ADVERTISEMENT

ಮೋದಿ ಸರ್ಕಾರ ವಿಫಲ: ಬದಲಾವಣೆ ಬಯಸಿದ ಜನತೆ: ಕೆ.ರಾಜಶೇಖರ ಹಿಟ್ನಾಳ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 14:44 IST
Last Updated 26 ಮಾರ್ಚ್ 2019, 14:44 IST
ಯಲಬುರ್ಗಾದಲ್ಲಿ ಮಂಗಳವಾರ ಲೋಕಸಭಾ ಚುನಾವಣೆ ನಿಮಿತ್ತ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಭೇಟಿಯಾಗಿ ಮತಯಾಚನೆ ಮಾಡಿ, ಬಳಿಕ ಮೈತ್ರಿ ಪಕ್ಷದ ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ ಮಾತನಾಡಿದರು
ಯಲಬುರ್ಗಾದಲ್ಲಿ ಮಂಗಳವಾರ ಲೋಕಸಭಾ ಚುನಾವಣೆ ನಿಮಿತ್ತ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಭೇಟಿಯಾಗಿ ಮತಯಾಚನೆ ಮಾಡಿ, ಬಳಿಕ ಮೈತ್ರಿ ಪಕ್ಷದ ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ ಮಾತನಾಡಿದರು   

ಕೊಪ್ಪಳ: ಎಲ್ಲ ರಂಗಗಳಲ್ಲಿ ಮೋದಿಯವರ ನೇತ್ರತ್ವದ ಸರ್ಕಾರ ಸಂಪೂರ್ಣವಾಗಿ ವಿಫಲಗೊಂಡಿದ್ದು, ದೇಶದ ಜನತೆ ಬದಲಾವಣೆ ಬಯಸುತ್ತಿದೆ ಎಂದು ಮೈತ್ರಿ ಪಕ್ಷದ ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ ಹೇಳಿದರು.

ಯಲಬುರ್ಗಾದಲ್ಲಿ ಮಂಗಳವಾರ ಲೋಕಸಭಾ ಚುನಾವಣೆ ನಿಮಿತ್ತ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಭೇಟಿಯಾಗಿ ಮತಯಾಚನೆ ಮಾಡಿ, ಬಳಿಕ ಅವರು ಮಾತನಾಡಿದರು.

5 ವರ್ಷದ ಅವಧಿಯಲ್ಲಿ ಪ್ರದಾನಿ ಮೋದಿಯವರು ದೇಶದ ಜನತೆಗೆ ಸುಳ್ಳಿನ ಆಶ್ವಾಸನೆ ನೀಡುತ್ತಾ ಜನರಿಗೆ ಪಳ್ಳು ಭರವಸೆ ನೀಡಿದ್ದಾರೆ. ಕಾಂಗ್ರೆಸ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ದೇಶದಲ್ಲಿ ಕಾಂಗ್ರೆಸ್‌ನ ಯುಪಿಎ ಸರ್ಕಾರ ಅಧಿಕಾರಕ್ಕೆ ಬರುವುದು ಶತಸಿದ್ಧ, ಈ ಬಾರಿ ನಮ್ಮ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ನಿಶ್ಚಿತ ಎಂದರು.

ADVERTISEMENT

ಯಲಬುರ್ಗಾದ ಹಿರಿಯ ಮುಖಂಡ ಶ್ರೀಪಾದಪ್ಪ ಅಧಿಕಾರಿ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕರಡಿ ಸಂಗಣ್ಣರಿಗೆ ಬೆಂಬಲಿಸಿದ್ದು, ಕ್ಷೇತ್ರ ಜನತೆಗೆ ತಮ್ಮ ತಪ್ಪಿನ ಅರಿವಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಶೂನ್ಯ ಸಾಧನೆ ಮಾಡಿದ ಬಿಜೆಪಿ ಅಭ್ಯರ್ಥಿಯನ್ನು ಸೂಲಿಸುವುದೇ ಪ್ರತಿಯೊಬ್ಬ ಮತದಾರನ ಗುರಿಯಾಗಬೇಕು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಹನುಮಂತಗೌಡ ಪಾಟೀಲ್, ಮುಖಂಡರಾದ ಯಂಕಣ್ಣ ಯರಾಶಿ, ಗುನ್ನಾಳ ರಾಘವೇಂದ್ರ ಜೋಶಿ, ರಾಮಣ್ಣ ಸಾಲಬಾವಿ, ಮಲ್ಲಿಕಾರ್ಜುನ ಗಿನ್ನಾಳ, ಮಹೇಶ ಹಳ್ಳಿ, ಅಕ್ತಾರಸಾಬ್ ಖಾಜಿ, ಅಪ್ಪಣ್ಣ ಜೋಶಿ, ಶಿವು ತಲ್ಲಕಲ್, ಭರಮಪ್ಪ ನಗರ, ವಕೆಂಟೇಶ ಕಂಪಸಾಗರ, ಫಯುಮ್ ಭಾಷ, ಅಮ್ಜದ್ ಪಟೇಲ್, ಕಾಟನ್ ಪಾಷಾ, ಗವಿಸಿದ್ದಪ್ಪ ಚಿನ್ನೂರ, ಅಜೀಂ ಅತ್ತಾರ್, ನಿಂಗರಾಜ ಕಾಳಿ, ಮಂಜುನಾಥ ಗಾಳಿ, ಬಸಯ್ಯ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.