ADVERTISEMENT

ಮೋದಿ ಸಿನಿಮಾ: ‘ಸುಪ್ರೀಂ’ಗೆ ಆಯೋಗದ ವರದಿ

ಪಿಟಿಐ
Published 22 ಏಪ್ರಿಲ್ 2019, 20:16 IST
Last Updated 22 ಏಪ್ರಿಲ್ 2019, 20:16 IST
 ‘ಪಿಎಂ ನರೇಂದ್ರ ಮೋದಿ’ ಚಿತ್ರದ ದೃಶ್ಯ
‘ಪಿಎಂ ನರೇಂದ್ರ ಮೋದಿ’ ಚಿತ್ರದ ದೃಶ್ಯ   

ನವದೆಹಲಿ: ಮೋದಿ ಅವರ ಜೀವನವನ್ನು ಆಧರಿಸಿದ ‘ಪಿಎಂ ನರೇಂದ್ರ ಮೋದಿ’ ಸಿನಿಮಾವನ್ನು ಕುರಿತ ವಿಸ್ತೃತ ವರದಿಯನ್ನು ಚುನಾವಣಾ ಆಯೋಗವು ಸೋಮವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ. ವರದಿ ಸ್ವೀಕರಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠವು ಚಿತ್ರದ ನಿರ್ಮಾಪಕರಿಗೂ ವರದಿಯ ಪ್ರತಿಯನ್ನು ನೀಡುವಂತೆ ಸೂಚಿಸಿದೆ.

‘ಆಯೋಗವು ಎರಡು ನಿಮಿಷಗಳ ಟ್ರೇಲರ್‌ ಅನ್ನು ನೋಡಿ ಚಿತ್ರ ಪ್ರದರ್ಶನ ತಡೆಯುವ ತೀರ್ಮಾನ ಕೈಗೊಂಡಿದೆ, ಇದು ಸರಿಯಲ್ಲ’ ಎಂದು ಚಿತ್ರದ ನಿರ್ಮಾಪಕರು ವಾದಿಸಿದ್ದರು. ಈ ಅರ್ಜಿಯನ್ನು ಪರಿಗಣಿ ಸಿದ ನ್ಯಾಯಾಲಯವು, ಚಿತ್ರವನ್ನು ಪೂರ್ತಿಯಾಗಿ ವೀಕ್ಷಿಸಿ ಆ ವಿಸ್ತೃತ ವರದಿ ನೀಡುವಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿತ್ತು. ಏಪ್ರಿಲ್‌ 26ರಂದು ನಿರ್ಮಾಪಕರ ಅರ್ಜಿಯ ವಿಚಾರಣೆ ನಡೆಸುವುದಾಗಿ ಕೋರ್ಟ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT