ADVERTISEMENT

ನಾರಾಯಣಸ್ವಾಮಿ ಗೆಲುವು

ಕಾಂಗ್ರೆಸ್‌ ಪ್ರಾಥಮಿಕ ಚುನಾವಣೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 19:30 IST
Last Updated 13 ಮಾರ್ಚ್ 2014, 19:30 IST

ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಮಾಜಿ ಸಂಸದ ಸಿ.ನಾರಾ­ಯಣ­ಸ್ವಾಮಿ ಅವರು ಜಯ ಗಳಿಸಿದ್ದಾರೆ. ಎರಡನೇ ಪ್ರಾಶಸ್ತ್ಯದ ಮತಗಳ ಬೆಂಬಲದಿಂದ ಅವರು ಈ ಗೆಲುವು ಸಾಧಿಸಿ­ದ್ದಾರೆ. ಹೀಗಾಗಿ ಈ ಕ್ಷೇತ್ರದ ಟಿಕೆಟ್‌ ಅವರಿಗೇ ದೊರೆಯುವುದು ಖಚಿತ­ವಾದಂತಾಗಿದೆ.

ಒಟ್ಟು ನಾಲ್ವರು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಈ ಪೈಕಿ ಕೆಪಿಸಿಸಿ ಕಾರ್ಯದರ್ಶಿ ಜಿ.ಸಿ.ಚಂದ್ರಶೇಖರ್‌ 123 ಮತ ಪಡೆದು ಎರ­ಡನೇ ಸ್ಥಾನ ಗಳಿಸಿ­ದರು. ಎಐಸಿಸಿ ವಕ್ತಾರ ಎಂ.ವಿ.­ರಾಜೀವ್‌ ಗೌಡ 69 ಮತ್ತು ಮಾಜಿ ಶಾಸಕ ನೆ.ಲ.ನರೇಂದ್ರಬಾಬು 40.5 ಮತ ಪಡೆಯುವ ಮೂಲಕ ಅನುಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಇಲ್ಲಿನ ಆರ್‌.ಟಿ.ನಗರದಲ್ಲಿರುವ ಪಟೇಲ್ಸ್‌ ಇನ್‌ ಖಾಸಗಿ ರೆಸಾರ್ಟ್‌ನಲ್ಲಿ ಗುರುವಾರ ಬೆಳಿಗ್ಗೆ ಕಾಂಗ್ರೆಸ್‌ನ ಆಂತರಿಕ ಚುನಾವಣೆ ನಡೆಯಿತು. ಎಐಸಿಸಿ ನಿಯೋಜಿಸಿದ್ದ ಚುನಾವಣಾಧಿಕಾರಿ­ಗ­ಳಾದ ಜಸ್‌ಪ್ರೀತ್‌ ಸಿಂಗ್‌ ಮತ್ತು ನಿತಿನ್‌ ಕುಂಭಾ­ಲ್ಕರ್‌ ನೇತೃತ್ವದಲ್ಲಿ ಚುನಾವಣೆ ನಡೆಯಿತು.

ಆರಂಭದಲ್ಲಿ ಎಲ್ಲ ಅಭ್ಯರ್ಥಿಗಳೂ ತಲಾ ಹತ್ತು ನಿಮಿಷಗಳ ಕಾಲ ಮತ­ದಾರರನ್ನು ಉದ್ದೇಶಿಸಿ ಮಾತನಾಡಿದರು. ನಂತರ ಮತದಾನ ಶುರುವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.