಪೆ: www.buddy4study.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.