ADVERTISEMENT

ಚುನಾವಣಾ ಹಿನ್ನೋಟ | ದಕ್ಷಿಣ ಕನ್ನಡ: ಗೆಲುವಿನಲ್ಲೂ ಸೋಲಿನಲ್ಲೂ ಪೂಜಾರಿ ದಾಖಲೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2024, 6:24 IST
Last Updated 12 ಏಪ್ರಿಲ್ 2024, 6:24 IST
<div class="paragraphs"><p>ಜನಾರ್ದನ ಪೂಜಾರಿ</p></div>

ಜನಾರ್ದನ ಪೂಜಾರಿ

   

ಮಂಗಳೂರು: ದಕ್ಷಿಣ ಕನ್ನಡ (ಹಿಂದಿನ ಮಂಗಳೂರು) ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಜನಾರ್ದನ ಪೂಜಾರಿ ಅವರ ಹೆಸರಲ್ಲಿ ಸತತ ಗೆಲುವು ಮತ್ತು ಸತತ ಸೋಲಿನ ದಾಖಲೆ ಇದೆ.

ಈ ಕ್ಷೇತ್ರದಲ್ಲಿ ಅತಿ ಹೆಚ್ಚುಬಾರಿ ಸ್ಪರ್ಧಿಸಿದ ಕೀರ್ತಿಯೂ ಅವರದ್ದು.

ADVERTISEMENT

ಒಂಬತ್ತು ಬಾರಿ ಸ್ಪರ್ಧಿಸಿದ್ದ ಅವರು, ನಾಲ್ಕು ಬಾರಿ ಗೆಲುವು ಸಾಧಿಸಿದ್ದರು. ಐದು ಬಾರಿ ಪರಾಭವಗೊಂಡಿದ್ದಾರೆ.

1977ರಲ್ಲಿ ಮೊದಲ ಚುನಾವಣೆಯಲ್ಲೇ ದಾಖಲೆಯ ಶೇ 60.08ರಷ್ಟು ಮತ ಪಡೆದು ಆಯ್ಕೆಯಾಗಿದ್ದ ಅವರು, 1980, 1984, 1989ರ ಚುನಾವಣೆಯಲ್ಲಿ ಸತತ ಗೆಲುವು ಸಾಧಿಸಿದರು.

ಮುಂದಿನ ಮೂರು ಚುನಾವಣೆಗಳಲ್ಲಿ ಅಂದರೆ, 1991, 1996, 1998ರಲ್ಲಿ ಬಿಜೆಪಿಯ ವಿ. ಧನಂಜಯ ಕುಮಾರ್‌ ವಿರುದ್ಧ ಪರಾಭವಗೊಂಡರು. 2009 ಮತ್ತು 2014ರ ಚುನಾವಣೆಗಳಲ್ಲಿ ಬಿಜೆಪಿಯ ನಳಿನ್‌ ಕುಮಾರ್‌ ಕಟೀಲ್‌ ವಿರುದ್ಧ ಪರಾಭವವಗೊಂಡರು.

ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದಾಗ ಕೇಂದ್ರದ ಹಣಕಾಸು ಖಾತೆ ರಾಜ್ಯ ಸಚಿವ, ನಂತರ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.