ADVERTISEMENT

LS Polls | ತಮಿಳುನಾಡು ಕಾಂಗ್ರೆಸ್ ಮಾಜಿ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಮಾರ್ಚ್ 2024, 5:33 IST
Last Updated 28 ಮಾರ್ಚ್ 2024, 5:33 IST
ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ಸಿ.ಆರ್‌.ಕೇಶವನ್‌ (ಎಡ)
ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ಸಿ.ಆರ್‌.ಕೇಶವನ್‌ (ಎಡ)   ಪಿಟಿಐ ಚಿತ್ರ

ನವದೆಹಲಿ: ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಸಿ.ಆರ್‌.ಕೇಶವನ್‌ ಅವರನ್ನು ಪಕ್ಷದ ರಾಷ್ಟ್ರೀಯ ವಕ್ತಾರರನ್ನಾಗಿ ನೇಮಕ ಮಾಡಿದ್ದಾರೆ.

ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ‍ಪ್ರಕಟಿಸಿದ್ದಾರೆ.

ದೇಶದ ಮೊದಲ ಗವರ್ನರ್‌ ಜನರಲ್‌ ಸಿ.ರಾಜಗೋಪಾಲಚಾರಿ ಅವರ ಮರಿಮೊಮ್ಮಗ ಹಾಗೂ ಈ ಹಿಂದೆ ತಮಿಳುನಾಡು ಕಾಂಗ್ರೆಸ್‌ನಲ್ಲಿದ್ದ ಕೇಶವನ್‌, ಕಳೆದ ವರ್ಷ ಕೇಸರಿ ಪಾಳಯಕ್ಕೆ ಸೇರಿದ್ದರು.

ADVERTISEMENT

ಹಲವು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಲೋಕಸಭೆ ಚುನಾವಣೆ ಉಸ್ತುವಾರಿ ಹಾಗೂ ಉಪ ಉಸ್ತುವಾರಿಗಳನ್ನೂ ಬಿಜೆಪಿ ನೇಮಕಮಾಡಿದೆ ಎಂದು ಸುದ್ದಿ ಸಂಸ್ಥೆ 'ಎಎನ್‌ಐ' ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.