ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ: ಜಿಎಸ್‌ಕೆ ಸ್ಕಾಲರ್ಸ್ ಪ್ರೋಗ್ರಾಂ 2021-22

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2021, 19:30 IST
Last Updated 19 ಡಿಸೆಂಬರ್ 2021, 19:30 IST
ವಿದ್ಯಾರ್ಥಿವೇತನ
ವಿದ್ಯಾರ್ಥಿವೇತನ   

ಐಐಟಿ ರೂರ್ಕಿ ಡಿಪಾರ್ಟ್‌ಮೆಂಟ್ ಆಫ್ ಕೆಮಿಸ್ಟ್ರಿ (ಡಿಓಎಫ್) ಪೋಸ್ಟ್ ಡಾಕ್ಟರಲ್ ಫೆಲೋಶಿಪ್ (ಪಿಡಿಎಫ್) 2021

ವಿವರ: ಐಐಟಿ ರೂರ್ಕಿ ಡಿಪಾರ್ಟ್‌ಮೆಂಟ್ ಆಫ್ ಕೆಮಿಸ್ಟ್ರಿ (ಡಿಓಎಫ್) ಪೋಸ್ಟ್ ಡಾಕ್ಟರಲ್ ಫೆಲೋಶಿಪ್ (ಪಿಡಿಎಫ್) 2021 ಕ್ಕೆ ಪಿಎಚ್‌ಡಿ ಪದವಿಧರರಿಂದ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಯು ‘ಎಯು ಡೋಪ್ಡ್ ಮ್ಯಾಗ್ನೆಟಿಕ್ ಫೆಕ್ಸಾಯ್ ನ್ಯಾನೋಪಾರ್ಟಿಕಲ್ಸ್ ಟಾರ್ಗೆಟಿಂಗ್ ಟ್ರಿಪಲ್-ನೆಗೆಟಿವ್ ಬ್ರೆಸ್ಟ್ ಕ್ಯಾನ್ಸರ್’ ಎನ್ನುವ ಶೀರ್ಷಿಕೆಯ ಮೇಲೆ ಫೆಲೋಶಿಪ್‌ ಮಾಡಬೇಕಿದೆ.

ಅರ್ಹತೆ: ಬಯೊಟೆಕ್ನಾಲಜಿಯಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಅಭ್ಯರ್ಥಿಗಳು ಈ ಫೆಲೋಶಿಪ್‌ಗೆ ಅರ್ಹರು.

ADVERTISEMENT

ಆರ್ಥಿಕ ನೆರವು: ತಿಂಗಳಿಗೆ ₹ 60,000 ವೇತನ ಭತ್ಯೆ ನೀಡಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್‌ 25, 2021

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ

ಹೆಚ್ಚಿನ ಮಾಹಿತಿಗೆ: www.b4s.in/praja/CFP7

ಜಿಎಸ್‌ಕೆ ಸ್ಕಾಲರ್ಸ್ ಪ್ರೋಗ್ರಾಂ 2021-22

ವಿವರ: ಜಿಎಸ್‌ಕೆ ಸ್ಕಾಲರ್ಸ್ ಪ್ರೋಗ್ರಾಂ 2021-22, ದೇಶದ ಸರ್ಕಾರಿ ಕಾಲೇಜುಗಳಲ್ಲಿ ಮೊದಲ ವರ್ಷದ ಎಂಬಿಬಿಎಸ್ ಮಾಡುತ್ತಿರುವ ಅರ್ಹ ಮತ್ತು ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಂದ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನಿಸಿದೆ.

ಅರ್ಹತೆ: ದ್ವಿತೀಯ ಪಿಯುಸಿಯಲ್ಲಿ ಕನಿಷ್ಠ ಶೇ 65 ರಷ್ಟು ಅಂಕ ಪಡೆದಿರುವ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು
₹ 6ಲಕ್ಷವನ್ನು ಮೀರಿರಬಾರದು.

ಆರ್ಥಿಕ ನೆರವು: ವರ್ಷಕ್ಕೆ ₹1 ಲಕ್ಷದವರೆಗೆ ವೇತನ ಭತ್ಯೆ ನೀಡಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್‌ 31, 2021

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ

ಹೆಚ್ಚಿನ ಮಾಹಿತಿಗೆ: www.b4s.in/praja/GSKP1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.