ADVERTISEMENT

ಲೋಕಸಭಾ ಚುನಾವಣಾ ಫಲಿತಾಂಶದ ಚಿತ್ರಣದಿಂದ ಪ್ರಧಾನಿಗೆ ದಿಗ್ಭ್ರಮೆ: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಜೂನ್ 2024, 7:45 IST
Last Updated 4 ಜೂನ್ 2024, 7:45 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಬಿಜೆಪಿಯ ಗೆಲುವಿನ ಸಂಖ್ಯೆಯು ಲೋಕಸಭಾ ಚುನಾವಣೆಯ ಸರಳ ಬಹುಮತ ಸಂಖ್ಯೆಗಿಂತಲೂ ಕುಸಿಯುತ್ತಿದೆ ಎಂಬುದನ್ನು ಚುನಾವಣಾ ಫಲಿತಾಂಶದ ಇತ್ತೀಚಿನ ಚಿತ್ರಣ ಹೇಳುತ್ತಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರನ್ನು ದಿಗ್ಭ್ರಮೆಗೊಳಿಸಿದೆ ಎಂದು ಕಾಂಗ್ರೆಸ್‌ ಹೇಳಿದೆ.

ಚುನಾವಣಾ ಫಲಿತಾಂಶದ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್‌ ರಮೇಶ್‌, ಪ್ರಧಾನಿ ಅವರಿಗೆ ನೈತಿಕವಾಗಿ ಸೋಲಾಗಿದೆ ಎಂದಿದ್ದಾರೆ.

'543 ಕ್ಷೇತ್ರಗಳ ಚಿತ್ರಣ ಸಿಕ್ಕಿದೆ. ಮೋದಿ ಅವರಿಗೆ ರಾಜಕೀಯವಾಗಿ ಹಾಗೂ ನೈತಿಕವಾಗಿ ಆಘಾತಕಾರಿ ಸೋಲಾಗಿದೆ ಎಂಬುದು ಸ್ಪಷ್ಟ. ಚುನಾವಣೋತ್ತರ ಸಮೀಕ್ಷೆಗಳ ಬಣ್ಣ ಬಯಲಾಗಿದೆ. ಅವು ಕಪೋಲಕಲ್ಪಿತ ಎಂಬುದು ಸ್ಪಷ್ಟವಾಗಿದೆ' ಎಂದು ಟ್ವೀಟ್‌ ಮಾಡಿದ್ದಾರೆ.

ADVERTISEMENT

ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಬಿಜೆಪಿ ಹೆಚ್ಚು ಸ್ಥಾನ ಗಳಿಸಿದ ಪಕ್ಷ ಎನಿಸಿದೆ.

ಚುನಾವಣಾ ಆಯೋಗದ ಇತ್ತೀಚಿನ ಮಾಹಿತಿ ಪ್ರಕಾರ, ಬಿಜೆಪಿ 243 ಕಡೆ ಮುನ್ನಡೆ/ಗೆಲುವು ಸಾಧಿಸಿದೆ. ಕಾಂಗ್ರೆಸ್‌ಗೆ 95 ಕ್ಷೇತ್ರಗಳಲ್ಲಿ ಮುನ್ನಡೆ/ಗೆಲುವು ಲಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.