ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ: ಸೆನ್ಸೊಡೈನ್‌ ಶೈನಿಂಗ್‌ ಸ್ಟಾರ್‌

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 23:30 IST
Last Updated 28 ಡಿಸೆಂಬರ್ 2025, 23:30 IST
   

ಸೆನ್ಸೊಡೈನ್‌ ಟೂತ್‌ಪೇಸ್ಟ್‌ ತಯಾರಕ ಕಂಪನಿಯಾದ ಹ್ಯಾಲಿಯಾನ್‌ ಇಂಡಿಯಾ, ಆರ್ಥಿಕವಾಗಿ ಹಿಂದುಳಿದ ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಿದೆ.

ಅರ್ಹತೆ: ಭಾರತೀಯ ವಿದ್ಯಾರ್ಥಿಗಳಾಗಿರಬೇಕು. ದಂತ ವೈದ್ಯಕೀಯ ಕೋರ್ಸ್‌ನ (ಬಿಡಿಎಸ್‌) ಮೊದಲ ವರ್ಷದಲ್ಲಿ ಇರಬೇಕು. ಸರ್ಕಾರಿ ಕಾಲೇಜಿನಲ್ಲಿ ಅಥವಾ ಅನುದಾನಿತ ಕಾಲೇಜಿನಲ್ಲಿ ಸರ್ಕಾರಿ ಸೀಟು ಪಡೆದವರಾಗಿರಬೇಕು. ಹಿಂದಿನ ತರಗತಿ ಅಥವಾ ಸೆಮಿಸ್ಟರ್‌ನಲ್ಲಿ ಕನಿಷ್ಠ ಶೇ 60 ಅಂಕಗಳನ್ನು ಪಡೆದಿರಬೇಕು.

ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲ ಮೂಲಗಳಿಂದಲೂ ₹ 8 ಲಕ್ಷಕ್ಕಿಂತ ಹೆಚ್ಚು ಇರಬಾರದು. ಪ್ರಸ್ತುತ ಯಾವುದೇ ರೀತಿಯ ವಿದ್ಯಾರ್ಥಿವೇತನ ಪಡೆಯುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಂತಿಲ್ಲ. 

ADVERTISEMENT

ಆರ್ಥಿಕ ನೆರವು: 4 ವರ್ಷಗಳವರೆಗೆ ಪ್ರತಿವರ್ಷ ₹ 50,000 ವಿದ್ಯಾರ್ಥಿವೇತನ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 20-01-2026

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ 

ಹೆಚ್ಚಿನ ಮಾಹಿತಿಗೆ: www.b4s.in/praja/SSPPS5

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.