ADVERTISEMENT

ಬೆಂಗಳೂರು: ಮನೆಯಿಂದ 4,459 ಮಂದಿ ಅಂಚೆ ಮತದಾನ

ನೋಂದಾಯಿಸಿದ್ದವರಲ್ಲಿ 18 ಮಂದಿ ಮರಣ; 16 ಮಂದಿ ಗೈರು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 16:00 IST
Last Updated 13 ಏಪ್ರಿಲ್ 2024, 16:00 IST
ಚುನಾವಣೆ ಸಿಬ್ಬಂದಿ ಮನೆಯಲ್ಲೇ ಕಲ್ಪಿಸಿದ್ದ ವ್ಯವಸ್ಥೆ ಮೂಲಕ 85ಕ್ಕೂ ಹೆಚ್ಚು ವಯಸ್ಸಿನವರು ಶನಿವಾರ ಅಂಚೆ ಮತದಾನ ಮಾಡಿದರು
ಚುನಾವಣೆ ಸಿಬ್ಬಂದಿ ಮನೆಯಲ್ಲೇ ಕಲ್ಪಿಸಿದ್ದ ವ್ಯವಸ್ಥೆ ಮೂಲಕ 85ಕ್ಕೂ ಹೆಚ್ಚು ವಯಸ್ಸಿನವರು ಶನಿವಾರ ಅಂಚೆ ಮತದಾನ ಮಾಡಿದರು   

ಬೆಂಗಳೂರು: ಬೆಂಗಳೂರು ಉತ್ತರ, ಕೇಂದ್ರ, ದಕ್ಷಿಣ, ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿರುವ 85 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಹಾಗೂ ಅಂಗವಿಕಲರಲ್ಲಿ 4,459 ಮಂದಿ ಮನೆಯಿಂದಲೇ ಶನಿವಾರ ಅಂಚೆ ಮತದಾನ ಚಲಾಯಿಸಿದರು.

ನಗರ ವ್ಯಾಪ್ತಿಯ 28 ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ 85 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ 7,556 ಹಾಗೂ 302 ಅಂಗವಿಕಲರು ಮನೆಯಿಂದ ಅಂಚೆ ಮತದಾನ ಮಾಡಲು ನೋಂದಾಯಿಸಿಕೊಂಡಿದ್ದರು. ಶನಿವಾರದಿಂದ ಮನೆಗಳಿಗೆ ಭೇಟಿ ನೀಡಿದ ಚುನಾವಣೆ ಅಧಿಕಾರಿಗಳ ತಂಡ, ಮತದಾನಕ್ಕೆ ಅನುವು ಮಾಡಿಕೊಡುತ್ತಿದೆ. ಒಂದೇ ದಿನದಲ್ಲಿ ಶೇ 56.74ರಷ್ಟು ಮತದಾನವಾಗಿದೆ.

ಇನ್ನೂ ಎರಡು ದಿನ ಚುನಾವಣೆ ಅಧಿಕಾರಿಗಳ ತಂಡ ನೋಂದಾಯಿತರ ಮನೆಗೆ ತೆರಳಿ ಮತದಾನಕ್ಕೆ ಅವಕಾಶ ನೀಡಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

18 ಮಂದಿ ಮರಣ: ಮನೆಯಿಂದ ಅಂಚೆ ಮತದಾನಕ್ಕೆ ನೋಂದಾಯಿಸಿಕೊಂಡವರಲ್ಲಿ 18 ಮಂದಿ ಮರಣ ಹೊಂದಿದ್ದಾರೆ. 16 ಮಂದಿ ಮನೆಯಲ್ಲಿರಲಿಲ್ಲ, ಇಬ್ಬರು ಮತದಾನ ಮಾಡಲು ನಿರಾಕರಿಸಿದರು ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.