ADVERTISEMENT

ಜಾತಿ ಅವಹೇಳನ:ಜೆಡಿಎಸ್ ಘನತೆಗೆ ಕುಂದು-ಶಿವರಾಮೇಗೌಡ ವಿರುದ್ಧ ಬಲಿಜ ಸಮುದಾಯ ಆಕ್ರೋಶ

ಮಂಡ್ಯ ಸಂಸದ ಎಲ್‌.ಆರ್.ಶಿವರಾಮೇಗೌಡ ವಿರುದ್ಧ ಬಲಿಜ ಸಮುದಾಯ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 11:34 IST
Last Updated 9 ಏಪ್ರಿಲ್ 2019, 11:34 IST
ಕವಿತಾಕೃಷ್ಣ
ಕವಿತಾಕೃಷ್ಣ   

ತುಮಕೂರು: ಬಲಿಜ ಸಮುದಾಯಕ್ಕೆ ಸೇರಿದ ಸುಮಲತಾ, ದರ್ಶನ್ ಹಾಗೂ ರಾಕ್‌ಲೈನ್ ವೆಂಕಟೇಶ್ ಅವರನ್ನು ಜಾತಿ ಹೆಸರಲ್ಲಿ ಅವಹೇಳನ ಮಾಡಿರುವ ಮಂಡ್ಯ ಸಂಸದ ಎಲ್.ಆರ್.ಶಿವರಾಮೇಗೌಡ ರಾಜ್ಯದಲ್ಲಿರುವ ಸಮುದಾಯದ ಕ್ಷಮೆ ಕೋರಬೇಕು ಎಂದು ಸಾಹಿತಿ ಕವಿತಾಕೃಷ್ಣ ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯನಗರದ ಕೃಷ್ಣದೇವರಾಯ, ಕೈವಾರ ನಾರೇಯಣ ಯತಿಗಳು ಬಲಿಜ ಸಮುದಾಯಕ್ಕೆ ಸೇರಿದವರು. ರಾಜ್ಯದ ಅಭಿವೃದ್ಧಿಗೆ ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸಮುದಾಯ ಅನೇಕ ಕೊಡುಗೆಗಳನ್ನು ನೀಡಿದೆ. ಕೆಂಪೇಗೌಡ ಅವರು ಬೆಂಗಳೂರು ಕಟ್ಟಲು ಮುಂದಾದಾಗ ಸಹಾಯ ಮಾಡಿದ್ದು ಬಲಿಜ ಸಮುದಾಯದವರಾದ ಕೃಷ್ಣದೇವರಾಯ. ಆದರೆ ಅಂತಹ ಬಲಿಜ ಸಮಾಜವನ್ನು ಹೀಯಾಳಿಸುತ್ತಿರುವುದು ಜಾತ್ಯಾತೀತ ಪಕ್ಷದ ಘನತೆ ಸರಿಹೊಂದುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಚಲನಚಿತ್ರದಲ್ಲಿ ಅನುಪಮ ಸೇವೆ ಸಲ್ಲಿಸಿರುವ ಸುಮಲತಾ, ರಾಕ್‌ಲೈನ್ ವೆಂಕಟೇಶ್, ದರ್ಶನ್ ನಮ್ಮ ಸಮಾಜದ ಹೆಮ್ಮೆ, ಅವರನ್ನು ಹೀಯಾಳಿಸಿದರೆ, ಇಡೀ ಸಮುದಾಯವನ್ನು ಹೀಯಾಳಿಸಿದಂತೆ. ಸಮಾಜವನ್ನು ಅವಹೇಳನ ಮಾಡಿದರೂ ಮುಖ್ಯಮಂತ್ರಿ ಕುಮಾರಸ್ವಾಮಿ, ಎಚ್.ಡಿ.ದೇವೇಗೌಡ ಅವರು ಒಂದು ಮಾತನಾಡಿಲ್ಲ. ರಾಜ್ಯದಲ್ಲಿ ಸಮಯದಾಯದ 50 ಲಕ್ಷ ಜನಸಂಖ್ಯೆ ಇದೆ. ಸಮುದಾಯವನ್ನು ಹೀಯಾಳಿಸಿರುವುದಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಮಾಜಿ ಎಪಿಎಂಸಿ ಅಧ್ಯಕ್ಷ ಟಿ.ಆರ್.ಸುರೇಶ್, ಬಿಜೆಪಿ ಪಾಲಿಕೆ ಸದಸ್ಯೆ ನವೀನಅರುಣ್, ಎ.ಆರ್.ನಾಗರಾಜ, ಆರ್.ಎ.ನಾರಾಯಣ್, ಎಂ.ಸಿ.ನಾಣಿ, ಉಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.