ADVERTISEMENT

ಮತ ಹಾಕಿದ ಶತಾಯುಷಿಗೆ ಅಭಿನಂದಿಸಿದ ಮುಖ್ಯ ಚುನಾವಣಾ ಆಯುಕ್ತ

​ಪ್ರಜಾವಾಣಿ ವಾರ್ತೆ
Published 2 ಮೇ 2023, 16:15 IST
Last Updated 2 ಮೇ 2023, 16:15 IST
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಇಂಗಳಿ ಗ್ರಾಮದ ಮಹಾದೇವ ಮಹಾಲಿಂಗ ಮಾಳಿ (103) ಅವರು ಸೋಮವಾರ ಮನೆಯಿಂದಲೇ ಮತದಾನ ಮಾಡಿದರು
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಇಂಗಳಿ ಗ್ರಾಮದ ಮಹಾದೇವ ಮಹಾಲಿಂಗ ಮಾಳಿ (103) ಅವರು ಸೋಮವಾರ ಮನೆಯಿಂದಲೇ ಮತದಾನ ಮಾಡಿದರು   

ಬೆಳಗಾವಿ:‌ ಪ್ರಸಕ್ತ ವಿಧಾನಸಭಾ ಚುನಾವಣೆಗೆ ಮನೆಯಿಂದಲೇ ಮತ ಹಾಕಿದ ಶತಾಯುಷಿ (103 ವರ್ಷ 4 ತಿಂಗಳು) ಮಹಾದೇವ ಮಹಾಲಿಂಗ ಮಾಳಿ ಅವರಿಗೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್‌ ಅವರು ಮಂಗಳವಾರ ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ.

ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಇಂಗಳಿ ಗ್ರಾಮದ ಮಹಾದೇವ ಅವರು ಸೋಮವಾರ ತಮ್ಮ ಮನೆಯಿಂದಲೇ ಮತ ಚಲಾಯಿಸಿ ಗಮನ ಸೆಳೆದರು. ಈ ಮಾದರಿ ಕೆಲಸ ಗಮನಿಸಿದ ಮುಖ್ಯ ಚುನಾವಣಾ ಆಯುಕ್ತರು ಮೊಬೈಲ್‌ ಮೂಲಕ ಮಹದೇವ ಅವರಿಗೆ ಕರೆ ಮಾಡಿ ಮಾತನಾಡಿದರು.

‘ಮಹಾದೇವ ಮಾಳಿ ಅವರು ಮತದ ಮೌಲ್ಯ ಎತ್ತಿಹಿಡಿದಿದ್ದಾರೆ. ಅವರನ್ನು ಆದರ್ಶವಾಗಿ ಇಟ್ಟುಕೊಂಡು ಎಲ್ಲರೂ ಮತಗಟ್ಟೆಗೆ ತೆರಳಿ ಮತದಾನ ಮಾಡುವಂತಾಗಲಿ’ ಎಂದರು.‌

ADVERTISEMENT

‘ಮನೆಯಿಂದಲೇ ಮತದಾನ ಮಾಡಲು ಅವಕಾಶ ಕೊಟ್ಟಿದ್ದು ಒಳ್ಳೆಯದು. ಈ ಹಿಂದೆ ನಾನು ಗಾಲಿಕುರ್ಚಿಯಲ್ಲಿ ಕುಳಿತು ಮತಗಟ್ಟೆಗೆ ಹೋಗಬೇಕಾಗಿತ್ತು. ಈ ಸಂಕಷ್ಟ ತಪ್ಪಿಸಿದ್ದೀರಿ. ನಿಮಗೆ ಕೃತಜ್ಞತೆಗಳು’ ಎಂದು ಮಹಾದೇವ ಪ್ರತಿಕ್ರಿಯಿಸಿದ್ದಾರೆ.

ಏಪ್ರಿಲ್ 29ರಿಂದ ಇದು ವರೆಗೆ ಬೆಳಗಾವಿ ಜಿಲ್ಲೆಯಲ್ಲಿ 6,975 ಹಿರಿಯರು ಮತ್ತು 1,661 ಅಂಗವಿಕಲರು ಮನೆಯಿಂದಲೇ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಮಹಾದೇವ ಮಹಾಲಿಂಗ ಮಾಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.