ADVERTISEMENT

ಸೇನೆ ಹೆಸರಲ್ಲಿ ಮತ: ಮೋದಿ ಪರ ನಿಂತ ಆಯೋಗ

ಪಿಟಿಐ
Published 1 ಮೇ 2019, 20:15 IST
Last Updated 1 ಮೇ 2019, 20:15 IST
ಚಿತ್ರ: ಪ್ರಕಾಶ್‌ ಶೆಟ್ಟಿ
ಚಿತ್ರ: ಪ್ರಕಾಶ್‌ ಶೆಟ್ಟಿ   

ನವದೆಹಲಿ: ಮಹಾರಾಷ್ಟ್ರದ ಲಾತೂರ್‌ನಲ್ಲಿ ಭಾಷಣ ಮಾಡುವಾಗ ಪುಲ್ವಾಮಾ ಹುತಾತ್ಮರು ಮತ್ತು ಪಾಕಿಸ್ತಾನದ ಬಾಲಾಕೋಟ್‌ ಮೇಲೆ ವಾಯುದಾಳಿ ನಡೆಸಿದ ಸೈನಿಕರ ಹೆಸರಿನಲ್ಲಿ ಮತ ಹಾಕುವಂತೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಅಲ್ಲ ಎಂದು ಚುನಾವಣಾ ಆಯೋಗವು ಹೇಳಿದೆ.

‘ಮೊದಲ ಬಾರಿ ಮತ ಚಲಾಯಿಸುತ್ತಿರುವವರನ್ನು ನಾನು ಕೇಳಿಕೊಳ್ಳುತ್ತಿದ್ದೇನೆ. ನಿಮ್ಮ ಮತಗಳನ್ನು ಬಾಲಾಕೋಟ್‌ ವಾಯದಾಳಿ ನಡೆಸಿದ ಸೈನಿಕರಿಗೆ ನೀಡುತ್ತೀರಾ? ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾಧ ಯೋಧರಿಗೆ ನೀಡುತ್ತೀರಾ?’ ಎಂದು ಮೋದಿ ಅವರುಏಪ್ರಿಲ್‌ 9ರಂದು ಲಾತೂರ್‌ನಲ್ಲಿ ಹೇಳಿದ್ದರು.

ಈ ಸಂಬಂಧ ಚುನಾವಣಾ ಆಯೋಗಕ್ಕೆಕಾಂಗ್ರೆಸ್‌ ದೂರು ನೀಡಿತ್ತು.

ADVERTISEMENT

ಸೇನಾಪಡೆಗಳ ಹೆಸರಿನಲ್ಲಿ ಚುನಾವಣಾ ಪ್ರಚಾರ ಮಾಡಬಾರದು ಎಂದು ಚುನಾವಣಾ ಆಯೋಗವೇ ಮಾರ್ಚ್‌ನಲ್ಲಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.