ADVERTISEMENT

ಚಾಮರಾಜನಗರ | ಮತದಾನ ಮಾಡಿ ಬರುವಾಗ ಕಾಡಾನೆ ದಾಳಿ: ವ್ಯಕ್ತಿ‌ ಸಾವು

​ಪ್ರಜಾವಾಣಿ ವಾರ್ತೆ
Published 10 ಮೇ 2023, 11:47 IST
Last Updated 10 ಮೇ 2023, 11:47 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹನೂರು (ಚಾಮರಾಜನಗರ ಜಿಲ್ಲೆ): ತಾಲ್ಲೂಕಿನ ಮಲೆ‌ಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿ ಬರುವ ತೋಕೆರೆ ಗ್ರಾಮದಲ್ಲಿ ಮತದಾನ ಮಾಡಿ, ಕಾಲುದಾರಿಯಲ್ಲಿ ವಾಪಸ್ ಬರುತ್ತಿದ್ದಾಗ ಕಾಡಾನೆ ದಾಳಿಗೆ ತುತ್ತಾಗಿ ಗ್ರಾಮದ ಪುಟ್ಟಸ್ವಾಮಿ (50) ಎಂಬುವವರು ಮೃತಪಟ್ಟಿದ್ದಾರೆ.

ಪುಟ್ಟಸ್ವಾಮಿ ಅವರು ತೋಕೆರೆ ಗ್ರಾಮದವರಾಗಿದ್ದು, ಮಾರ್ಟಳ್ಳಿಯಲ್ಲಿ‌ ಕುಟುಂಬ ಸಮೇತ ನೆಲೆಸಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು.

ಬುಧವಾರ ಗ್ರಾಮದಲ್ಲಿ ಮತದಾನ ನಡೆಯುತ್ತಿದ್ದುದ್ದರಿಂದ ಕುಟುಂಬ ಸಮೇತ ಮತದಾನ ಮಾಡಲು ಗ್ರಾಮಕ್ಕೆ ಹೋಗಿದ್ದರು. ಹಕ್ಕು ಚಲಾಯಿಸಿದ ನಂತರ ಕಾಲುದಾರಿಯಲ್ಲಿ ವಾಪಸ್ ಬರುತ್ತಿದ್ದಾಗ ಕಾಡಾನೆ ದಾಳಿ ಮಾಡಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.