ADVERTISEMENT

ಜನ್ಮದಿನದಂದು ವ್ಹೀಲ್‌ಚೇರ್‌ನಲ್ಲಿ ಬಂದು ಮತ ಹಾಕಿದ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ

​ಪ್ರಜಾವಾಣಿ ವಾರ್ತೆ
Published 10 ಮೇ 2023, 6:23 IST
Last Updated 10 ಮೇ 2023, 6:23 IST
   

ಬೆಂಗಳೂರು: ಕೆನರಾ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಎಚ್.ಡಿ. ಪ್ರಸನ್ನಕುಮಾರ್ (64) ಅವರು ತಮ್ಮ ಜನ್ಮದಿನದ ಸಂಭ್ರಮದಲ್ಲಿಯೇ ಮತಗಟ್ಟೆಗೆ ವ್ಹೀಲ್‌ಚೇರ್‌ನಲ್ಲಿ ಬಂದು ಮತದಾನ ಮಾಡಿದರು.

ಬನಶಂಕರಿ 2ನೇ ಹಂತದ ನಿವಾಸಿ ಪ್ರಸನ್ನಕುಮಾರ್, ಪಾರ್ಶ್ವವಾಯು ಆಗಿದೆ. ನಡೆದಾಡಲು ಸಾಧ್ಯವಿಲ್ಲ. ಹೀಗಾಗಿ, ತಮ್ಮ ಪತ್ನಿ ಎಂ.ಸಿ. ರಜನಿ ಅವರ ಜೊತೆಗೆ ವ್ಹೀಲ್‌ಚೇರ್‌ನಲ್ಲಿ ಬಂದು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಮತ ಚಲಾಯಿಸಿದರು.

ಅವರ ಮಾವ ಎಂ.ಬಿ. ಚನ್ನಕೇಶ್ ಅವರು ಸಹ 85 ವಯಸ್ಸಿನಲ್ಲಿ ಮತಗಟ್ಟೆಗೆ ಬಂದು ಮತ ಹಾಕಿದರು.

ADVERTISEMENT

'ಮನೆಯಲ್ಲಿ ಮತದಾನ ಮಾಡಿದರೆ ಏನು ಕಳೆದುಕೊಂಡಂತೆ ಆಗುತ್ತದೆ. ಹೀಗಾಗಿ, ನಾನೇ ಕಾರು ಚಲಾಯಿಸಿಕೊಂಡು ಬಂದು ಅಳಿಯ ಪ್ರಸನ್ನ ಕುಮಾರ್ ಹಾಗೂ ಮಗಳು ರಜನಿ ಜೊತೆ ಮತದಾನ ಮಾಡಿದ್ದೇನೆ. ಎಲ್ಲರೂ‌ ಮತಗಟ್ಟೆಗೆ ಬಂದು ತಪ್ಪದೇ ಮತ ಚಲಾಯಿಸಿ' ಎಂದು ಚನ್ನಕೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.