ADVERTISEMENT

ವಿದ್ಯಾರ್ಥಿ ಒಟ್ಟಿಗೆ ಎರಡು ಪದವಿ ಪೂರೈಸಲು ಅವಕಾಶ: ಯುಜಿಸಿ

ಪಿಟಿಐ
Published 12 ಏಪ್ರಿಲ್ 2022, 13:12 IST
Last Updated 12 ಏಪ್ರಿಲ್ 2022, 13:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿದ್ಯಾರ್ಥಿಗಳು ಒಟ್ಟಿಗೆ ಪೂರ್ಣಾವಧಿಯ ಎರಡು ಪದವಿಗಳನ್ನು ಪಡೆಯಲು ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಅವಕಾಶ ಕಲ್ಪಿಸಿದೆ.

ಏಕಕಾಲದಲ್ಲಿ ಒಂದೇ ವಿಶ್ವವಿದ್ಯಾಲಯದಿಂದ ಅಥವಾ ಇತರೆ ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿಯು ಭೌತಿಕವಾಗಿ ಪೂರ್ಣಾವಧಿಯ ಎರಡು ಪದವಿಗಳನ್ನು ಪಡೆಯಬಹುದಾಗಿದೆ ಎಂದು ಯುಜಿಸಿ ಅಧ್ಯಕ್ಷ ಜಗದೀಶ್‌ ಕುಮಾರ್‌ ಮಂಗಳವಾರ ಪ್ರಕಟಿಸಿದ್ದಾರೆ.

ಈ ಸಂಬಂಧ ಯುಜಿಸಿ ಇನ್ನಷ್ಟೇ ವಿವರವಾದ ಮಾರ್ಗಸೂಚಿ ಪ್ರಕಟಿಸಬೇಕಿದೆ.

ADVERTISEMENT

'ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (ಎನ್ಇಪಿ) ಪ್ರಕಟಿಸಿರುವಂತೆ ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಕೌಶಲಗಳನ್ನು ಪಡೆಯಲು ಅನುವಾಗುವ ನಿಟ್ಟಿನಲ್ಲಿ ಯುಜಿಸಿ ಹೊಸ ಮಾರ್ಗಸೂಚಿಯನ್ನು ಹೊರತರಲಿದ್ದು, ಅಭ್ಯರ್ಥಿಯು ಭೌತಿಕವಾಗಿ ಎರಡು ಪದವಿಗಳನ್ನು ಒಂದೇ ಅವಧಿಯಲ್ಲಿ ‍ಪೂರೈಸಲು ಅವಕಾಶ ಸಿಗಲಿದೆ. ಪದವಿಗಳನ್ನು ಒಂದೇ ವಿಶ್ವವಿದ್ಯಾಲಯದಿಂದ ಇಲ್ಲವೇ ಬೇರೆ ಬೇರೆ ವಿಶ್ವವಿದ್ಯಾಲಯಗಳಿಂದ ಪಡೆಯಬಹುದಾಗಿದೆ' ಎಂದು ಜಗದೀಶ್‌ ಕುಮಾರ್‌ ಹೇಳಿದ್ದಾರೆ.

ವಿದ್ಯಾರ್ಥಿಗಳು ಭೌತಿಕವಾಗಿ ಮತ್ತು ಆನ್‌ಲೈನ್‌ ವಿಧಾನದಲ್ಲೂ ಏಕಕಾಲದಲ್ಲಿ ಎರಡು ಪದವಿಗಳನ್ನು ಪೂರೈಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.