ADVERTISEMENT

ಮೋದಿಯನ್ನು ಹಿಟ್ಲರ್‌ಗೆ ಹೋಲಿಸಿದ ಫಾರೂಕ್

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 19:51 IST
Last Updated 13 ಏಪ್ರಿಲ್ 2019, 19:51 IST
ಚುನಾವಣಾ ಪ್ರಚಾರದ ವೇಳೆ ಶ್ರೀನಗರದ ದಾಲ್ ಸರೋವರದಲ್ಲಿ ದೋಣಿ ವಿಹಾರ ಮಾಡುತ್ತಾ ವಿಜಯದ ಸಂಕೇತ ಪ್ರದರ್ಶಿಸಿದ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ–ಪಿಟಿಐ ಚಿತ್ರ
ಚುನಾವಣಾ ಪ್ರಚಾರದ ವೇಳೆ ಶ್ರೀನಗರದ ದಾಲ್ ಸರೋವರದಲ್ಲಿ ದೋಣಿ ವಿಹಾರ ಮಾಡುತ್ತಾ ವಿಜಯದ ಸಂಕೇತ ಪ್ರದರ್ಶಿಸಿದ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ–ಪಿಟಿಐ ಚಿತ್ರ   

ಶ್ರೀನಗರ: ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ಗೆ ಹೋಲಿಸಿದ್ದಾರೆ.

‘ಮೋದಿ ಅವರು ಸಬ್‌ ಕಾ ಸಾಥ್ ಸಬ್‌ ಕಾ ವಿಕಾಸ್ ಎಂದು ಹೇಳುತ್ತಾರೆ. ಹಿಟ್ಲರ್ ಕೂಡಾ ಜರ್ಮನಿಯಲ್ಲಿ ಅಂದು ಇಂಥದೇ ಮಾತನ್ನು ಹೇಳಿದ್ದ’ ಎಂದು ಫಾರೂಕ್ ಹೇಳಿದ್ದಾರೆ.

ಶ್ರೀನಗರದ ಹಳೆ ಪಟ್ಟಣದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಪುಲ್ವಾಮಾ ದಾಳಿಯಲ್ಲಿ 40 ಸೈನಿಕರು ಬಲಿಯಾದರು. ಆದರೆ ಮೋದಿ ಬಾಲಾಕೋಟ್ ಬಾಲಾಕೋಟ್ ಬಾಲಾಕೋಟ್ ಎನ್ನುತ್ತಿದ್ದಾರೆ. ತನಿಖೆ ಬಗ್ಗೆ ಅವರು ಏಕೆ ಮಾತನಾಡುತ್ತಿಲ್ಲ’ ಎಂದು ಫಾರೂಕ್‌ ಪ್ರಶ್ನಿಸಿದ್ದಾರೆ.

ADVERTISEMENT

‘ಪಾಕಿಸ್ತಾನದ ವಿರುದ್ಧ ಸುಳ್ಳು ಯುದ್ಧ ಪ್ರದರ್ಶಿಸಿ ಮೋದಿ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಬಿಜೆಪಿಯವರು ಬಾಲಾಕೋಟ್ ಹೆಸರಲ್ಲಿ ಬರೀ ಡೊಳ್ಳು ಬಾರಿಸುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಸಂವಿಧಾನದ 370 ಹಾಗೂ 35ಎ ಕಲಂ ರದ್ದುಗೊಳಿಸಿದರೆ, ಅದರ ವಿರುದ್ಧ ಹೋರಾಡಲು ಸಿದ್ಧ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.