ಉಜಿರೆ: ‘ಜೆಡಿಎಸ್ ಸಣ್ಣ ಪಕ್ಷ, ನಮ್ಮ ಪಕ್ಷಕ್ಕೆ ಜಗದೀಶ ಶೆಟ್ಟರ್ ಅವರಂತಹ ದೊಡ್ಡ ನಾಯಕರ ಅವಶ್ಯಕತೆಯಿಲ್ಲ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಶೆಟ್ಟರ್ ಅವರ ರಾಜೀನಾಮೆ ಬಿಜೆಪಿಯ ಆಂತರಿಕ ವಿಚಾರ. ಅವರೊಬ್ಬ ಅನುಭವಿ ರಾಜಕಾರಣಿ. ಜನಸಂಘ ಇರುವಾಗಿನಿಂದಲೇ ಬಿಜೆಪಿಗಾಗಿ ಕೆಲಸ ಮಾಡಿದವರು. ಅವರಂಥವರೇ ಇಂಥ ನಿರ್ಧಾರ ಕೈಗೊಂಡಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.