ಹೈದರಾಬಾದ್ (ಪಿಟಿಐ): ಸೀಮಾಂಧ್ರದ ಕಾಂಗ್ರೆಸ್ ಮುಖಂಡರು ಪಕ್ಷ ತ್ಯಜಿಸಿ ತೆಲುಗು ದೇಶಂ ಪಕ್ಷಕ್ಕೆ (ಟಿಡಿಪಿ) ವಲಸೆ ಹೋಗುತ್ತಿರುವುದು ಮುಂದುವರಿದಿದೆ.
ಮಾಜಿ ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿ ಅವರ ಸಂಪುಟದಲ್ಲಿ ಅರಣ್ಯ ಸಚಿವರಾಗಿದ್ದ ಸತ್ರುಚರ್ಲ ವಿಜಯರಾಮ್ ಮತ್ತು ಶಾಸಕ ಜನಾರ್ದನ ಥತ್‌ರಾಜ್ ಭಾನುವಾರ ಟಿಡಿಪಿ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ಆ ಪಕ್ಷ ಸೇರಿದರು.
‘ಆಂಧ್ರ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಅನುಭವಿ ನಾಯಕ ನಾಯ್ಡು ಅವರೇ ಸೂಕ್ತ ವ್ಯಕ್ತಿ’ ಎಂದು ಪಕ್ಷ ಸೇರಿದ ಬಳಿಕ ನಾಯಕರು ತಿಳಿಸಿದ್ದಾರೆ.
ಆಂಧ್ರ ಪ್ರದೇಶ ವಿಭಜನೆಯ ತೀರ್ಮಾನ ಕೈಗೊಂಡ ಬಳಿಕ ಕಾಂಗ್ರೆಸ್‌ನ ಹಲವು ಮುಖಂಡರು ಪಕ್ಷ ತೊರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.