ADVERTISEMENT

ಎನ್‌ಡಿಎ ಮೈತ್ರಿಕೂಟಕ್ಕೆ ಸರಳ ಬಹುಮತ: ವಿವಿಧ ಸಮೀಕ್ಷೆಗಳ ಅಭಿಮತ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 4:15 IST
Last Updated 10 ಏಪ್ರಿಲ್ 2019, 4:15 IST
   

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಬಹುಮತಕ್ಕಿಂತ 23 ಹೆಚ್ಚು (295) ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟವು 127 ಹಾಗೂ ಇತರರು 121 ಸ್ಥಾನಗಳನ್ನು ಗೆಲ್ಲಲಿದ್ದಾರೆ.

ಗುರುವಾರ ಮೊದಲ ಹಂತದ ಮತದಾನ ನಡೆಯಲಿದ್ದು, ಇಂಡಿಯಾ ಟಿವಿ–ಸಿಎನ್ಎಕ್ಸ್ ನಡೆಸಿ ಅಂತಿಮ ಸಮೀಕ್ಷೆ ಈ ರೀತಿ ಅಭಿಪ್ರಾಯಪಟ್ಟಿದೆ. ಇಂಡಿಯಾ ಟಿವಿ–ಸಿಎನ್ಎಕ್ಸ್ ಕಳೆದ ವಾರ ಪ್ರಕಟಿಸಿದ್ದ ಸಮೀಕ್ಷೆಯಲ್ಲಿ ಎನ್‌ಡಿಎ 275, ಯುಪಿಎ 147 ಮತ್ತು ಇತರರು 121 ಸ್ಥಾನ ಗೆಲ್ಲಲಿದ್ದಾರೆ ಎಂದು ಹೇಳಲಾಗಿತ್ತು.

ಸಮೀಕ್ಷೆ ನಡೆದ ಅವಧಿ: ಏಪ್ರಿಲ್ 1ರಿಂದ ಏಪ್ರಿಲ್ 5

ADVERTISEMENT

* 2014ರಲ್ಲಿ ಎನ್‌ಡಿಎ ಗೆದ್ದಿದ್ದ ಸ್ಥಾನಗಳು; 336

* 2014ರಲ್ಲಿ ಬಿಜೆಪಿ ಗೆದ್ದಿದ್ದ ಸ್ಥಾನಗಳು; 282

* ಈ ಬಾರಿ ಬಿಜೆಪಿ ಕಳೆದುಕೊಳ್ಳಲಿರುವ ಸ್ಥಾನ: 42

* 2014ರಲ್ಲಿ ಕಾಂಗ್ರೆಸ್ ಗೆದ್ದಿದ್ದ ಸ್ಥಾನಗಳು: 44

* ಈ ಬಾರಿ ಕಾಂಗ್ರೆಸ್ ಹೆಚ್ಚುವರಿಯಾಗಿ ಗೆಲ್ಲಲಿರುವ ಕ್ಷೇತ್ರಗಳು: 40
ಎನ್‌ಡಿಎ
ಶಿವಸೇನಾ 15; ಎಐಎಡಿಎಂಕೆ 10; ಜೆಡಿಯು 13; ಅಕಾಲಿದಳ 2;‍ಪಿಎಂಕೆ 2; ಎಲ್‌ಜೆಪಿ 3; ಇತರೆ ಸಣ್ಣ, ಪ್ರಾದೇಶಿಕ ಪಕ್ಷಗಳು 10

ಯುಪಿಎ
ಡಿಎಂಕೆ 16; ಆರ್‌ಜೆಡಿ 5; ಟಿಡಿಪಿ 5;ಇತರೆ ಸಣ್ಣ, ಪ್ರಾದೇಶಿಕ ಪಕ್ಷಗಳು 17

ತೃತೀಯರಂಗ+ ಇತರೆ
ಟಿಎಂಸಿ 29
ಎಸ್‌ಪಿ 15
ಬಿಎಸ್‌ಪಿ 13
ವೈಎಸ್‌ಆರ್‌ಸಿ 20
ಟಿಆರ್‌ಎಸ್ 14
ಬಿಜೆಡಿ 13
ಎಡಪಕ್ಷ 6
ಇತರೆ ಸಣ್ಣ, ಪ್ರಾದೇಶಿಕ ಪಕ್ಷಗಳು 11

ರಾಜ್ಯವಾರು ಸ್ಥಾನಗಳ ನಿರೀಕ್ಷೆ

ಕರ್ನಾಟಕ: ಬಿಜೆಪಿ 16; ಕಾಂಗ್ರೆಸ್ 10; ಜೆಡಿಎಸ್ 2
ಉತ್ತರ ಪ್ರದೇಶ:ಬಿಜೆಪಿ 46; ಬಿಎಸ್‌ಪಿ 13; ಎಸ್‌ಪಿ 15; ಕಾಂಗ್ರೆಸ್ 4; ಆರ್‌ಎಲ್‌ಡಿ 1; ಅಪ್ನಾದಳ 1
ರಾಜಸ್ಥಾನ:ಬಿಜೆಪಿ 19; ಕಾಂಗ್ರೆಸ್ 6
ಪಶ್ಚಿಮ ಬಂಗಾಳ:ಟಿಎಂಸಿ 29; ಬಿಜೆಪಿ 12; ಕಾಂಗ್ರೆಸ್ 1; ಎಡಪಕ್ಷ 0
ಮಧ್ಯಪ್ರದೇಶ: ಬಿಜೆಪಿ 23; ಕಾಂಗ್ರೆಸ್ 5
ಬಿಹಾರ: ಬಿಜೆಪಿ 15; ಆರ್‌ಜೆಡಿ 5; ಜೆಡಿಯು 13; ಕಾಂಗ್ರೆಸ್ 2; ಎಲ್‌ಜೆಪಿ 3; ಆರ್‌ಎಲ್ಎಸ್‌ಪಿ 1; ವಿಐಪಿ 1
ಗುಜರಾತ್: ಬಿಜೆಪಿ 24; ಕಾಂಗ್ರೆಸ್ 2
ಮಹಾರಾಷ್ಟ್ರ: ಬಿಜೆಪಿ 21; ಶಿವಸೇನೆ 15; ಕಾಂಗ್ರೆಸ್ 6; ಎನ್‌ಸಿಪಿ 6
ತಮಿಳುನಾಡು: ಡಿಎಂಕೆ 16; ಎಐಎಡಿಎಕೆ 10; ಕಾಂಗ್ರೆಸ್ 4; ಬಿಜೆಪಿ 1; ಪಿಎಂಕೆ 2; ಇತರೆ 6
ಆಂಧ್ರಪ್ರದೇಶ: ವೈಎಸ್‌ಆರ್‌ಸಿ 20; ಟಿಡಿಪಿ 5
ತೆಲಂಗಾಣ: ಟಿಆರ್‌ಎಸ್ 14; ಎಐಎಂಐಎಂ 1; ಕಾಂಗ್ರೆಸ್ 2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.