ಬಿಜೆಪಿ ನೇತೃತ್ವದ ಸರ್ಕಾರದಿಂದ ದೇಶದ ಜಾತ್ಯತೀತತೆಗೆ ಅಪಾಯವಿದೆ. ದಶಕಗಳಿಂದ ಇಲ್ಲಿ ನೆಲೆಸಿರುವ ದೊಡ್ಡ ಸಂಖ್ಯೆಯ ಜನರು ತಾವು ಈ ದೇಶವನ್ನು ತೊರೆಯಬೇಕಾಗಬಹುದೇ ಎಂಬ ಆತಂಕದಲ್ಲಿದ್ದಾರೆ. ದೇಶದ ಕೋಟ್ಯಂತರ ಜನರು ಭಯದಿಂದ ಬದುಕುತ್ತಿದ್ದಾರೆ. ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳು, ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ರಾಷ್ಟ್ರವಾಗಿರುವ ಭಾರತದ ಪ್ರತಿಷ್ಠೆಗೆ ವಿಶ್ವ ಸಮುದಾಯದ ಮುಂದೆ ಧಕ್ಕೆ ತರುತ್ತಿವೆ. ದೇಶದಲ್ಲಾಗುವ ಈಚೆಗಿನ ಬೆಳವಣಿಗೆಗಳನ್ನು ಕಂಡು ವಿಶ್ವಸಂಸ್ಥೆ ಅಲ್ಲದೆ, ಅಮೆರಿಕ ಹಾಗೂ ಜರ್ಮನಿ ಧ್ವನಿಯೆತ್ತಿವೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಜಾರಿಗೆ ತಂದಿರುವುದಕ್ಕೆ ಹಲವು ರಾಷ್ಟ್ರಗಳು ಹಾಗೂ ಸಂಘಟನೆಗಳು ಟೀಕೆ ವ್ಯಕ್ತಪಡಿಸಿವೆ–ಪಿಣರಾಯಿ ವಿಜಯನ್, ಕೇರಳ ಮುಖ್ಯಮಂತ್ರಿ
ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮ ಮತ್ತು ಕಾಶ್ಮೀರವನ್ನು ಸಂವಿಧಾನದ 370ನೇ ವಿಧಿ, ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದದ ಹಿಡಿತದಿಂದ ಸ್ವತಂತ್ರಗೊಳಿಸಿದ್ದಾರೆ. ಇದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬಹುದೊಡ್ಡ ಸಾಧನೆ. ಅಲ್ಲಿನ ಅಭಿವೃದ್ಧಿಗೆ ಮೋದಿ ನೇತೃತ್ವದ ಸರ್ಕಾರ ಮಹತ್ವದ ಕೊಡುಗೆ ನೀಡಿದೆ. ಗಡಿಯುದ್ದಕ್ಕೂ ಸರ್ಜಿಕಲ್ ಸ್ಟ್ರೈಕ್ ನಡೆಸುವ ಮೂಲಕ ಪಾಕಿಸ್ತಾನ ಪ್ರಾಯೋಜಿತ ಉಗ್ರರ ಸದ್ದಡಗಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ ಪ್ರಕರಣಗಳು ಶೇ 75ರಷ್ಟು ಕಡಿಮೆಯಾಗಿವೆ. ನಾಗರಿಕರ ಹತ್ಯೆ ಪ್ರಕರಣಗಳು ಶೇ 81ರಷ್ಟು ಹಾಗೂ ಭದ್ರತಾ ಪಡೆ ಯೋಧರ ಸಾವು– ನೋವು ಶೇ 50ರಷ್ಟು ಕಡಿಮೆಯಾಗಿವೆ–ಅನುರಾಗ್ ಠಾಕೂರ್, ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.