ADVERTISEMENT

ಅರುಣಾಚಲದಲ್ಲಿ ಮತ್ತೆ ಅರಳಿದ ಕಮಲ

ಪಿಟಿಐ
Published 23 ಮೇ 2019, 20:06 IST
Last Updated 23 ಮೇ 2019, 20:06 IST
...
...   

ಇಟಾನಗರ: ಅರುಣಾಚಲ ಪ್ರದೇಶ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಪೆಮಾ ಖಂಡು ನೇತೃತ್ವದಆಡಳಿತಾರೂಢ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೇರಿದೆ.

60 ವಿಧಾನಸಭಾ ಕ್ಷೇತ್ರಗಳಲ್ಲಿ 57 ಕ್ಷೇತ್ರಗಳಿಗಷ್ಟೇ ಏಪ್ರಿಲ್‌ 11ರಂದು ಚುನಾವಣೆ ನಡೆದಿತ್ತು. ಈ ಮೊದಲು ಮೂರು
ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅವಿರೋಧ ಆಯ್ಕೆ ಆಗಿದ್ದರು.‌ ಇದೀಗ ಫಲಿತಾಂಶ‍ಪ್ರಕಟವಾಗಿದ್ದು, ಬಿಜೆಪಿ, ಜೆಡಿಯು , ಕಾಂಗ್ರೆಸ್‌ ಸ್ಥಾನ ಗಳಿಸಿವೆ. ಈ ಪೈಕಿ ಜೆಡಿಯು ಸಹ ಗಮನಾರ್ಹ ಸ್ಥಾನಗಳನ್ನು ಗಳಿಸಿಕೊಂಡಿದೆ.

ಸೀಟು ಹಂಚಿಕೆ ಕುರಿತು ಅಸಮಾಧಾನ ತಳೆದ ಎನ್‌ಡಿಎ ಅಂಗ ಪಕ್ಷ ಎನ್‌ಪಿಪಿ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿತ್ತು. ಬಳಿಕ ತನ್ನ ನಿರ್ಧಾರ ಬದಲಿಸಿ, 27 ವಿಧಾನಸಭಾ ಕ್ಷೇತ್ರಗಳು ಮತ್ತು ಒಂದು ಲೋಕಸಭಾ ಕ್ಷೇತ್ರಕ್ಕೆ ಬೆಂಬಲ ನೀಡುವುದಾಗಿ ಎನ್‌ಪಿಪಿ ಹೇಳಿತ್ತು. ಅದು ಫಲಿತಾಂಶದಲ್ಲಿ ಫಲ ನೀಡುವಂತೆ ಮಾಡಿದೆ.

ADVERTISEMENT

2014ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 42 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಬಿಜೆಪಿ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಅಂದು ನಬಾಮ್‌ ಟುಕಿ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿತ್ತು. ಆದರೆ, 2016ರ ಸೆಪ್ಟಂಬರ್‌ನಲ್ಲಿ ಬಂಡಾಯ ಸಾರಿದಕಾಂಗ್ರೆಸ್‌ ನಾಯಕಪೆಮಾ ಖಂಡು, 33 ಶಾಸಕರೊಂದಿಗೆ ಕಾಂಗ್ರೆಸ್‌ ತೊರೆದು ಪಿಪಿಎ ಪಕ್ಷವನ್ನು ಸ್ಥಾಪಿಸಿ ಮುಖ್ಯಮಂತ್ರಿಯಾದರು. ಮೂರೇ ತಿಂಗಳಲ್ಲಿ ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದರು.

ಈಶಾನ್ಯಭಾರತದಲ್ಲಿಬಿಜೆಪಿ ಗಟ್ಟಿ ನೆಲೆಯೂರಲು ಎನ್‌ಇಡಿಎ (ನೆಡ) ಮುಖ್ಯಸ್ಥ ಅಸ್ಸಾಂನ ಹಣಕಾಸುಸಚಿವ ಹಿಮಂತ ವಿಶ್ವಾಸ್ ಶರ್ಮ ಅವರ ಶ್ರಮ ಕಾರಣ. ಮೇಘಾಲಯ, ಮಣಿಪುರ, ತ್ರಿಪುರವಿಧಾನಸಭಾ ಚುನಾವಣೆಗಳಲ್ಲಿ ನೆಡ ಜಯಭೇರಿ ಬಾರಿಸಿದ ನಂತರ ಮತ್ತೆ ಅರುಣಾಚಲದಲ್ಲಿ ಕಮಲ ಏಕಾಂಗಿಯಾಗಿ ಅರಳಿದೆ.

ಉಪ ಮುಖ್ಯಮಂತ್ರಿ ಚೌನಾ ಮೇನ್‌ ಕಾಂಗ್ರೆಸ್‌ನ ಖುನಾಂಗ್‌ ಕ್ರಿ ವಿರುದ್ಧ ಜಯ ಸಾಧಿಸಿದರು. ಆದರೆ ಎರಡು ಬಾರಿ ಗೆಲುವು ಸಾಧಿಸಿದ್ದ ಹಾಗೂ ಸ್ಪೀಕರ್‌ ಆಗಿದ್ದ ಬಿಜೆಪಿಯ ತೇನ್‌ಸಿಂಗ್‌ ನೋರ್ಬು ತಂಗ್‌ಡಕ್‌ ಅವರು ಕಲಕ್‌ಟಂಗ್‌ ಕ್ಷೇತ್ರದಲ್ಲಿ ಜೆಡಿಯು ಅಭ್ಯರ್ಥಿ ದೋರ್ಜಿ ವಾಂಗ್ಡಿ ಖಾರ್ಮಾ ಅವರಿಂದ ಸೋಲು ಅನುಭವಿಸಿದ್ದಾರೆ. ಜೆಡಿಯುನ ಥೇಚಿ ಖಾಸೊ 302 ಮತಗಳಿಂದ ಬಿಜೆಪಿಯ ಕಿಪಾ ಬಾಬು ಅವರನ್ನು ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.