
ಪ್ರಜಾವಾಣಿ ವಾರ್ತೆನವದೆಹಲಿ(ಪಿಟಿಐ): ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರಿಗೆ ಟಿಕೆಟ್ ನೀಡಿಕೆಯಲ್ಲಿ ಉಂಟಾದ ವಿವಾದದ ಬಿಸಿ ಆರುವ ಮೊದಲೇ ಹೊಸದೊಂದು ವಿವಾದ ಸೃಷ್ಟಿಯಾಗುವ ಅಪಾಯ ಬಿಜೆಪಿಗೆ ಎದುರಾಗಿದೆ. ಅಡ್ವಾಣಿ ಅವರ ನಿಷ್ಠರಾಗಿರುವ, ಅಹಮದಾಬಾದ್ ಪೂರ್ವದ ಹಾಲಿ ಸಂಸದ ಹರೀನ್ ಪಾಠಕ್ ಅವರಿಗೆ ಟಕೆಟ್ ನಿರಾಕರಿಸಿ ನಟ ಪರೇಶ್ ರಾವಲ್ ಅವರಿಗೆ ಟಿಕೆಟ್ ನೀಡಲಾಗಿದೆ.
 
 ಭಾನುವಾರ ಬಿಡುಗಡೆ ಮಾಡಲಾದ ಒಂಬತ್ತು ಅಭ್ಯರ್ಥಿಗಳ ಪಟ್ಟಿಯಲ್ಲಿ ಪರೇಶ್ ರಾವಲ್ ಹೆಸರು ಪ್ರಕಟಿಸಲಾಗಿದೆ.ಅಡ್ವಾಣಿ ಅವರು ಗಾಂಧಿನಗರದಿಂದಲೇ ಸ್ಪರ್ಧಿಸಲು ನಿರ್ಧರಿಸಿದ್ದರಿಂದಾಗಿ ಮಧ್ಯಪ್ರದೇಶ ಬಿಜೆಪಿ ಕಚೇರಿ ಉಸ್ತುವಾರಿ ಅಲೋಕ್ ಸಂಜರ್ ಅವರಿಗೆ ಭೋಪಾಲ್ ಟಿಕೆಟ್ ನೀಡಲಾಗಿದೆ. ಅಡ್ವಾಣಿ ಅವರಿಗಾಗಿ ಹಾಲಿ ಸಂಸದ ಕೈಲಾಶ್ ಜೋಷಿ ಅವರು ಕ್ಷೇತ್ರ ಬಿಟ್ಟುಕೊಟ್ಟಿದ್ದರಿಂದ ಇಲ್ಲಿಗೆ ಹೊಸದಾಗಿ ಅಭ್ಯರ್ಥಿಯನ್ನು ಪ್ರಕಟಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.