ADVERTISEMENT

ದಿವಾಳಿ ಬ್ರದರ್ಸ್‌ ಕರ್ನಾಟಕಕ್ಕೆ ಕೊಟ್ಟ ದಿವಾಳಿ ಗ್ಯಾರಂಟಿಗಳಿವು: ಬಿಜೆ‍ಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಏಪ್ರಿಲ್ 2024, 11:30 IST
Last Updated 6 ಏಪ್ರಿಲ್ 2024, 11:30 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ವಾಕ್ಸಮರ ಮುಂದುವರಿದಿದೆ.

ಇದೀಗ ಬಿಜೆಪಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡು ರಾಜ್ಯ ಆಡಳಿತರೂಢ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದೆ.

ADVERTISEMENT

‘ದಿವಾಳಿ ಬ್ರದರ್ಸ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್‌ ಅವರು ಕರ್ನಾಟಕಕ್ಕೆ ಕೊಟ್ಟ ದಿವಾಳಿ ಗ್ಯಾರಂಟಿಗಳು: ಕಾವೇರಿ ದಿವಾಳಿ, ರೈತರ ದಿವಾಳಿ, ಆರ್ಥಿಕತೆ ದಿವಾಳಿ, ಕನ್ನಡಿಗರ ತೆರಿಗೆ ದಿವಾಳಿ, ಎಸ್ ಸಿ/ ಎಸ್.ಟಿ ಫಂಡ್ ದಿವಾಳಿ, ಕಾನೂನು ಸುವ್ಯವಸ್ಥೆ ದಿವಾಳಿ ಇದಿನ್ನೂ ಟ್ರೇಲರ್‌ ಅಷ್ಟೇ’ ಎಂದು ಬಿಜೆಪಿ ಪೋಸ್ಟ್‌ನಲ್ಲಿ ಬರೆದುಕೊಂಡಿದೆ.

‘ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್‌ ಮತ್ತಷ್ಟು ಲೂಟಿಗಿಳಿದು ಕರ್ನಾಟಕವನ್ನು ಸಂಪೂರ್ಣ ದಿವಾಳಿ ಮಾಡುವುದು ಖಚಿತ ನಿಶ್ಚಿತ ಖಂಡಿತ’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.