ADVERTISEMENT

ಪಂಜಾಬ್ ನಕಲಿ ಮದ್ಯ ಸೇವನೆ ದುರಂತ: ಮೃತರ ಸಂಖ್ಯೆ 20ಕ್ಕೆ ಏರಿಕೆ: ವರದಿ ಕೇಳಿದ EC

ಪಿಟಿಐ
Published 23 ಮಾರ್ಚ್ 2024, 14:36 IST
Last Updated 23 ಮಾರ್ಚ್ 2024, 14:36 IST
<div class="paragraphs"><p>ಪಂಜಾಬ್‌ನ ಸುನಮ್‌ನಲ್ಲಿ ನಡೆದಿದ ಎನ್ನಲಾದ ನಕಲಿ ಮದ್ಯ ಸೇವನೆ ದುರಂತ ಕುರಿತು ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು</p></div>

ಪಂಜಾಬ್‌ನ ಸುನಮ್‌ನಲ್ಲಿ ನಡೆದಿದ ಎನ್ನಲಾದ ನಕಲಿ ಮದ್ಯ ಸೇವನೆ ದುರಂತ ಕುರಿತು ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು

   

ಪಿಟಿಐ ಚಿತ್ರ

ಚಂಡೀಗಢ: ‍ಪಂಜಾಬ್‌ನ ಸಂಗ್ರೂರ್ ಜಿಲ್ಲೆಯಲ್ಲಿ ಶಂಕಿತ ನಕಲಿ ಮದ್ಯ ಸೇವಿಸಿ ಮೃತಪಟ್ಟವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಘಟನೆ ಕುರಿತು ತಕ್ಷಣ ವರದಿ ಸಲ್ಲಿಸುವಂತೆ ಪಂಜಾಬ್‌ನ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ.

ಎಡಿಜಿಪಿ ಹುದ್ದೆಯ ಅಧಿಕಾರಿ ನೇತೃತ್ವದಲ್ಲಿ ಘಟನೆ ಕುರಿತು ತನಿಖೆ ಕೈಗೊಳ್ಳಲು ನಾಲ್ಕು ಸದಸ್ಯರ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಟಿಯಾಲ ರಾಜೀಂದರ್ ಆಸ್ಪತ್ರೆಯಲ್ಲಿ 11 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಗ್ರೂರ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಆರು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೂ 20 ಜನ ಮೃತಪಟ್ಟಿರುವುದಾಗಿ ಸಂಗ್ರೂರ್ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಕೃಪಾಲ್ ಸಿಂಗ್ ತಿಳಿಸಿದ್ದಾರೆ.

ಮೃತಪಟ್ಟವರಲ್ಲಿ ಗುಜ್ರನ್, ತಿಬ್ಬಿ ರವಿದಾಸಪುರ ಹಾಗೂ ಧಂಡೋಲಿ ಖುರ್ದ್‌ ಗ್ರಾಮಕ್ಕೆ ಸೇರಿದವರಾಗಿದ್ದಾರೆ. ಘಟನೆ ಕುರಿತು 8 ಜನರನ್ನು ಈವರೆಗೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕುರಿತು ವಿರೋಧಪಕ್ಷಗಳಾದ ಕಾಂಗ್ರೆಸ್ ಹಾಗೂ ಶಿರೋಮಣಿ ಅಕಾಲಿದಳದ ಮುಖಂಡರು ಎಎಪಿ ನೇತೃತ್ವದ ರಾಜ್ಯ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ.

‘200 ಲೀಟರ್‌ನಷ್ಟು ಎಥನಾಲ್‌, 156 ಬಾಟಲಿಯಷ್ಟು ಆಲ್ಕೊಹಾಲ್‌, ಲೇಬಲ್ ಇರುವ 130 ಬಾಟಲಿಯಷ್ಟು ನಕಲಿ ಮದ್ಯ, 80 ಬಾಟಲಿಯಷ್ಟು ಲೇಬಲ್ ಇಲ್ಲದ ನಕಲಿ ಮದ್ಯ, 4,500 ಖಾಲಿ ಬಾಟಲಿಗಳು ಮತ್ತು ಬಾಟಲಿ ಸೀಲ್ ಮಾಡುವ ಯಂತ್ರವನ್ನು ವಶಕ್ಕೆ ಪಡೆಯಲಾಗಿದೆ. ನಕಲಿ ಮದ್ಯ ತಯಾರಿಸಿ ಮಾರುತ್ತಿದ್ದ ತಂಡವನ್ನು ಬಂಧಿಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ಇಂಥ ನಕಲಿ ಮದ್ಯ ಮಾರಾಟ ಮಾಡುವ ಯೋಜನೆಯನ್ನು ಈ ತಂಡ ಹೊಂದಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.