ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ: ನೆಕ್ಸ್ಟ್‌ಜೆನ್ ಎಜು ಸ್ಕಾಲರ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 21:41 IST
Last Updated 31 ಆಗಸ್ಟ್ 2025, 21:41 IST
   

11ನೇ ತರಗತಿ ವಿದ್ಯಾರ್ಥಿಗಳಿಗೆ ಇ.ವೈ. ಗ್ಲೋಬಲ್‌ ಡೆಲಿವರಿ ಸರ್ವೀಸಸ್‌ ಆರ್ಥಿಕ ನೆರವು ನೀಡಲಿದೆ. 

ಅರ್ಹತೆ: ದೇಶದ ಯಾವುದೇ ಸರ್ಕಾರಿ ಅಥವಾ ಖಾಸಗಿ ಕಾಲೇಜಿನಲ್ಲಿ ಪ್ರಸ್ತುತ 11ನೇ ತರಗತಿಗೆ ದಾಖಲಾಗಿರುವ ವಿದ್ಯಾರ್ಥಿಗಳು ಅರ್ಹರು.
10ನೇ ತರಗತಿಯಲ್ಲಿ ಕನಿಷ್ಠ ಶೇ 60ರಷ್ಟು ಅಂಕಗಳನ್ನು ಪಡೆದಿರಬೇಕು. ಕುಟುಂಬದ ಒಟ್ಟು ಆದಾಯವು ವಾರ್ಷಿಕ ₹ 3 ಲಕ್ಷ ಮೀರಿರಬಾರದು. ಕರ್ನಾಟಕ, ದೆಹಲಿ ಎನ್‌ಸಿಆರ್‌, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಕೇರಳ ಮತ್ತು ತಮಿಳುನಾಡಿನ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಹೆಣ್ಣುಮಕ್ಕಳು, ಏಕ ಪೋಷಕರ ಮಕ್ಕಳು, ಲೈಂಗಿಕ ಅಲ್ಪಸಂಖ್ಯಾತರು, ಅನಾಥರು ಮತ್ತು ಅಂಗವಿಕಲರಿಗೆ ಆದ್ಯತೆ ನೀಡಲಾಗುವುದು. Buddy4Study ಮತ್ತು ಇ.ವೈ. ಗ್ಲೋಬಲ್‌ ಡೆಲಿವರಿ ಸರ್ವೀಸಸ್‌ನ ನೌಕರರ ಮಕ್ಕಳಿಗೆ ಅನ್ವಯವಾಗುವುದಿಲ್ಲ.

ADVERTISEMENT

ಆರ್ಥಿಕ ಸಹಾಯ: 10ನೇ ತರಗತಿಯ ನಂತರ ವಿದ್ಯಾರ್ಥಿಗಳು ಶಿಕ್ಷಣ ಮುಂದುವರಿಸಲು ₹ 15,000 ನೆರವು.
ಅರ್ಜಿ ಸಲ್ಲಿಸಲು ಕೊನೇ ದಿನ: 10-09-2025
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌

ಹೆಚ್ಚಿನ ಮಾಹಿತಿಗೆ: Short Url: www.b4s.in/pjvi/EYGDS11

v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.