ADVERTISEMENT

Lok Sabha Elections: ಇಂದೋರ್‌ನಲ್ಲಿ 'ನೋಟಾ'ಗೆ ಎರಡನೇ ಸ್ಥಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಜೂನ್ 2024, 8:52 IST
Last Updated 4 ಜೂನ್ 2024, 8:52 IST
<div class="paragraphs"><p>ನೋಟಾ</p></div>

ನೋಟಾ

   

ಇಂದೋರ್‌: ಮಧ್ಯಪ್ರದೇಶದ ಇಂದೋರ್‌ ಲೋಕಸಭಾ ಕ್ಷೇತ್ರದಲ್ಲಿ 1.7 ಲಕ್ಷ ಜನರು 'ಮೇಲಿನ ಯಾರೂ ಅಲ್ಲ' (ನೋಟಾ) ಆಯ್ಕೆಯನ್ನು ಒತ್ತಿದ್ದಾರೆ. ಇದರೊಂದಿಗೆ ಚುನಾವಣಾ ಇತಿಹಾಸದಲ್ಲೇ ಕ್ಷೇತ್ರವೊಂದರಲ್ಲಿ ಅತಿಹೆಚ್ಚು ನೋಟಾ ಮತ ಪ್ರಯೋಗವಾದಂತಾಗಿದೆ.

ಸದ್ಯದ ಮಾಹಿತಿ ಪ್ರಕಾರ, ಬಿಜೆಪಿ ಅಭ್ಯರ್ಥಿ ಶಂಕರ್‌ ಲಲ್ವಾನಿ ಅವರು 9,90,698  ಮತ ಗಳಿಸಿದ್ದಾರೆ. ಅವರ ಹತ್ತಿರದ ಪ್ರತಿಸ್ಪರ್ಧಿ ಬಹುಜನ ಸಮಾಜವಾದಿ ಪಕ್ಷದ ಸಂಜಯ್‌ ಅವರು 42,095 ಮತಗಳನ್ನು ಗಳಿಸಿದ್ದಾರೆ. ಸಂಜಯ್‌ ಅವರಿಗಿಂತಲೂ ಹೆಚ್ಚು (1,72,798) 'ನೋಟಾ' ಮತಗಳು ಬಿದ್ದಿರುವುದು ವಿಶೇಷ.

ADVERTISEMENT

10 ಲಕ್ಷಕ್ಕೂ ಹೆಚ್ಚು ಮತಗಳಿಂದ 'ಇಂದೋರ್‌' ಗೆಲ್ಲುವ ಯೋಜನೆ ಹಾಕಿಕೊಂಡಿದ್ದ ಬಿಜೆಪಿ, 9,48,603 ಮತಗಳ ಅಂತರದಿಂದ ಮುಂದಿದೆ.

'ನೋಟಾ' ದಾಖಲೆ
ಚುನಾವಣಾ ಇತಿಹಾಸದಲ್ಲೇ ಅತಿಹೆಚ್ಚು ನೋಟಾ ಮತಗಳಿಗೆ ಇಂದೋರ್‌ ಸಾಕ್ಷಿಯಾಗಿದೆ.

2019ರಲ್ಲಿ ಬಿಹಾರದ ಎಸ್‌ಸಿ ಮೀಸಲು ಕ್ಷೇತ್ರ ಗೋಪಾಲಗಂಜ್‌ನಲ್ಲಿ 51,660 ನೋಟಾ ಮತಗಳನ್ನು ಹಾಕಲಾಗಿತ್ತು. ಇದು ಈವರೆಗೆ ದಾಖಲೆಯಾಗಿತ್ತು. ಜೆಡಿ(ಯು) ಅಭ್ಯರ್ಥಿ ಡಾ.ಅಲೋಕ್‌ ಕುಮಾರ್‌ ಸುಮನ್‌ ಅವರು 5,68,160 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದರು.

2014ರಲ್ಲಿ ತಮಿಳುನಾಡಿನ ನೀಲಗಿರಿಯಲ್ಲಿ 46,559 ಮತ ಹಾಕಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.