ADVERTISEMENT

ಇಟಾನಗರ: ಒಂದೇ ಮತಕ್ಕಾಗಿ ಅಧಿಕಾರಿಗಳ 40 ಕಿ.ಮೀ. ಕಾಲ್ನಡಿಗೆ

ಪಿಟಿಐ
Published 27 ಮಾರ್ಚ್ 2024, 12:26 IST
Last Updated 27 ಮಾರ್ಚ್ 2024, 12:26 IST
   

ಇಟಾನಗರ: ಅರುಣಾಚಲ ಪ್ರದೇಶದ ಚೀನಾ ಗಡಿ ಬಳಿಯ ಮಾಲೋಗಮ್ ಗ್ರಾಮದಲ್ಲಿರುವ ಮಹಿಳೆಯೊಬ್ಬರ ಮತದಾನಕ್ಕಾಗಿ ಚುನಾವಣಾ ಅಧಿಕಾರಿಗಳ ತಂಡವು ಏಪ್ರಿಲ್‌ 18ರಂದು ಕಾಲ್ನಡಿಗೆಯಲ್ಲೇ 40 ಕಿ.ಮೀ. ಬೆಟ್ಟಗುಡ್ಡಗಳ ದುರ್ಗಮ ಹಾದಿಯನ್ನು ಸವೆಸಲಿದೆ.

44 ವರ್ಷದ ಸೊಕೇಲಾ ತಯಾಂಗ್‌ ಅವರೇ ಈ ಗ್ರಾಮದ ಏಕೈಕ ಮತದಾರರು.

‘ಎಷ್ಟು ಮತದಾರರು ಇದ್ದಾರೆ ಎನ್ನುವುದು ಮುಖ್ಯವಲ್ಲ. ಪ್ರತಿಯೊಬ್ಬ ಪ್ರಜೆಯೂ ತಮ್ಮ ಹಕ್ಕು ಚಲಾಯಿಸುವುದು ಮುಖ್ಯ. ಸೊಕೇಲಾ ಅವರ ಮತವು ನಮ್ಮ ಬದ್ಧತೆಗೆ ಸಾಕ್ಷಿ’ ಎಂದು ಮುಖ್ಯ ಚುನಾವಣಾ ಅಧಿಕಾರಿ ಪವನ್‌ ಕುಮಾರ್ ಸೈನ್‌ ತಿಳಿಸಿದರು.

ADVERTISEMENT

ಮಾಲೋಗಮ್ ಗ್ರಾಮದಲ್ಲಿ ಕೆಲವೇ ಕುಟುಂಬಗಳು ನೆಲೆಸಿವೆ. ಆದರೆ ಸೊಕೇಲಾ ಅವರೊಬ್ಬರೇ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದೂ ತಿಳಿಸಿದರು.

‘ಇದು ಸಂಖ್ಯೆಗಳ ವಿಷಯವಲ್ಲ. ತನ್ನ ಧ್ವನಿಯನ್ನೂ ಆಲಿಸಲಾಗುತ್ತಿದೆ ಎಂದು ಪ್ರತಿಯೊಬ್ಬ ನಾಗರಿಕನಿಗೂ ಅನಿಸಬೇಕು. ಸೊಕೆಲ ತಯಾಂಗ್‌‌ ಅವರ ಮತವು, ಎಲ್ಲರನ್ನು ಒಳಗೊಳ್ಳುವ ಮತ್ತು ಸಮಾನತೆ ಬಗ್ಗೆ ಇರುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ’ ಎಂದು ಮುಖ್ಯ ಚುನಾವಣಾಧಿಕಾರಿ ಪವನ್ ಕುಮಾರ್ ಸೇನ್ ಹೇಳಿದರು.

ಚುನಾವಣಾ ಆಯೋಗದ ಪ್ರಕಾರ, ಮಲೋಗಾಮ್‌ನಲ್ಲಿ ಕೆಲವು ಕುಟುಂಬಗಳು ವಾಸಿಸುತ್ತಿದ್ದಾರೆ. ತಯಾಂಗ್‌ ಅವರು ಹೊರತುಪಡಿಸಿ ಉಳಿದವರೆಲ್ಲರೂ ಸಮೀಪದ ಬೂತ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.