ADVERTISEMENT

ಹರಿಯಾಣ: ಕಾಂಗ್ರೆಸ್‌ ತೊರೆದ ಮಾಜಿ ಸಚಿವೆ ಸಾವಿತ್ರಿ ಜಿಂದಾಲ್

ಪಿಟಿಐ
Published 28 ಮಾರ್ಚ್ 2024, 7:29 IST
Last Updated 28 ಮಾರ್ಚ್ 2024, 7:29 IST
ಸಾವಿತ್ರಿ ಜಿಂದಾಲ್
ಸಾವಿತ್ರಿ ಜಿಂದಾಲ್   (ಚಿತ್ರ ಕೃಪೆ: X/ @SavitriJindal)

ಚಂಡೀಗಢ: ಹರಿಯಾಣದ ಮಾಜಿ ಸಚಿವೆ ಸಾವಿತ್ರಿ ಜಿಂದಾಲ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಇತ್ತೀಚೆಗಷ್ಟೇ ಸಾವಿತ್ರಿ ಜಿಂದಾಲ್ ಅವರ ಪುತ್ರ, ಉದ್ಯಮಿ ನವೀನ್ ಜಿಂದಾಲ್ ಅವರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಇದಾದ ಕೆಲವೇ ದಿನಗಳಲ್ಲಿ ಬುಧವಾರ ತಡರಾತ್ರಿ 84 ವರ್ಷದ ಸಾವಿತ್ರಿ ಅವರು ಸಾಮಾಜಿಕ ಮಾಧ್ಯಮದ ಮೂಲಕ ಕಾಂಗ್ರೆಸ್ ತೊರೆಯುವ ನಿರ್ಧಾರ ಪ್ರಕಟಿಸಿದ್ದಾರೆ.

ADVERTISEMENT

'ನಾನು 10 ವರ್ಷಗಳ ಕಾಲ ಹಿಸಾರ್‌ನ ಜನರನ್ನು ಶಾಸಕಿಯಾಗಿ ಪ್ರತಿನಿಧಿಸಿದ್ದೇನೆ. ಅಲ್ಲದೆ ಸಚಿವೆಯಾಗಿ ಹರಿಯಾಣದ ಜನರಿಗೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದೇನೆ. ಹಿಸಾರ್‌ನ ಜನರು, ನನ್ನ ಕುಟುಂಬದ ಸಲಹೆಯ ಮೇರೆಗೆ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.

ಹರಿಯಾಣದ ಮಾಜಿ ಸಚಿವ ಒ.ಪಿ. ಜಿಂದಾಲ್ ಅವರ ಮಗನಾಗಿರುವ ನವೀನ್ ಜಿಂದಾಲ್, ಕುರುಕ್ಷೇತ್ರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.