ADVERTISEMENT

ವಿದ್ಯಾರ್ಥಿಗಳ ಉತ್ಸಾಹ, ಎದ್ದುಕಂಡ ಶಿಕ್ಷಣ ಇಲಾಖೆಯ ಪರಿಶ್ರಮ

ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 5:28 IST
Last Updated 25 ಜೂನ್ 2020, 5:28 IST
ಕಲಬುರ್ಗಿಯ ವಿಜಯ ವಿಠ್ಠಲ ಶಾಲೆಯಲ್ಲಿ ವಿದ್ಯಾರ್ಥಿಗಳ ತಪಾಸಣೆ
ಕಲಬುರ್ಗಿಯ ವಿಜಯ ವಿಠ್ಠಲ ಶಾಲೆಯಲ್ಲಿ ವಿದ್ಯಾರ್ಥಿಗಳ ತಪಾಸಣೆ   

ಬೆಂಗಳೂರು:ಬಹುನಿರೀಕ್ಷೆಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಗುರುವಾರ ಬೆಳಿಗ್ಗೆ ರಾಜ್ಯದ 2,879 ಕೇಂದ್ರಗಳಲ್ಲಿ ಉತ್ಸಾಹದಿಂದಲೇ ಆರಂಭವಾಗಿದೆ.

ಬೆಳಿಗ್ಗೆ 8 ಗಂಟೆಯಿಂದಲೇ ವಿದ್ಯಾರ್ಥಿಗಳು ಮುಖಗವಸು ತೊಟ್ಟು ಪರೀಕ್ಷಾ ಕೇಂದ್ರಗಳಿಗೆ ಬರತೊಡಗಿದ್ದರು. ಅಂತರ ಕಾಯ್ದುಕೊಳ್ಳಲು ಬಹುತೇಕ ಎಲ್ಲ ಕಡೆ ಕಟ್ಟು ನಿಟ್ಟಿನ ವ್ಯವಸ್ಥೆ ಮಾಡಲಾಗಿತ್ತು. ಧ್ವನಿವರ್ಧಕ ಮೂಲಕ ವಿದ್ಯಾರ್ಥಿ ಗಳಿಗೆ ಮನವರಿಕೆ ಮಾಡಲಾಯಿತು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ನಗರದ ರಾಜಾಜಿನಗರದ ಕೆಲವು ಪರೀಕ್ಷಾ ಕೇಂದ್ರಗಳಿಗೆ ತೆರಳಿ ವಿದ್ಯಾರ್ಥಿಗಳನ್ನು ಮಾತನಾಡಿಸಿ ಶುಭಾಶಯ ಹೇಳಿದರು.

ADVERTISEMENT

ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ತಪಾಸಣೆಗೆ ಆರೋಗ್ಯ ಕಾರ್ಯಕರ್ತ ರು ಅಥವಾ ಆಶಾ ಕಾರ್ಯಕರ್ತರು ಇದ್ದುದು ಕಂಡುಬಂತು. ಸ್ಕೌಟ್ ವಿದ್ಯಾರ್ಥಿಗಳು ಸಹ ಲವಲವಿಕೆಯಿಂದ ಸೇವೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.