ADVERTISEMENT

ಗೌರಿಬಿದನೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸಾವಿರ ಕೋಟಿ ಒಡೆಯ: ಓಡಾಡಲು ಕಾರಿಲ್ಲ!

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2023, 5:51 IST
Last Updated 18 ಏಪ್ರಿಲ್ 2023, 5:51 IST
ಕೆ.ಎಚ್.ಪುಟ್ಟಸ್ವಾಮಿಗೌಡ
ಕೆ.ಎಚ್.ಪುಟ್ಟಸ್ವಾಮಿಗೌಡ   

ಗೌರಿಬಿದನೂರು (ಚಿಕ್ಕಬಳ್ಳಾಪುರ): ಗೌರಿಬಿದನೂರು ವಿಧಾನಸಭಾ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದ ಉದ್ಯಮಿ ಕೆ.ಎಚ್.ಪುಟ್ಟಸ್ವಾಮಿಗೌಡ ಒಂದು ಸಾವಿರ ಕೋಟಿಯ ಒಡೆಯ. ಆದರೆ ಇವರ ಬಳಿ ಒಂದೂ ಕಾರು ಇಲ್ಲ!

ನಾಮಪತ್ರ ಸಲ್ಲಿಕೆ ವೇಳೆ ನೀಡಿದ ಆಸ್ತಿ ವಿವರದ ಪ್ರಕಾರ ಅವರ ಬಳಿ ₹9.10 ಲಕ್ಷ ಬೆಲೆಯ ಟ್ರ್ಯಾಕ್ಟರ್‌ ಹಾಗೂ ಇಬ್ಬರ ಮಕ್ಕಳ ಬಳಿ ಮೂರು ದ್ವಿಚಕ್ರ ವಾಹನ ಬಿಟ್ಟರೆ ಬೇರೆ ಯಾವ ವಾಹನ ಇಲ್ಲ.

ಒಟ್ಟು₹926.28 ಕೋಟಿ ಸ್ಥಿರಾಸ್ತಿ ಹೊಂದಿರುವ ಅವರು ವಿವಿಧ ಬ್ಯಾಂಕ್‌, ವ್ಯಕ್ತಿಗಳ ಬಳಿ ₹6.57 ಕೋಟಿ ಸಾಲ ಪಡೆದಿದ್ದಾರೆ. ಪತ್ನಿ ₹1.54 ಕೋಟಿ ಹಾಗೂ ಮಕ್ಕಳಿಬ್ಬರು ₹2.44 ಕೋಟಿ ಮತ್ತು ₹76.92 ಲಕ್ಷ ಸಾಲ ಹೊಂದಿದ್ದಾರೆ ಎಂದು ಘೋಷಿಸಿಕೊಂಡಿದ್ದಾರೆ.

ADVERTISEMENT

ಪುಟ್ಟಸ್ವಾಮಿಗೌಡ ಕುಟುಂಬದ ಎಲ್ಲರೂ ಉದ್ಯಮಿಗಳಾಗಿದ್ದು, ಇವರ ಮಗಳನ್ನು ಹೊಸಕೋಟೆ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಶರತ್ ಬಚ್ಚೇಗೌಡ ವಿವಾಹವಾಗಿದ್ದಾರೆ.

ಪತ್ನಿ ಹೆಸರಲ್ಲಿ ₹38.63 ಕೋಟಿ ಹಾಗೂ ಮಕ್ಕಳಿಬ್ಬರ ಹೆಸರಿನಲ್ಲಿ ತಲಾ ₹ 20.67 ಕೋಟಿ ಮತ್ತು ₹4.44 ಕೋಟಿ ಮೌಲ್ಯದ ಚರಾಸ್ತಿ ಇದೆ. ₹50 ಲಕ್ಷ ಮೌಲ್ಯದ ಸ್ಥಿರಾಸ್ತಿ ಹಾಗೂ ₹221.07 ಕೋಟಿ ಮೌಲ್ಯದ ಸ್ವಯಾರ್ಜಿತ ಆಸ್ತಿಯನ್ನೂ ಗೌಡರು ಹೊಂದಿದ್ದಾರೆ. ಮಕ್ಕಳ ಹೆಸರಿನಲ್ಲಿ ₹1.65 ಕೋಟಿ ಮತ್ತು ₹ 45.84 ಕೋಟಿ ಮೌಲ್ಯದ ಸ್ವಯಾರ್ಜಿತ ಸ್ಥಿರಾಸ್ತಿ ಇದೆ ಎಂದು ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.