ADVERTISEMENT

ಮೋದಿ ಎದುರು ಬಿಎಸ್‌ಎಫ್ ಮಾಜಿ ಯೋಧ ಕಣಕ್ಕೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 20:01 IST
Last Updated 29 ಏಪ್ರಿಲ್ 2019, 20:01 IST
ತೇಜ್ ಬಹದ್ದೂರ್ ಯಾದವ್
ತೇಜ್ ಬಹದ್ದೂರ್ ಯಾದವ್   

ಲಖನೌ: ಬಿಜೆಪಿಯ ರಾಷ್ಟ್ರೀಯವಾದ ಅಸ್ತ್ರಕ್ಕೆ ಪ್ರತ್ಯಸ್ತ್ರ ಹೂಡಿರುವಸಮಾಜವಾದಿ ಪಕ್ಷ, ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಎದುರಾಳಿಯಾಗಿ, ವಜಾಗೊಂಡ ಬಿಎಸ್‌ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಅವರನ್ನು ಕಣಕ್ಕೆ ಇಳಿಸಿದೆ.

ನಾಮಪತ್ರ ಸಲ್ಲಿಕೆ ಸಮಯ ಕೊನೆಗೊಳ್ಳುವ ಕೆಲವೇ ಕ್ಷಣಗಳ ಮೊದಲು ತೇಜ್ ಬಹದ್ದೂರ್ ಉಮೇದುವಾರಿಕೆ ಸಲ್ಲಿಸಿದರು. ಬಿಎಸ್‌ಎಫ್‌ನಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಕುರಿತು ಬಹದ್ದೂರ್ ಆರೋಪ ಮಾಡಿದ್ದರು.

ಈ ಮುನ್ನ ಮೋದಿ ಅವರ ಎದುರಾಳಿಯಾಗಿ ಶಾಲಿನಿ ಯಾದವ್ ಅವರನ್ನು ಎಸ್‌ಪಿ ಘೋಷಿಸಿತ್ತು. ಕಾಂಗ್ರೆಸ್‌ನಿಂದ ಬಂದಿದ್ದ ಅವರ ಸ್ಪರ್ಧೆಗೆ ಸ್ಥಳೀಯ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು.

ADVERTISEMENT

ಕಳಪೆ ಆಹಾರದ ವಿರುದ್ಧ ದನಿ ಎತ್ತಿದ್ದ ಬಹದ್ದೂರ್, ಬಳಿಕ ಸ್ವಯಂ ನಿವೃತ್ತಿಗೆ ಅರ್ಜಿ ಹಾಕಿದ್ದರು. ಬಿಎಸ್‌ಎಫ್‌ ನಿರಾಕರಿಸಿತ್ತು. ಇದನ್ನು ಅವರು ಪ್ರತಿಭಟಿಸಿದ್ದರು. ಅಶಿಸ್ತಿನ ಕಾರಣ ನೀಡಿ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಹೀಗಾಗಿ ಮೋದಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ನೈಜ ಚೌಕೀದಾರ ಹಾಗೂ ನಕಲಿ ಚೌಕೀದಾರನ ನಡುವಿನ ಸ್ಪರ್ಧೆ ಎಂದು ಅವರು ತಮ್ಮ ಸ್ಪರ್ಧೆಯನ್ನು ಕರೆದಿದ್ದರು.

ಬಹದ್ದೂರ್ ಅವರು ‘ಫೌಜಿ ಏಕ್ತಾ ಕಲ್ಯಾಣ್ ಮಂಚ್’ ಎಂಬ ಎನ್‌ಜಿಒ ಸ್ಥಾಪಿಸಿದ್ದಾರೆ. ಸೇನೆ ಹಾಗೂ ಅರೆಸೇನಾಪಡೆಯ ಹಲವು ನಿವೃತ್ತ ಸೈನಿಕರು ಇದರ ಸದಸ್ಯರಾಗಿದ್ದಾರೆ. ಇವರೆಲ್ಲ ಬಹದ್ದೂರ್ ಪರ ಪ್ರಚಾರ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನಿಂದ ಅಜಯ್ ರಾಯ್ ಅವರು ಕಣಕ್ಕಿಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.