ADVERTISEMENT

ಪಕ್ಷೇತರ ಅಭ್ಯರ್ಥಿಯ ಪ್ರಣಾಳಿಕೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 15:06 IST
Last Updated 15 ಏಪ್ರಿಲ್ 2019, 15:06 IST
ಕುಂದಾಬಾಯಿ ಪರುಳೇಕರ
ಕುಂದಾಬಾಯಿ ಪರುಳೇಕರ   

ಕಾರವಾರ:ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ಕುಂದಾಬಾಯಿ ಪರುಳೇಕರತಮ್ಮ ಚುನಾವಣಾ ಪ್ರಣಾಳಿಕೆಯನ್ನು ಸೋಮವಾರ ಬಿಡುಗಡೆ ಮಾಡಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾರವಾರದ ಕೋಣೆನಾಲಾ ಸ್ವಚ್ಛಗೊಳಿಸಿ ಸೇತುವೆ ನಿರ್ಮಾಣ ಮಾಡಲಾಗುವುದು.ಕಾರವಾರ– ಅಂಕೋಲಾ ತಾಲ್ಲೂಕುಗಳ ಮಹಿಳೆಯರ ಸಮಸ್ಯೆಗಳನ್ನು ಉಚಿತವಾಗಿ ಬಗೆಹರಿಸಲು ಸಭಾಭವನ ಕಟ್ಟಡ ನಿರ್ಮಿಸಲಾಗುವುದು. ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಗಳಲ್ಲಿರುವ ಶೌಚಾಲಯ ಬಳಕೆಗೆ ಶುಲ್ಕ ರದ್ದು ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರತಿ ಮನೆಗೆ ಕಡ್ಡಾಯವಾಗಿಶೌಚಾಲಯ ನಿರ್ಮಿಸಲಾಗುವುದು.ಎಲ್ಲ ಸರ್ಕಾರಿ ಕಚೇರಿಗಳನ್ನು ಲಂಚಮುಕ್ತಗೊಳಿಸಲಾಗುವುದು.ಭೂರಹಿತ ನಿರಾಶ್ರಿತರಿಗೆ ಸರ್ಕಾರಿ ಜಮೀನು ಮಂಜೂರು ಮಾಡಿ ಸಮಸ್ಯೆ ಬಗೆಹರಿಸಿ ಕೊಡಲಾಗುವುದು’ ಎಂದು ತಿಳಿಸಿದರು.

ADVERTISEMENT

ಈ ಸಂದರ್ಭದಲ್ಲಿ ಸದಾನಂದ ಭಂಡಾರಿ, ಅಭಿಷೇಕ ಕೆ.ನಾಯ್ಕ, ತಿಮ್ಮಪ್ಪ ಹಾಗೂ ಖತೀಜಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.