
ಪ್ರಜಾವಾಣಿ ವಾರ್ತೆ
ಪೀಣ್ಯ ದಾಸರಹಳ್ಳಿ: ನರೇಂದ್ರ ಮೋದಿಯಂತಹ ನಾಯಕರ ಅಗತ್ಯ ದೇಶಕ್ಕಿದ್ದು, ಬಿಜೆಪಿಯನ್ನು ಬಲಪಡಿಸುವ ಮೂಲಕ ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಆರ್. ಅಶೋಕ ತಿಳಿಸಿದರು.
ಬೆಂಗಳೂರು ಉತ್ತರ ಲೋಕಸಭಾ ವ್ಯಾಪ್ತಿಯ ಕೆಂಗೇರಿ ಉಪನಗರ ಸಿರ್ಕೆ ಬಡಾವಣೆಯಲ್ಲಿ ಬಿಜೆಪಿ ಆಯೋಜಿಸಿದ್ದ ಹಿಂದುಳಿದ ಜಾತಿಗಳ ಸಮಾ ವೇಶದಲ್ಲಿ ಮಾತನಾಡಿದರು. ಗುಜರಾತ್‌ನ ಅಭಿವೃದ್ಧಿಯ ಮಾದರಿಯನ್ನು ಗಮನಿಸಿ ಬಿಜೆಪಿಗೆ ಮತ ನೀಡಬೇಕು ಎಂದರು.
ಲೋಕಸಭಾ ಅಭ್ಯರ್ಥಿ ಡಿ.ವಿ.ಸದಾನಂದಗೌಡ, ಹಿಂದು ಳಿದ ವರ್ಗದವರನ್ನು ಪ್ರಧಾನಿ ಮಾಡಲು ಹೊರ ಟಿರು ವುದು ಬಿಜೆಪಿಯೇ ಹೊರತು ಬೇರೆ ಪಕ್ಷಗಳಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.