ಟಾಟಾ ಕ್ಯಾಪಿಟಲ್ ಪಂಖ್
ಟಾಟಾ ಕ್ಯಾಪಿಟಲ್ ಲಿಮಿಟೆಡ್‌ನ ಉಪಕ್ರಮವಾಗಿದ್ದು, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಕನಸುಗಳನ್ನು ಈಡೇರಿಸಿಕೊಳ್ಳಲು ಹಣಕಾಸಿನ ನೆರವನ್ನು ನೀಡುವ ಗುರಿ ಹೊಂದಿದೆ.
ಅರ್ಹತೆ: ಪ್ರಸ್ತುತ 11, 12ನೇ ತರಗತಿಗಳಲ್ಲಿರುವ, ಸಾಮಾನ್ಯ ಪದವಿ (ಬಿ.ಕಾಂ., ಬಿ.ಎಸ್‌ಸಿ, ಬಿಎ ಇತ್ಯಾದಿ), ಡಿಪ್ಲೊಮಾ ಮತ್ತು ಐಟಿಐ ಕೋರ್ಸ್‌ಗಳನ್ನು ಅಭ್ಯಾಸ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ.
ಅರ್ಜಿದಾರರು ತಮ್ಮ ಹಿಂದಿನ ತರಗತಿಯಲ್ಲಿ ಕನಿಷ್ಠ ಶೇ 60ರಷ್ಟು ಅಂಕಗಳನ್ನು ಗಳಿಸಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ₹ 2.5 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇರಬೇಕು.
ಆರ್ಥಿಕ ಸಹಾಯ: ₹ 10 ರಿಂದ ₹ 12 ಸಾವಿರ ಅಥವಾ ಕೋರ್ಸ್ ಶುಲ್ಕದ ಶೇ 80ರಷ್ಟು ಪೂರೈಕೆ
ಅರ್ಜಿ ಸಲ್ಲಿಸಲು ಕೊನೆ ದಿನ: 15-02-2025
ಅರ್ಜಿ ಸಲ್ಲಿಸುವ ವಿಧಾನ:ಆನ್‌ಲೈನಲ್ಲಿ ಅರ್ಜಿ ಹಾಕಿ.
ಹೆಚ್ಚಿನ ಮಾಹಿತಿಗೆ:www.b4s.in/pjvi/TCPS27
ಚಾರ್ಪಾಕ್ ಬ್ಯಾಚುಲರ್ಸ್ ಸ್ಕಾಲರ್‌ಷಿಪ್
ಫ್ರಾನ್ಸ್‌ನ ಶೈಕ್ಷಣಿಕ ಸಂಸ್ಥೆಗಳ ಒಂದರಲ್ಲಿ ಪೂರ್ಣಾವಧಿಯ ಪದವಿಯನ್ನು ಅಭ್ಯಾಸ ಮಾಡಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಫ್ರೆಂಚ್ ಸರ್ಕಾರ ನೀಡುವ ಸ್ಕಾಲರ್‌ಷಿಪ್ ಇದಾಗಿದೆ.
ಅರ್ಹತೆ: ಅರ್ಜಿ ಸಲ್ಲಿಕೆಯ ಸಮಯದಲ್ಲಿ 23 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಭಾರತೀಯ ಪ್ರಜೆಗಳಾಗಿರಬೇಕು. ಅರ್ಜಿದಾರರು ಭಾರತದಲ್ಲಿ ತಮ್ಮ ಮಾಧ್ಯಮಿಕ ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು. 2025ರ ಸೆಪ್ಟೆಂಬರ್ 1ರಂದು ಆರಂಭವಾಗುವ ಪದವಿ ಕೋರ್ಸ್‌ಗಳಿಗೆ ಅರ್ಜಿಯನ್ನು ಸಲ್ಲಿಸಿರಬೇಕು. ವಿದ್ಯಾರ್ಥಿಗಳು ಈ ಮೊದಲು ಫ್ರಾನ್ಸ್‌ನಲ್ಲಿ ಯಾವುದೇ ಶೈಕ್ಷಣಿಕ ಸಂಸ್ಥೆಯಲ್ಲಿ ಅಧ್ಯಯನ ನಡೆಸಿರಬಾರದು.
ಆರ್ಥಿಕ ಸಹಾಯ: ಈ ವಿದ್ಯಾರ್ಥಿವೇತನವು ಮಾಸಿಕ 860 ಯೂರೋಗಳ ಜೀವನ ವೆಚ್ಚ ಮತ್ತು ಇತರ ಪ್ರಯೋಜನಗಳನ್ನು ಒಳಗೊಂಡಿರುತ್ತದೆ.
ಅರ್ಜಿ ಸಲ್ಲಿಸಲು ಕೊನೆ ದಿನ: 28-02-2025
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.
ಹೆಚ್ಚಿನ ಮಾಹಿತಿಗೆ: Short Url: www.b4s.in/pjvi/CBSS3
ಶಿಕ್ಷಾ ಸಾರಥಿ ಸ್ಕಾಲರ್‌ಷಿಪ್
ಜೆಕೆ ಟಯರ್ಸ್ ಅಂಡ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ವಿದ್ಯಾರ್ಥಿ ವೇತನ ನೀಡುವ ಸಲುವಾಗಿ ಭಾರೀ ವಾಹನ ಚಾಲಕರ ಪುತ್ರಿಯರಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದೆ.
ಅರ್ಹತೆ: ತಾಂತ್ರಿಕ ಅಥವಾ ತಾಂತ್ರಿಕೇತರ ಪದವಿ ಅಥವಾ ಡಿಪ್ಲೊಮಾ ಕೋರ್ಸ್‌ಗಳನ್ನು ಅಭ್ಯಾಸ ಮಾಡುತ್ತಿರಬೇಕು. ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ಶೇ 55ರಷ್ಟು ಅಂಕಗಳನ್ನು ಗಳಿಸಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ₹ 5,00,000ಕ್ಕಿಂತ ಕಡಿಮೆ ಅಥವಾ ಸಮನಾಗಿರಬೇಕು.
ಆರ್ಥಿಕ ನೆರವು: ಒಂದು-ಬಾರಿಯ ಸ್ಕಾಲರ್‌ಷಿಪ್
ತಾಂತ್ರಿಕ ಪದವಿ ಕೋರ್ಸ್‌ಗಳು: ₹ 25,000
ತಾಂತ್ರಿಕೇತರ ಪದವಿ ಕೋರ್ಸ್‌ಗಳು: ₹. 15,000
ಡಿಪ್ಲೊಮಾ ಕೋರ್ಸ್‌ಗಳು: ₹15,000
ಅರ್ಜಿ ಸಲ್ಲಿಸಲು ಕೊನೆ ದಿನ:15-02-2025
ಅರ್ಜಿ ಸಲ್ಲಿಸುವ ವಿಧಾನ:ಆನ್‌ಲೈನಲ್ಲಿ ಅರ್ಜಿ ಹಾಕಿ.
ಹೆಚ್ಚಿನ ಮಾಹಿತಿಗೆ: Short Url:www.b4s.in/praja/JKTS1 →→→→ v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.